Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶರನ್ನವರಾತ್ರಿ ಸಂಭ್ರಮಕ್ಕೆ ನೃತ್ಯೋತ್ಸವ ವೈಭವ..!!

Dhrishya News by Dhrishya News
25/10/2023
in ಕರಾವಳಿ, ಸುದ್ದಿಗಳು
0
0
SHARES
25
VIEWS
Share on FacebookShare on Twitter

ಉಡುಪಿ, ಅ. 25:ದ್ರಶ್ಯ ನ್ಯೂಸ್:ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನಿರಂತರ ಜೋಡಿ ಚಂಡಿಕಾಯಾಗ, ದೀಪಾರಾಧನೆ ಸಹಿತ ರಂಗಪೂಜೆ, ವಿವಿಧೆಡೆಗಳ ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ವೈಭವಗಳು ಹಾಗೂ ನೃತ್ಯೋತ್ಸವವು ವೈಭವದಿಂದ ನೆರವೇರಿತು.

ಸಾತ್ವಿಕ್ ಪ್ರಭು ಉಡುಪಿ ಮತ್ತು ಮುಂಬಯಿಯ ಶ್ರದ್ಧಾ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸೋಮವಾರ ಸಮರ್ಪಿಸಲ್ಪಟ್ಟಿತು. ಬೆಂಗಳೂರಿನ ಅನಿಲ್ ಅವರ ಸೇವಾರ್ಥವಾಗಿ ಕಲ್ಪೋಕ್ತ ಸಹಿತ ದುರ್ಗಾನಮಸ್ಕಾರ ಪೂಜೆ ನಡೆಯಿತು.

ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿಯವರು ಸ್ವಸ್ತಿಕ್ ಆಚಾರ್ಯರ ಸಹಕಾರದೊಂದಿಗೆ ಶ್ರೀ ದೇವಿಯನ್ನು ಸಿದ್ಧಿಧಾತ್ರಿಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಭಟ್ ಪೂಜಾ ವಿಧಿವಿಧಾನ ನಡೆಸಿದರು.

ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ರಿದ್ದಿ, ಯಶಸ್ವಿನಿ, ಅನ್ನಪೂರ್ಣಿ, ಅಂಶಿಕಾ, ಅದ್ವಿತಾ, ಸುಫಲತಾ ದೇವಿ, ಹರಿಪ್ರಿಯಾ, ಮಣಿಪಾಲ ಎಂಐಟಿ ವಿದ್ಯಾಾರ್ಥಿ ಈಶಾನ್ ಕೌಂಡಿನ್ಯ ಹಾಗೂ ಪ್ರಸಿದ್ಧ ನೃತ್ಯ ಸಂಸ್ಥೆಗಳ ನೃತ್ಯಾರ್ಥಿಗಳು ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ಬೆಂಗಳೂರಿನ ಶಾಂತಲಾ ಆರ್ಟ್ಸ್‌ ಅಕಾಡೆಮಿಯ ಶ್ರವಣ್ ಯು.ಬಿ. ಅವರಿಂದ ನೃತ್ಯ ವೈವಿಧ್ಯ, ಕಾಸರಗೋಡು ದುರ್ಗಾ ಅಕಾಡೆಮಿಯ ಕಲಾವಿದರಿಂದ ಬೆಳಗ್ಗಿನಿಂದ ಸಂಜೆಯ ತನಕ ಸಾಂಸ್ಕೃತಿಕ ವೈಭವ ಜರಗಿತು.

ಗಾನ ನಾಟ್ಯ ಪ್ರಿಯಳಾದ ಶ್ರೀದೇವಿಗೆ ಈ ಬಾರಿ ಸೇವಾರ್ಥಿಗಳಿಂದ ನಾದ ಸೇವೆಯೂ ಸಮರ್ಪಿಸಲ್ಪಟ್ಟಿತು. ವಿ ನಿಕ್ಷಿತ್ ಪುತ್ತೂರು ಅವರಿಂದ ಮೃದಂಗ ವಾದನ, ಅದಿತಿ ಮತ್ತು ಮಹತಿ ಅವರಿಂದ ವಯೋಲಿನ್ ವಾದನ, ನಿರೀಕ್ಷಾ ಅವರಿಂದ ವೀಣಾ ವಾದನ, ವಿಜಯ ಶೇರಿಗಾರ್ ಅವರಿಂದ ಸ್ಯಾಕ್ಸೋಫೋನ್ ವಾದನ, ಮುರಳೀಧರ ಮುದ್ರಾಡಿ ಅವರಿಂದ ನಾದಸ್ವರ, ವಿವಿಧ ಸಿಂಗಾರಿ ಮೇಳಗಳಿಂದ ಚೆಂಡೆ ವಾದನ ಹಾಗೂ ವಿವಿಧ ಭಜನ ಮಂಡಳಿಯಿಂದ ಕುಣಿತ ಭಜನೆ ಜರಗಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

ಪ್ರತ್ಯಕ್ಷ ರಾಜೋಪಚಾರ ಪೂಜೆ
ನೃತ್ಯ, ಗೀತಾ, ಸ್ತೋತ್ರ, ವಾದ್ಯ, ವಾಹನಾದಿಗಳು ರಾಜೋಪಚಾರ ಪೂಜೆ ಎನಿಸಲ್ಪಡುತ್ತವೆ. ವೇದ ಕಾಲದಿಂದಲೇ ಸೃಷ್ಟಿಯಾದ ರಾಜೋಪಚಾರ ಪೂಜೆಗಳು ಬಹುತೇಕ ಕಡೆಗಳಲ್ಲಿ ಮಂತ್ರೋಚ್ಛಾರಗಳಿಂದ ನಡೆದರೆ ಈ ಕ್ಷೇತ್ರದಲ್ಲಿ ‘ಪ್ರತ್ಯಕ್ಷ ರಾಜೋಪಚಾರ ಪೂಜೆ’ಯಾಗಿ ಸಮರ್ಪಿಸಲ್ಪಡುತ್ತಿದೆ. ಕಲಿಯುಗದಲ್ಲಿ ದೇವರನ್ನು ಮುದಗೊಳಿಸಲು, ಸಂಪ್ರೀತಿಗೊಳಿಸಲು ಇರುವ ಸುಲಭವಾದ ಸಾಧನವಾಗಿ ಇದು ಪರಿಗಣಿಸಲ್ಪಟ್ಟಿದೆ.

ಕಲಾವಿದರು ತಮ್ಮ ಕಲಾ ಸಾಧನೆ ಮತ್ತು ಯಶಸ್ಸಿಗಾಗಿ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸಿ ಬದುಕಿನಲ್ಲಿ ಮನದಿಚ್ಛೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.

Tags: #ಉಡುಪಿ#ದೊಡ್ಡಣಗುಡ್ಡೆ#ನ್ಯೂಸ್
Previous Post

ಮೈಸೂರು ದಸರಾ : ಜಾನಪದ ನೃತ್ಯದ 40 ಪ್ರಕಾರಗಳ ಪ್ರದರ್ಶನ..!!

Next Post

ಉಚ್ಚಿಲ : ಗ್ರಾಮ ಪಂಚಾಯತ್ ಗೆ ಆಂಬುಲೆನ್ಸ್ ಹಸ್ತಾಂತರ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಚ್ಚಿಲ : ಗ್ರಾಮ ಪಂಚಾಯತ್ ಗೆ ಆಂಬುಲೆನ್ಸ್ ಹಸ್ತಾಂತರ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಚ್ಚಿಲ ದಸರಾ–2026ಕ್ಕೆ ಅದ್ಧೂರಿ ಸಿದ್ಧತೆ: ಅ.11ರಿಂದ 21ರವರೆಗೆ ವೈವಿಧ್ಯಮಯ ಕಾರ್ಯಕ್ರಮ

ಉಚ್ಚಿಲ ದಸರಾ–2026ಕ್ಕೆ ಅದ್ಧೂರಿ ಸಿದ್ಧತೆ: ಅ.11ರಿಂದ 21ರವರೆಗೆ ವೈವಿಧ್ಯಮಯ ಕಾರ್ಯಕ್ರಮ

09/10/2026
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಸಬ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸಲು ಇಂಧನ ಸಚಿವ ಕೆ. ಜೆ. ಜಾರ್ಜ್ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಸಬ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸಲು ಇಂಧನ ಸಚಿವ ಕೆ. ಜೆ. ಜಾರ್ಜ್ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

09/10/2026
ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

07/10/2026
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026

Recent News

imunify-bot-check