Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕುಂದಾಪುರ : ರೈಲು ನಿಲ್ದಾಣದಲ್ಲಿ ಇಂದಿನಿಂದ ಪ್ರಿಪೈಡ್ ಆಟೋ ರಿಕ್ಷಾ ಕೌಂಟರ್ ಆರಂಭ..!!

Dhrishya News by Dhrishya News
09/10/2023
in ಕರಾವಳಿ, ಸುದ್ದಿಗಳು
0
0
SHARES
39
VIEWS
Share on FacebookShare on Twitter

ಕುಂದಾಪುರ :ಅಕ್ಟೋಬರ್ 09: ದ್ರಶ್ಯ ನ್ಯೂಸ್:ಪ್ರಿಪೈಡ್ ಆಟೋ ರಿಕ್ಷಾ ಕೌಂಟರ್ ಕುಂದಾಪುರ ರೈಲು ನಿಲ್ದಾಣದಲ್ಲಿ ಇಂದಿನಿಂದ (ಅಕ್ಟೋಬರ್ 09 )ಆರಂಭಗೊಳ್ಳಲಿದ್ದು, ಈ ಮೂಲಕ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಗೋವಾ, ಕೇರಳಗಳಿಂದ ಬರುವ ಅಸಂಖ್ಯಾತ ರೈಲು‌ ಪ್ರಯಾಣಿಕರಿಗೆ ಈ‌ ಪ್ರಿಪೈಡ್ ಆಟೋ ರಿಕ್ಷಾ ಕೇಂದ್ರ ವರದಾನವಾಗಲಿದೆ.

ಕಳೆದ ಹಲವಾರು ವರ್ಷಗಳಿಂದ ಪತ್ರಿಕೆಗಳ ವಾಚಕರ ವಿಭಾಗ ಹಾಗು ಪುರವಣಿಗಳಲ್ಲಿ ಸಾರ್ವಜನಿಕರ ಪ್ರಿಪೈಡ್ ಬೇಡಿಕೆ ನಿರಂತರವಾಗಿ ಬರುತಿದ್ದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಪ್ರಿಪೈಡ್ ಆಟೋ ಟೆಂಡರ್ ಕರೆದಿತ್ತು. ಇದರ ಜತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಯೋಜಿಸಿದ್ದ ಕೊಂಕಣ ರೈಲ್ವೆ ಅದಿಕಾರಿಗಳ ಸಭೆಯಲ್ಲೂ ಪ್ರಯಾಣಿಕರ ದೂರು ದುಮ್ಮಾನಗಳ ಆಲಿಸುವಿಕೆಯ ಸಂದರ್ಭದಲ್ಲೂ ಪತ್ರಿಕಾ ಮಾದ್ಯಮಗಳು ಜನರ ಸಮಸ್ಯೆಯನ್ನು ಅದಿಕಾರಿಗಳ ಮುಂದಿಟ್ಟಿದ್ದರು.

ಕುಂದಾಪುರ ರೈಲು‌ ನಿಲ್ದಾಣದಲ್ಲಿ ಇಳಿದು ಯಾವುದೇ ಭಾಗಕ್ಕೂ ರಾಜ್ಯ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಆಟೋ ಬಾಡಿಗೆಗೆ ಲಭ್ಯವಾಗಲಿದೆ.

ಕುಂದಾಪುರ ರೈಲು‌ ನಿಲ್ದಾಣದ ಹಲವಾರು ಜನ ರಿಕ್ಷಾ ಚಾಲಕರು ಪ್ರಯಾಣಿಕರ ದೂರು ಗೊಂದಲಗಳ ನಿವಾರಿಸಲು ಪ್ರಿಪೈಡ್ ಅಟೋ ಆರಂಭವಾಗಲಿ ಎಂದೇ ಬಯಸಿದ್ದು‌ ಕುಂದಾಪುರ ರೈಲು ಪ್ರಯಾಣಿಕರ‌ ಹಿತರಕ್ಷಣಾ ಸಮಿತಿಯ ಗಮನಕ್ಕೆ ತಂದಿದ್ದರು‌.

ಪ್ರಿಪೈಡ್ ಆಟೋ ಆರಂಭವಾಗುವ ಮೂಲಕ ಪ್ರಯಾಣಿಕರು ಮನೆಗಳಿಂದ ಅಥವಾ ಪರಿಚಯದ ವಾಹನಗಳನ್ನು ನಿಲ್ದಾಣಕ್ಕೆ ಮುಂಚಿತವಾಗಿ ಬರ ಹೇಳ ಬೇಕಾದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದ್ದು ಈ ಮೂಲಕ ನಿಲ್ದಾಣದ ಪರಿಸರದ ಅಟೋ ಚಾಲಕರಿಗೇ ಬಾಡಿಗೆ ಹೆಚ್ವಾಗುವ ಆಶಾ ಭಾವನೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಗಿದೆ.

ಗೋವಾ ಬೆಂಗಳೂರಿನಿಂದ ಬರುವ ಟಿಕೇಟ್ ದರಕ್ಕಿಂತ ನಿಲ್ದಾಣದಿಂದ ಕುಂದಾಪುರಕ್ಕೆ ತೆರಳುವ ಅಟೋ ಬಾಡಿಗೆ ಜಾಸ್ತಿ ಎಂಬ ಬಗ್ಗೆ ನಿರಂತರವಾಗಿ ಸಮಾಜಿಕ ಜಾಲತಾಣಗಳಲ್ಲಿ ಬರುತಿದ್ದ ದೂರುಗಳಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದ್ದು ಜನಸಾಮಾನ್ಯರು ಈ ಸೌಲಭ್ಯದ ಸದುಪಯೋಗ ಪಡೆಯ ಬಹುದು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ತಿಳಿಸಿದೆ.

Tags: #ಕುಂದಾಪುರ#ಆರಂಭ#ನ್ಯೂಸ್
Previous Post

ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌: ಕಾರ್ಕಳದ ಆಯುಷ್ ಶೆಟ್ಟಿ ಗೆ ಕಂಚಿನ ಪದಕ ..!!

Next Post

ಇಂದು ತೆಲಂಗಾಣ, ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಇಂದು ತೆಲಂಗಾಣ, ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

04/10/2026
ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

04/10/2026
ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

03/10/2026
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026

Recent News

imunify-bot-check