Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಕುರಿ ಮಂಡಿಯ ದಲಿತಕೇರಿಯಲ್ಲಿ ಪೇಜಾವರ ಶ್ರೀ ಸಾಮರಸ್ಯ ನಡಿಗೆ..!!

ಭಕ್ತಿ ಉತ್ಸಾಹದಿಂದ ಮಿಂದೆದ್ದ ನಿವಾಸಿಗಳು..!!

Dhrishya News by Dhrishya News
28/09/2023
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
11
VIEWS
Share on FacebookShare on Twitter

ಮೈಸೂರು : ಸೆಪ್ಟೆಂಬರ್ 27 ಮಂಗಳವಾರ  ಪೇಜಾವರ ಶ್ರೀಗಳು ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯ ನಡೆಯನ್ನು ನಡೆಸಿದ್ದು ಅಲ್ಲಿನ ನೂರಾರು ನಿವಾಸಿಗಳು ಶ್ರೀಗಳ ಆಗಮನ ದರ್ಶನ ಮನೆ ಭೇಟಿ ರಾಮನಾಮ‌ಜಪ ಮಂಗಳಾರತಿ ಉಭಯ ಕುಶಲೋಪರಿ ಅನುಗ್ರಹದ ಶುಭ ನುಡಿಗಳಿಂದ ಅಕ್ಷರಶಃ ಭಕ್ತಿ ಉತ್ಸಾಹಗಳಿಂದ ಮಿಂದೆದ್ದರು.

ಮೈಸೂರಿನ ಸಂಘ ಪರಿವಾರದ ಧರ್ಮ‌ಜಾಗರಣ ಮತ್ತು ಸಾಮರಸ್ಯ ವೇದಿಕೆಗಳು ಹಾಗೂ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಿತಿಯ ಸಂಯುಕ್ತ ಸಂಯೋಜನೆಯಲ್ಲಿ ಮೈಸೂರಿನ ಕೆಸರೆ ರಾಜೇಂದ್ರ ನಗರದ ದಲಿತರ ಕೇರಿಯಲ್ಲಿ ಮಂಗಳವಾರ ಸಂಜೆ ಶ್ರೀಗಳ ಭೇಟಿ ಹಿಂದು ಧರ್ಮಜಾಗೃತಿಯ ಸಂದೇಶವನ್ನು ಮೂಡಿಸುಲ್ಲಿ ಅತ್ಯಂತ ಯಶ ಕಂಡಿದೆ

ಬಡಾವಣೆಯುದ್ದಕ್ಕೂ ನಿವಾಸಿಗಳು ರಸ್ತೆಯನ್ನು ಸ್ವಚ್ಛಗೊಳಿಸಿ , ಸಾಲು ಸಾಲು ರಂಗೋಲಿ ಹಾಕಿ , ಕ್ವಿಂಟಾಲ್ ಗಟ್ಟಲೆ ಹೂವಿನ ರಾಶಿಯನ್ನು ಸ್ವಾನೀಜಿಯವರ ಮೇಲೆ ಮಳೆಗೈದು ಬರಮಾಡಿಕೊಂಡ ದೃಶ್ಯವೇ ಅವರೆಲ್ಲರ ಭಕ್ತಿ ಸಡಗರಗಳಿಗೆ ಸಾಕ್ಷಿಯಾಗಿತ್ತು.

ನಿವಾಸಿಗಳ ಪ್ರಮುಖರು ಕೇರಿಯ ದ್ವಾರದಲ್ಲಿ ನಿರಂತರ ಭಾರತ ಮಾತೆ , ಹಿಂದೂ ಧರ್ಮ ಶ್ರೀ ರಾಮ ಶ್ರೀ ಕೃಷ್ಣರಿಗೆ ಜೈಕಾರ ಮೊಳಗಿಸುತ್ತಾ ಸ್ಯಾಕ್ಸೋಫೋಬ್ ವಾದನ ಚಂಡೆ ಭಜನೆಗಳ ಮೂಲಕ ಸ್ವಾಮೀಜಿಯವರ ಪಾದ ತೊಳೆದು ಓಕುಳಿಯಾರತಿ ಬೆಳಗಿ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು . ಮುಂದೆ ಶಂಡದ್ದೆಲ್ಲ ಹಬ್ಬದ ವಾತಾವರಣ . ಐದಾರು ಮನೆಯೊಳಗೆ ಪ್ರವೇಶಿಸಿ ರಾಮದೀಪ ಬೆಳಗಿ ಮನೆ ಮಂದಿಯ ಪರಿಚಯ ಮಾಡಿಕೊಂಡು ಉಭಯಕುಶಲೋಪರಿ ನಡೆಸಿ ಹಿಂದು ಸಂಸ್ಕಾರಗಳನ್ನು ನಿತ್ಯ ನಡೆಸಿಕೊಂಡು ಬರುವಂತೆ ಸೂಚಿಸಿ ಆಶೀರ್ವಾದಗೈದರು.

ಬಳಿಕ ಬಡಾವಣೆಯ ಎರಡು ಮೂರು ಮಂದಿರಗಳಿಗೂ ತೆರಳಿ ಮಂಗಳಾರತಿ ಬೆಳಗಿದರು ‌ಬಳಿಕ ಅಲ್ಲೇ ಮಂದಿರದ ಅರಳಿ ಕಟ್ಟೆಯ ಬಳಿ ನಡೆದ ಧರ್ಮಸಭೆಯಲ್ಲೂ ಅನುಗ್ರಹ ಸಂದೇಶ ನೀಡಿದ ಶ್ರೀಗಳು ತಮ್ಮನ್ನು ಈ ದಿನ ಬರಮಾಡಿಕೊಂಡು ತೋರಿದ ಪ್ರೀತಿ ಅಭಿಮಾನಗಳಿಂದ ಮನತುಂಬಿ ಬಂದಿದೆ .ಈ ನಗೆಯ ಧರ್ಮ ಶ್ರದ್ಧೆಯನ್ನು ಜೀವನ ಪರ್ಯಂತ ಅಳವಡಿಸಿಕೊಂಡು ರಾಮ‌ಕೃಷ್ಣ ಸಹಿತ ನಮ್ಮ‌ದೇವ ದೇವತೆಯರ ಗುರು ಹಿರಿಯರ ಸ್ಮರಣೆಗಳನ್ನು ನಿತ್ಯ ನಿರಂತರ ಮಾಡಿಕೊಂಡು ಬರುವಂತೆ ತಿಳಿಸಿದರು.

ಉದ್ಯಮಿ ವಾಸುದೇವ ಭಟ್ ಸಂಘಪರಿವಾರದ ಅಕ್ಷಯ್ , ಗಣೇಶ್ ಶೆಣೈ , ಸೇರಿದಂತೆ ಗಣ್ಯ ಮಹನೀಯರು ಉಪಸ್ಥಿತರಿದ್ದರು .

ಕುರಿಮಂಡಿ ಬಡಾವಣೆಯ ಮುಖಂಡರಾದ ದೊರೆ , ನಾಗರಾಜು, ವಿನೋದ್ ಕುಮಾರ್ , ವೇಲು, ಕಾರ್ತಿಕ್ ಮತ್ತು ಸಾಮರಸ್ಯ ವಿಭಾಗದ ಡಾ ಆನಂದ್ ಕುಮಾರ್ , ಗಿರೀಶ್ , ಸಾಮಾಜಿಕ ನ್ಯಾಯ ವೇದಿಕೆಯ ಶಾಮ್ ಭಟ್ , ಶ್ರೀಗಳ ಆಪ್ತರಾದ ಕೃಷ್ಣ ಭಟ್ ವಾಸುದೇವ ಭಟ್ , ಶ್ರೀನಿವಾಸ ಪ್ರಸಾದ್ , ಮೊದಲಾದವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಯೋಜಿಸಿದರು . ಎಲ್ಲ ಮನೆಗಳಿಗೆ ಶ್ರೀ ಮಠದ ವತಿಯಿಂದ ಶ್ರೀ ಕೃಷ್ಣ ಪ್ರಸಾದ ವನ್ನು ವಿತರಿಸಲಾಯಿತು .

Previous Post

ಉಡುಪಿ : ಜಿಲ್ಲಾಡಳಿತ, ಸರಕಾರದ ನೀತಿಗಳನ್ನು ಖಂಡಿಸಿ ಲಾರಿ ಹಾಗೂ ಟೆಂಪೋ ಚಾಲಕ ಮಾಲಕರ ಅನಿರ್ದಿಷ್ಟವಾದಿ ಮುಷ್ಕರ..!!

Next Post

ಮಲ್ಪೆ :ನರ ಸಂಬಂಧಿ ಕಾಯಿಲೆಯಿಂದ 5ನೇ ತರಗತಿ ವಿದ್ಯಾರ್ಥಿನಿ ಸಾವು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಲ್ಪೆ :ನರ ಸಂಬಂಧಿ ಕಾಯಿಲೆಯಿಂದ 5ನೇ ತರಗತಿ ವಿದ್ಯಾರ್ಥಿನಿ ಸಾವು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಎಸ್.ಐ.ಆರ್. ಅಭಿಯಾನ ಯಶಸ್ವಿಗೊಳಿಸಲು ಸನ್ನದ್ಧರಾಗಿ : ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್

ಎಸ್.ಐ.ಆರ್. ಅಭಿಯಾನ ಯಶಸ್ವಿಗೊಳಿಸಲು ಸನ್ನದ್ಧರಾಗಿ : ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್

25/06/2026
ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026

Recent News

ಎಸ್.ಐ.ಆರ್. ಅಭಿಯಾನ ಯಶಸ್ವಿಗೊಳಿಸಲು ಸನ್ನದ್ಧರಾಗಿ : ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್

ಎಸ್.ಐ.ಆರ್. ಅಭಿಯಾನ ಯಶಸ್ವಿಗೊಳಿಸಲು ಸನ್ನದ್ಧರಾಗಿ : ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್

25/06/2026
ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವದ ಕಾರ್ಡ್ ವಿತರಣೆ

24/06/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಮತ್ತು ಜೀವಕೋಶ ಚಿಕಿತ್ಸಾ ಘಟಕ (BHIM) ಉದ್ಘಾಟನೆ

24/06/2026
“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

“ಆರೋಗ್ಯಪೂರ್ಣ ಆಹಾರ ಪದ್ಧತಿ” ಕಾರ್ಯಗಾರ

24/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved