Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಬೆಂಗಳೂರು : ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ…!!!

Dhrishya News by Dhrishya News
26/09/2023
in ಕರಾವಳಿ, ಸುದ್ದಿಗಳು
0
0
SHARES
11
VIEWS
Share on FacebookShare on Twitter

⭕️ಡಿಜಿಟಲ್ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಸೆಪ್ಟೆಂಬರ್ 26: ದೃಶ್ಯ ನ್ಯೂಸ್ : ಸ್ಮಾರಕಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿರುವ ದತ್ತು ಯೋಜನೆಗೆ ಸ್ಪಂದಿಸಿರುವ ಹಲವು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ “ನಮ್ಮ ಸ್ಮಾರಕ ನಮ್ಮ ಪರಂಪರೆ ನಮ್ಮ ಗುರುತು ನಮ್ಮ ಹೆಮ್ಮೆ” ಅಭಿಯಾನದ ಸಂವಾದ ಮತ್ತು ಡಿಜಿಟಲ್ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

ಹೊಯ್ಸಳರ ವಾಸ್ತುಶಿಲ್ಪದ ಸಮಗ್ರ ಭಾಗಗಳನ್ನು ಇನ್‌ಟ್ಯಾಕ್‌ ಸಂಸ್ಥೆ, ವೆಂಕಟಪ್ಪ ಚಿತ್ರಶಾಲೆಯ ನವೀಕರಣಕ್ಕೆ ಬ್ರಿಗೇಡ್ ಸಂಸ್ಥೆ, ಯೋಜನಾ ನಿರ್ವಹಣೆ ಘಟಕದ ಅಭಿವೃದ್ಧಿಗೆ ಕಲ್ಕಿ ಸಂಸ್ಥೆಗಳು ಸಮ್ಮತಿ ನೀಡಿದವು. ಸಂರಕ್ಷಣಾ ಸ್ಮಾರಕಗಳ ಯೋಜನೆಗೆ ಒಳಪಡಲು ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಇಲಾಖೆಯಿಂದ ಆಶಯಪತ್ರ ವಿತರಿಸಲಾಯಿತು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು.

ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆದರೆ ನಾಡಿನ ಸಾಂಸ್ಕೃತಿಕ‌ ಹಿರಿಮೆ ಹೆಚ್ಚುತ್ತದೆ. ಆರ್ಥಿಕತೆಗೆ ಚೈತನ್ಯ ಬರುತ್ತದೆ. ಸ್ಮಾರಕಗಳ ರಕ್ಷಣೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು ಎಂದರು.

ಶಕ್ತಿ ಯೋಜನೆಯಿಂದಾಗಿ ಸಾಮಾನ್ಯ ಮಹಿಳೆಯರೂ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. 60 ಲಕ್ಷ ಮಹಿಳೆಯರು ಯೋಜನೆ ಫಲವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ ಹಾಗೂ ಕಲ್ಕಿ ಫೌಂಡೇಶನ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಮೊದಲಾದವರು ಉಪಸ್ಥಿತರಿದ್ದರು.

Tags: #ಬೆಂಗಳೂರು#ಸಿದ್ದರಾಮಯ್ಯ#ಉದ್ಘಾಟನೆ
Previous Post

ಮೈಸೂರಿನ ದಲಿತರ ಕೇರಿಯಲ್ಲಿ ಪೇಜಾವರ ಶ್ರೀಗಳ ಮಿಂಚಿನ ಸಂಚಾರ..!!

Next Post

ಉಡುಪಿ : ಇಂದ್ರಾಳಿಯ ರೈಲ್ವೆ ಅಧಿಕಾರಿಗಳು ಹಾಗೂ ಒಳಕಾಡುರವರ ಸಮಯಪ್ರಜ್ಞೆಯಿಂದ ಬದುಕಿದ ಬಾಲಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಇಂದ್ರಾಳಿಯ ರೈಲ್ವೆ ಅಧಿಕಾರಿಗಳು ಹಾಗೂ ಒಳಕಾಡುರವರ ಸಮಯಪ್ರಜ್ಞೆಯಿಂದ ಬದುಕಿದ ಬಾಲಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

07/10/2026
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026
ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

06/10/2026
ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

06/10/2026

Recent News

imunify-bot-check