ಕಾರ್ಕಳ :ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ಪರಿಚಯಿಸಿದ ಜನಪ್ರಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರು ನಡೆಸುತ್ತಿರುವ ಸುಳ್ಳು ಅಪಪ್ರಚಾರಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸ್ ನೇತೃತ್ವದಲ್ಲಿ “ಸತ್ಯಮೇವ ಜಯತೆ” ಬೃಹತ್ ಸಮಾವೇಶವು ನಡೆಯಲಿದೆ. ಜನರ ಜೀವನಮಟ್ಟ ಸುಧಾರಿಸುವಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯು ಮಹತ್ವದ ಪಾತ್ರವಹಿಸಿದ್ದು ಇಂದು ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಗೂ ಕೋಟ್ಯಾಂತರ ರೂಪಾಯಿ ಅನುದಾನವು ನೇರವಾಗಿ ಜನರಿಗೆ ಹರಿದು ಬರುತ್ತಿದ್ದು ಇದೂ ಕೂಡ ಅಭಿವೃದ್ಧಿ ಕಾರ್ಯವೇ ಆಗಿದೆ. ಇಷ್ಟೆಲ್ಲಾ ಅನುಧಾನಗಳನ್ನು ರಾಜ್ಯ ಸರ್ಕಾರ ನೀಡುತ್ತಿದ್ದರೂ ಜಿಲ್ಲೆಯ ಬಿಜೆಪಿ ಶಾಸಕರುಗಳು ಅನಾವಶ್ಯಕ ಸುಳ್ಳು ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಕಾರ್ಕಳದ ಜನತೆಗೆ ಸತ್ಯ ದರ್ಶನ ಮಾಡುವ ಸಲುವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಕಳ ತಾಲೂಕು ಕಚೇರಿ ಮುಂಬಾಗದಲ್ಲಿ ನಾಳೆ ದಿನಾಂಕ: 08.10.2026 ಗುರುವಾರದಂದು ಬೆಳಿಗ್ಗೆ 10.30 ಗಂಟೆಗೆ “ಸತ್ಯಮೇವ ಜಯತೆ” ಎನ್ಮುವ ಬೃಹತ್ ಕಾರ್ಯಕ್ರಮ ನಡೆಯಲಿದೆ, ಸತ್ಯಾಂಶವನ್ನು ತಿಳಿಯಲು ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ
ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಉತ್ತರ ನೀಡಬೇಕಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







