Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ : ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ..!!

Dhrishya News by Dhrishya News
22/09/2023
in ಕರಾವಳಿ, ಸುದ್ದಿಗಳು
0
0
SHARES
112
VIEWS
Share on FacebookShare on Twitter

ಉಡುಪಿ : ಸೆಪ್ಟೆಂಬರ್ 22 : ದೃಶ್ಯ ನ್ಯೂಸ್ : ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಟಿ. ನಾರಾಯಣಗೌಡ ಬಣ) ಉಡುಪಿ ಜಿಲ್ಲಾ ಕಾರ್ಯಕರ್ತರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದರು.

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ವಾಡಿಕೆಯಂತೆ ಮಳೆ ಆಗಿಲ್ಲ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವೇ ಘೋಶಿಸಿದ್ದು, ನಮ್ಮ ರಾಜ್ಯದ ಬೆನ್ನೆಲುಬಾಗಿರುವ ರೈತರ ಜೀವನದಿ ಕಾವೇರಿಯ ನೀರು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಛೇರಿಯ ಗೇಟ್ ಬಳಿಯೇ ಮಣಿಪಾಲ ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನೆ ಕೈ ಬಿಟ್ಟು ವಾಪಸು ಹೋಗಿ ಎಂದು ಪೊಲೀಸರು ಎಚ್ಚರಿಸಿದರು.

ಅದಕ್ಕೆ ಒಪ್ಪದ ಕಾರ್ಯಕರ್ತರು, ಸ್ಥಳದಲ್ಲಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಪೊಲೀಸರನ್ನು ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.

ಇದೇ ಸಂದರ್ಭದಲ್ಲಿ ಪೊಲೀಸರು, ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಸೇರಿದಂತೆ ಕಾರ್ಯಕರ್ತರಾದ ಸುಂದರ್ ಬಂಗೇರ, ಗೀತಾ ಪಾಂಗಾಳ, ಜಯ ಪೂಜಾರಿ, ಸಂತೋಷ ಕುಲಾಲ್, ದೇವಕಿ ಬಾರ್ಕೂರ್, ಸಿದ್ದಣ್ಣ ಎಸ್. ಪೂಜಾರಿ, ಕೃಷ್ಣ ಪಾಂಗಾಳ, ಜ್ಯೋತಿ, ಜ್ಯೋತಿ ಆರ್, ಎಸ್. ಆರ್. ಲೋಬೋ ರಾಘವೇಂದ್ರ ನಾಯಕ್, ಪ್ರಮೋದ್ ಕುಲಾಲ್, ಜಯ ಸಾಲ್ಯಾನ್, ಸರಿತಾರವರನ್ನು ವಶಕ್ಕೆ ಪಡೆದರು. ಎಲ್ಲರನ್ನೂ ಪೊಲೀಸ್ ವಾಹನದಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.

ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ಬರಗಾಲವಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ಜನರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಜನರ ಆಗ್ರಹವನ್ನು ಧಿಕ್ಕರಿಸಿ ನೀರು ಹರಿಸಿದರೆ, ಗಂಭೀರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಕರವೇ ಕಾರ್ಯಕರ್ತರು ಎಚ್ಚರಿಸಿದರು.
ವರದಿ :ಅನುಷಾ ಆಚಾರ್ ಪಳ್ಳಿ

Tags: #ಉಡುಪಿ#ಕರವೇ#ಪೊಲೀಸ್ ವಶ
Previous Post

ಮಂಗಳೂರು MRPL ವತಿಯಿಂದ ಶಾಲೆಗೆ ಬಸ್ ಕೊಡುಗೆ ..!!

Next Post

ಉಚ್ಚಿಲ ದಸರಾ-2023 “ಯುವ ದಸರಾ ನೃತ್ಯೋತ್ಸವ ಸ್ಪರ್ಧೆ ” ಆಡಿಶನ್‌ ಸುತ್ತಿಗಾಗಿ ಆಹ್ವಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಚ್ಚಿಲ ದಸರಾ-2023 "ಯುವ ದಸರಾ ನೃತ್ಯೋತ್ಸವ ಸ್ಪರ್ಧೆ " ಆಡಿಶನ್‌ ಸುತ್ತಿಗಾಗಿ ಆಹ್ವಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

18/03/2026
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

18/03/2026
ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

18/03/2026
ಸಂತಕಟ್ಟೆ ಬಳಿ ಕಾರು–ಬಸ್ ಭೀಕರ ಡಿಕ್ಕಿ: ಕಾರಿನಲ್ಲಿದ್ದವರಿಗೆ ಗಂಭೀರ ಗಾಯ..!

ಸಂತಕಟ್ಟೆ ಬಳಿ ಕಾರು–ಬಸ್ ಭೀಕರ ಡಿಕ್ಕಿ: ಕಾರಿನಲ್ಲಿದ್ದವರಿಗೆ ಗಂಭೀರ ಗಾಯ..!

18/03/2026

Recent News

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

18/03/2026
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

18/03/2026
ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

18/03/2026
ಸಂತಕಟ್ಟೆ ಬಳಿ ಕಾರು–ಬಸ್ ಭೀಕರ ಡಿಕ್ಕಿ: ಕಾರಿನಲ್ಲಿದ್ದವರಿಗೆ ಗಂಭೀರ ಗಾಯ..!

ಸಂತಕಟ್ಟೆ ಬಳಿ ಕಾರು–ಬಸ್ ಭೀಕರ ಡಿಕ್ಕಿ: ಕಾರಿನಲ್ಲಿದ್ದವರಿಗೆ ಗಂಭೀರ ಗಾಯ..!

18/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved