Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಾಹೆಯಲ್ಲಿ ಜಾಗತಿಕ ಮಟ್ಟದ ಫೊಟೊಬಯೊಮಾಡ್ಯುಲೇಶನ್‌ ಥೆರಪಿ ಕಾರ್ಯಾಗಾರ..!!

Dhrishya News by Dhrishya News
13/09/2023
in ಕರಾವಳಿ, ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
11
VIEWS
Share on FacebookShare on Twitter

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌, ಫೊಟೊಬಯೊಮಾಡ್ಯುಲೇಶನ್‌ ಥೆರಪಿಯ ಜಾಗತಿಕ ಸಂಘಟನೆ [ವರ್ಲ್ಡ್‌ ಎಸೋಸಿಯೇಶನ್‌ ಫಾರ್‌ ಫೊಟೊಬಯೊಮಾಡ್ಯುಲೇಶನ್‌ ಥೆರಪಿ-WALT) ಮತ್ತು ಭಾರತೀಯ ಪಾದಚಿಕಿತ್ಸೆ ಸಂಘಟನೆ [ಇಂಡಿಯನ್‌ ಪೋಡಿಯಾಟ್ರಿ ಎಸೋಸಿಯೇಶನ್‌- IPA]ಯ ಕರ್ನಾಟಕ ವಿಭಾಗ- ಸಂಯುಕ್ತವಾಗಿ ಡಯಾಬಿಟಿಕ್‌ ಪಾದ ಪ್ರಮಾಣಮಾಪನ ಮತ್ತು ನಿಭಾವಣೆಯ ಕುರಿತ ಸಮ್ಮೇಳನ ಪೂರ್ವ ಕಾರ್ಯಾಗಾರ [ಪ್ರಿ- ಕಾಂಗ್ರೆಸ್‌ ವರ್ಕ್‌ಶಾಪ್‌] ವನ್ನು ಸೆಪ್ಟೆಂಬರ್‌ 13, 2023 ರಂದು ಮಣಿಪಾಲ್ ಆರೋಗ್ಯವಿಜ್ಞಾನ ಕಾಲೇಜಿನ ಕೆಳಮಹಡಿಯ ಟವರ್‌-1 ರ ಪ್ರಿಕ್ಲಿನಿಕಲ್‌ ಲ್ಯಾಮ್‌ನಲ್ಲಿ ಆಯೋಜಿಸಿಲಾಗಿತ್ತು.

ಈ ಕಾರ್ಯಾಗಾರದಲ್ಲಿ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಗಳನ್ನು ಹೊಂದಿರುವ ಅಮೆರಿಕ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಇರಾನ್‌ ದೇಶಗಳ ಸುಮಾರು 200 ಉನ್ನತದರ್ಜೆಯ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ವಿಶೇಷವಾದ ಆಸಕ್ತಿಯನ್ನು ಹೊಂದಿ ಪಾಲ್ಗೊಂಡಿದ್ದಾರೆ. ಫೊಟೊಬಯೊಮಾಡ್ಯುಲೇಶನ್‌ [ದ್ಯುತಿಜೈವಿಕಪರಿವರ್ತನ] ಕ್ಷೇತ್ರದ ಉನ್ನತ ಮಟ್ಟದ ಸಂಸ್ಥೆಗಳಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆತಿದ್ದು ಈ ಕಾರ್ಯಾಗಾರವನ್ನು ‘ಔದ್ಯಮಿಕ- ಶೈಕ್ಷಣಿಕ ಸಹಭಾಗಿತ್ವ’ ಎಂದು ಬಣ್ಣಿಸಲಾಗಿದೆ.

ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಾಹೆ, ಮಣಿಪಾಲ್‌ ಇದರ ಡೀನ್‌ ಆಗಿರುವ ಡಾ. ಪದ್ಮರಾಜ್‌ ಹೆಗ್ಡೆ ಕಾರ್ಯಾಗಾರವನ್ನು ಉದ್ಘಾಟಿಸಿದರು. ಮಣಿಪಾಲ್‌ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್‌ ವೇಣುಗೋಪಾಲ್‌, ಮಾಹೆಯ ಬೇಸಿಕ್‌ ಮೆಡಿಕಲ್‌ ಸಾಯನ್ಸ್‌ಸ್‌ನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ. ಉಲ್ಲಾಸ್‌ ಕಾಮತ್‌, ಡಯಾಬಿಟಿಕ್‌ ತಜ್ಞ ಡಾ. ರಜನೀಶ್‌ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇಂಡಿಯನ್‌ ಪೋಡಿಯಟ್ರಿ ಸಂಘಟನೆಯ ಅಧ್ಯಕ್ಷ ಡಾ. ಎಪಿಎಸ್‌ ಸೂರಿ ಕಾರ್ಯಾಗಾರದ ರೂಪುರೇಷೆಯನ್ನು ಪ್ರಸ್ತುತಿಪಡಿಸಿದರು. ಎಂಸಿಪಿಎಚ್‌ನ ಡೀನ್‌ ಮತ್ತು ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಜಿ. ಅರುಣ್‌ ಮಯ್ಯ ಸ್ವಾಗತ ಭಾಷಣ ಮಾಡಿದರು.

ಮಾಹೆ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್‌ ವೇಣುಗೋಪಾಲ್‌ ಅವರು ‘ಪ್ರಸ್ತುತ ಸಮಾವೇಶವು ಐಪಿಎ, ಮಾಹೆ ಮತ್ತು ವಾಲ್ಟ್‌ ಸಂಸ್ಥೆಗಳ ನಿಕಟ ಬಂಧಕ್ಕೆ ಸಾಕ್ಷಿಯಾಗಿದೆ. ಈ ಮೂರೂ ಸಂಸ್ಥೆಗಳ ಸಹಭಾಗಿತ್ವದಿಂದ ಕಾರ್ಯಾಗಾರ ಮಾತ್ರವಲ್ಲ, ಮುಂದಿನ ಸಮಾವೇಶವೂ ಅಭೂತಪೂರ್ವ ಯಶಸ್ಸನ್ನು ಕಾಣಲಿದೆ’ ಎಂದರು.

ಐಎಪಿಯ ರಾಷ್ಟ್ರೀಯ ಕಾರ್ಯದರ್ಶಿ ರಜನೀಶ್‌ ಸಕ್ಸೇನಾ ಅವರು ಕಾರ್ಯಾಗಾರದ ಬಗ್ಗೆ ಪ್ರತಿಕ್ರಿಯಿಸುತ್ತ, ‘ಫೊಟೊಬಯೋಮಾಡ್ಯುಲೇಶನ್‌ [ಪಿಬಿಎಂ]ನ್ನು ಅನ್ವಯಿಸಿ ನೋವು ನಿವಾರಿಸುವ ಮತ್ತು ಅಂಗಾಂಶ ಚಿಕಿತ್ಸೆಯನ್ನು ಉತ್ತೇಜಿಸುವ ಪ್ರಯತ್ನದ ಶೋಧನೆ ಪ್ರಸ್ತುತ ಕಾರ್ಯಾಗಾರದಲ್ಲಿ ನಡೆದಿದೆ. ಫೊಟೊಬಯೊಮಾಡ್ಯುಲೇಶನ್‌ನ ಅನ್ವಯ ಸಾಧ್ಯತೆಗಳನ್ನು ವಿಸ್ತರಿಸುವಲ್ಲಿ ಉದ್ಯಮತಜ್ಞರು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗುವರೆಂಬುದನ್ನು ಈ ಕಾರ್ಯಾಗಾರದಲ್ಲಿ ಗ್ರಹಿಸಬಹುದಾಗಿದೆ’ ಎಂದರು.

ಮಾಹೆಯ ಬೇಸಿಕ್‌ ಸಾಯನ್ಸಸ್‌ನ ಮುಖ್ಯಸ್ಥರಾದ ಡಾ. ಉಲ್ಲಾಸ್‌ ಕಾಮತ್‌ ಅವರು ಮಾತನಾಡಿ, ‘ಈ ಕಾರ್ಯಾಗಾರವು ಸುಧಾರಿತ ಜ್ಞಾನ ಮತ್ತು ಫೊಟೊಬಯೊಮಾಡ್ಯುಲೇಶನ್‌ ಹಾಗೂ ಪಾದಚಿಕಿತ್ಸೆ ಕ್ಷೇತ್ರಗಳ ಸಹಯೋಗಕ್ಕೆ ನಾಂದಿ ಹಾಡಿದೆ’ ಎಂದರು.

ಮಾಹೆ, ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ. ಪದ್ಮರಾಜ ಹೆಗ್ಡೆ ಅವರು, ‘ಫೊಟೊಬಯೊಮಾಡ್ಯುಲೇಶನ್‌ ಮತ್ತು ಪೋಡಿಯಾಟ್ರಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಪ್ರಾಯೋಗಿಕ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಿ ಆರೋಗ್ಯವಿಜ್ಞಾನ ವಿಭಾಗದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳ ಸಾಧ್ಯತೆಗಳನ್ನು ಈ ಕಾರ್ಯಾಗಾರ ಮುಂದಿಟ್ಟಿದೆ. ನೇರವಾದ ತರಬೇತಿ ಮತ್ತು ಸಂವಾದ ಕಲಾಪಗಳ ಮೂಲಕ ಈ ಕಾರ್ಯಾಗಾರವು ನವೀನ ತಾಂತ್ರಿಕತೆ, ತಂತ್ರಜ್ಞಾನ, ಸೂಕ್ತ ಪ್ರಯೋಗಗಳಿಗೆ ತೆರೆದುಕೊಳ್ಳುವ ಅವಕಾಶವನ್ನು ಕೂಡ ನೀಡಿದೆ. ಈ ಕಾರ್ಯಾಗಾರದ ಭಾಗವಾಗಿರಲು ಹೆಮ್ಮೆ ಪಡುತ್ತೇವೆ’ ಎಂದರು.

ಎಂಸಿಪಿಎಚ್‌ನ ಡೀನ್‌, ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ, ವಾಲ್ಟ್‌ನ ಸದಸ್ಯ-ನಿರ್ದೇಶಕ ಡಾ. ಜಿ. ಅರುಣ್‌ ಮಯ್ಯ ಅವರು ನೆರೆದವರನ್ನು ಸ್ವಾಗತಿಸಿದರು. ಎಂಸಿಪಿಎಚ್‌ನ ಮುಖೇಶ್‌ ಕುಮಾರ್‌ ಸಿನ್ಹ ಧನ್ಯವಾದ ಸಮರ್ಪಣೆ ಮಾಡಿದರು.

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [MAHE] : ಶೈಕ್ಷಣಿಕ ಗುಣಾತ್ಮಕತೆ, ಸಂಶೋಧನೆ ಮತ್ತು ನಾವೀನ್ಯಗಳ ಬದ್ಧತೆಗೆ ಹೆಸರಾದ ಶ್ರೇಷ್ಠವಾದ ಶೈಕ್ಷಣಿಕ ಸಂಸ್ಥೆಯಾಗಿದೆ. ಭಾರತದಲ್ಲಿ ಉನ್ನತಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವಲ್ಲಿ ಮಾಹೆಯು ಗಣನೀಯ ಕೊಡುಗೆಯನ್ನು ನೀಡುತ್ತ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನೇತಾರರನ್ನು ರೂಪಿಸುವ ಕಾರ್ಯದಲ್ಲಿ ಮಾಹೆಯು ಮುಂಚೂಣಿಯಲ್ಲಿದೆ.

ಫೊಟೊಬಯೋಮಾಡ್ಯುಲೇಶನ್‌ ಥೆರಪಿಯ ವಿಶ್ವ ಜಾಗತಿಕ ಸಂಸ್ಥೆ [WALT] : ಇದು ಜಾಗತಿಕ ಮಟ್ಟದ ಸಂಸ್ಥೆಯಾಗಿದ್ದು ಫೊಟೊಬಯೊಮಾಡ್ಯುಲೇಶನ್‌ ಥೆರಪಿಯಲ್ಲಿ ಸುಧಾರಿತ ವೈಜ್ಞಾನಿಕತೆ ಮತ್ತು ಪ್ರಾಯೋಗಿಕತೆಗೆ ಮೀಸಲಾಗಿದೆ. ವಾಲ್ಟ್‌ ಫೊಟೊಬಯೊಮಾಡ್ಯುಲೇಶನ್‌ ಥೆರಪಿಯ ಅರ್ಥಮಾಡಿಕೊಳ್ಳುವಿಕೆ ಮತ್ತು ಅನ್ವಯಿಸುವಿಕೆಯನ್ನು ಅಧಿಕಗೊಳಿಸಲು ಸಂಶೋಧನೆ, ಶಿಕ್ಷಣ ಮತ್ತು ಸಹಭಾಗಿತ್ವಗಳನ್ನು ಉತ್ತೇಜಿಸಲು ಬದ್ಧವಾಗಿರುವ ಸಂಸ್ಥೆಯಾಗಿದೆ.

ಇಂಡಿಯನ್‌ ಪೋಡಿಯಾಟ್ರಿ ಅಸೋಸಿಯೇಶನ್‌- ಕರ್ನಾಟಕ ವಿಭಾಗ : ಭಾರತದಲ್ಲಿ ಪಾದಗಳ ಆರೋಗ್ಯ ಮತ್ತು ಆರೈಕೆಗಳಿಗೆ ಬದ್ಧವಾದ ವೃತ್ತಿಪರ ಘಟಕವಾಗಿದೆ. ಐಪಿಎ ಕರ್ನಾಟಕ ವಿಭಾಗವು ಪ್ರಾದೇಶಿಕವಾಗಿ ಪಾದಗಳ ಚಿಕಿತ್ಸೆಯನ್ನು ಸುಧಾರಿತ ಮಟ್ಟದಲ್ಲಿ ರೂಪಿಸುವಲ್ಲಿ ಪ್ರಧಾನಪಾತ್ರ ವಹಿಸುತ್ತಿದೆ.

Previous Post

ಮಣಿಪಾಲ : ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಕೆ ಎಸ್ ಸಿ -ಎ ಜಿ ಓ ಐ (ಭಾರತೀಯ ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಸ್ಟ್‌ಗಳ ಸಂಘದ ಕರ್ನಾಟಕ ರಾಜ್ಯ ವಿಭಾಗ) 12 ನೇ ವಾರ್ಷಿಕ ರಾಜ್ಯ ಸಮ್ಮೇಳನ..!!

Next Post

ಕಾಪು : ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಲಾರಿ ಟೆಂಪೋ ಮಾಲಕರ ಸಮಸ್ಯೆಗೆ ಧ್ವನಿ ಎತ್ತಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾಪು : ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಲಾರಿ ಟೆಂಪೋ ಮಾಲಕರ ಸಮಸ್ಯೆಗೆ ಧ್ವನಿ ಎತ್ತಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಗ್ರಾಮಾಂತರ ಬಿಜೆಪಿ ಓಬಿಸಿ ಮೋರ್ಚಾದಿಂದ ‘ಸೇವಾ ಸಂಕಲ್ಪ ಅಭಿಯಾನ’ ಪಾದಯಾತ್ರೆ

ಉಡುಪಿ ಗ್ರಾಮಾಂತರ ಬಿಜೆಪಿ ಓಬಿಸಿ ಮೋರ್ಚಾದಿಂದ ‘ಸೇವಾ ಸಂಕಲ್ಪ ಅಭಿಯಾನ’ ಪಾದಯಾತ್ರೆ

11/10/2026
ಉಡುಪಿ-ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿ ಚಾಲನೆ

ಉಡುಪಿ-ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿ ಚಾಲನೆ

11/10/2026
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

10/10/2026
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

10/10/2026

Recent News

imunify-bot-check