Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕೃಷ್ಣಜನ್ಮಾಷ್ಠಮಿಯಂದು 2 ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ “ಸೀ ಪೋಕ್” ವಿಶಿಷ್ಟ ವೇಷ ಧರಿಸಲಿರುವ ರವಿ ಕಟಪಾಡಿ – ಬಾಕ್ಸ್ ಹಿಡಿದು ಹಣ ಸಂಗ್ರಹ ಮಾಡದೇ ಇರಲು ನಿರ್ಧಾರ..!!

Dhrishya News by Dhrishya News
05/09/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
124
VIEWS
Share on FacebookShare on Twitter

ಉಡುಪಿ: ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯ ದಿನದಂದು ತನ್ನ ವಿಶಿಷ್ಟ ವೇಷಗಳ ಮೂಲಕ ಜನರ ಮನ ಸೆಳೆದು ಸಂಗ್ರಹವಾದ  ಹಣವನ್ನು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ನೆರವಾಗುವ  ಸಮಾಜ ಸೇವಕ ರವಿ ಕಟಪಾಡಿ ಅವರು ಈ ಬಾರಿ ಕುಂದಾಪುರದ 2 ವರ್ಷದ ಮಗುವಿನ ಹೃದಯ ಚಿಕಿತ್ಸೆಗೆ ನೆರವಿಗಾಗಿ ಮತ್ತೆ ವೇಷ ಧರಿಸಲಿದ್ದಾರೆ.

ಈ ಬಾರಿ ರವಿ ಕಟಪಾಡಿ ಅವರು ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಲಿದ್ದು, ಉದ್ಯಾವರ, ಉಡುಪಿ,ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಿ ಜನರನ್ನು ರಂಜಿಸಲಿದ್ದಾರೆ., ಆದರೆ ಈ ಬಾರಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ಜನರ ಬಳಿಗೆ ಹೋಗಿ ಬಾಕ್ಸ್ ಗಳನ್ನು ಹಿಡಿದು ಹಣವನ್ನು ಸಂಗ್ರಹ ಮಾಡದೇ ಇರಲು ನಿರ್ಧರಿಸಿದೆ.

ನಾನು ನನ್ನ ಸ್ವಂತ ಮನೆ ಕಟ್ಟುವ ಕಾರ್ಯವನ್ನು ಪ್ರಾರಂಭ ಮಾಡಿದ್ದೇನೆ, ಆದರೆ ನನ್ನದೇ ಊರಿನ ಕೆಲವೊಂದು ಜನರು ನಾನು ವೇಷ ಹಾಕಿ ಬಂದ ಹಣದಲ್ಲಿ 1 ಕೋಟಿ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದೇನೆ ಎಂದು ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಾರಿ ವೇಷ ಹಾಕಿದರೂ ಕೂಡಾ ಜನರ ಬಳಿಗೆ ತೆರಳಿ ಬಾಕ್ಸ್ ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಯಾರಿಗಾದರೂ ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಛಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನಸಹಾಯವನ್ನು ನೀಡಬಹುದು. ಇದು ನಮ್ಮ ರವಿ ಫ್ರೆಂಡ್ಸ್ ಕಟಪಾಡಿ ತಂಡದ ನಿರ್ಧಾರ” ಎಂದರು.

ಈ ಬಾರಿ ಕುಂದಾಪುರದ ಎರಡು ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ ಸಂಗ್ರಹವಾದ ಹಣವನ್ನು ನೀಡುತ್ತೇನೆ. ಮಂಗಳೂರಿನಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ 15 ಲಕ್ಷರೂ.ಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾನು ಕೈಲಾದಷ್ಟು ಸಂಗ್ರಹಿಸಿ ನೀಡುತ್ತೇನೆ. ಹಣದಲ್ಲಿ ಉಳಿಕೆಯಾದರೆ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇನ್ನೊಂದು ಮಗುವಿನ ಚಿಕಿತ್ಸೆಗೆ ನೀಡುವುದಾಗಿ ಹೇಳಿದರು.

ಕೂಲಿಕಾರ್ಮಿಕನಾಗಿ ದುಡಿಯುವ ರವಿ ಕಟಪಾಡಿ, ಹಿಂದಿನ ಎಂಟು ವರ್ಷಗಳಲ್ಲಿ ಒಟ್ಟು ಒಂದು ಕೋಟಿ 13 ಲಕ್ಷ ರೂ. ಸಂಗ್ರಹಿಸಿದ್ದು, ತೀವ್ರರೀತಿಯ ಅಸೌಖ್ಯದಿಂದ ನರಳುವ 113 ಮಕ್ಕಳಿಗೆ ಈ ಹಣವನ್ನು ಅವರ ಚಿಕಿತ್ಸೆಗಾಗಿ ನೀಡಿದ್ದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಂಡದ ಮಾರ್ಗದರ್ಶಕರಾದ ಮಹೇಶ್ ಶೆಣೈ, ಮೊಹಮ್ಮದ್ ರಮೀಜುಲ್ಲಾ, ವಿಶ್ವಾಸ್ ಉಪಸ್ಥಿತರಿದ್ದರು

Previous Post

ಉಡುಪಿ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೆ. 6 ಶ್ರೀ ಕೃಷ್ಣ ಜಯಂತಿ ಆಚರಣೆ..!!

Next Post

ಉಡುಪಿ : ನೂತನ ಎಸ್ಪಿಯಾಗಿ ಡಾ.ಅರುಣ್ ಕೆ. ನೇಮಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ನೂತನ ಎಸ್ಪಿಯಾಗಿ ಡಾ.ಅರುಣ್ ಕೆ. ನೇಮಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026

Recent News