Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಆಗಸ್ಟ್‌ 31 ಗುರುವಾರದಿಂದ ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನಯಾನ ಸೇವೆ ಆರಂಭ..!!

Dhrishya News by Dhrishya News
29/08/2023
in ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
18
VIEWS
Share on FacebookShare on Twitter

ಬೆಂಗಳೂರು: ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯು ವಿಮಾನವು ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ತಾವೂ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್‍‌ ಸೆಲ್ಯೂಟ್‌ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು” ಎಂದಿದ್ದಾರೆ.

ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದಕ್ಕೆ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‍‌ಪೋರ್ಟ್ ಮೈದಾಳಿದ್ದು, ಇದರಲ್ಲಿ ಏರ್‍‌ಬಸ್‌ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಟಿಂಗ್‌ ವಿಮಾನಗಳು ಲಭ್ಯ ಇರಲಿವೆ. ಜೊತೆಗೆ, ಉಡಾನ್‌ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೂಲ ಯೋಜನೆಯಲ್ಲಿ ಈ ಏರ್‍‌ಪೋರ್ಟ್ನಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಇರಲಿಲ್ಲ. ಈಗ ಅದನ್ನು ಪರಿಷ್ಕರಿಸಿ, ಆ ಅನುಕೂಲವನ್ನೂ ನೀಡಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್‌ ಮತ್ತು 3,050 ಮೀಟರ್ ಉದ್ದದ ರನ್‌ವೇಯನ್ನು ಇದು ಒಳಗೊಂಡಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್‌ ಮುಂಗಡವಾಗಿ ಬುಕಿಂಗ್‌ ಆಗಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಿದರು.

Previous Post

ಮೈಸೂರು : ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ, ಡಿಸಿಎಂ..!!

Next Post

ಬಂಟ್ವಾಳ : ಯುವತಿ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ : ಆರೋಪಿಯನ್ನು ವಶಕ್ಕೆ ಪೋಲೀಸರು..!!ಪಡೆದ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಬಂಟ್ವಾಳ : ಯುವತಿ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ : ಆರೋಪಿಯನ್ನು ವಶಕ್ಕೆ ಪೋಲೀಸರು..!!ಪಡೆದ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026

Recent News