Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ : ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್ ಸೂಚನೆ ..!!

Dhrishya News by Dhrishya News
10/08/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
30
VIEWS
Share on FacebookShare on Twitter

ಉಡುಪಿ :ಇಂದು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆಯೋಜಿಸಲಾದ ವೀಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ  ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿನ ನೀರು ಯಾವುದೇ ರೀತಿಯಲ್ಲಿ ಕಲುಷಿತವಾಗಿರದೇ, ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದೇ, ಕುಡಿಯಲು ಯೋಗ್ಯವಾಗಿರುವ ಕುರಿತಂತೆ ಪರಿಶೀಲಿಸಿ, ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು

ಜಿಲ್ಲೆಯಲ್ಲಿರುವ ಎಲ್ಲಾ ಕುಡಿಯುವ ನೀರು ಸರಬರಾಜು ಮೂಲಗಳಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಆ ಪ್ರದೇಶದಲ್ಲಿ ಯಾವುದೇ ಕಲುಷಿತ ಪದಾರ್ಥ ಅಥವಾ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗದಂತೆ ಎಚ್ಚರವಹಿಸಬೇಕು. ಆ ಪ್ರದೇಶವನ್ನು ಕಸ ಕಡ್ಡಿ ಇಲ್ಲದಂತೆ ಹಾಗೂ ಪೊದೆಗಳು ಬೆಳೆಯದಂತೆ ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು.

ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ 15 ನೇ ಹಣಕಾಸು ಯೋಜನೆಯಡಿ ಲಭ್ಯವಿರುವ ಅನುದಾನದ ಬಳಕೆ ಮಾಡಿಕೊಂಡು ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕ್ಲೋರಿನೇಶನ್ ಮಾಡಿಸುವಂತೆ ಮತ್ತು ಎಲ್ಲಾ ಪಂಚಾಯತ್‌ಗಳಲ್ಲಿ ಫಾಗಿಂಗ್ ಮೆಷಿನ್ ಗಳನ್ನು ಶೀಘ್ರದಲ್ಲಿ ಖರೀದಿಸಿ, ಕೀಟ ಜನ್ಯ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗಳು ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು.

 

ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳು, ಅದರಲ್ಲೂ ಡಯಾರಿಯಾ ರೋಗವು ಬೇಗನೇ ಹರಡುವುದರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ನೀರು ಶುದ್ಧೀಕರಣ ಫಿಲ್ಟರ್‌ಗಳನ್ನು ಲಭ್ಯವಿರುವ ಅನುದಾನದಲ್ಲಿ ಖರೀದಿಸಿ, ಅಳವಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜಿಂಗಲ್ಸ್ ಸಿದ್ಧಪಡಿಸಿ, ಅದನ್ನು ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣಾ ವಾಹನಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸುವಂತೆ ತಿಳಿಸಿದರು.

 

ಜಿಲ್ಲಾ ಸವೇಕ್ಷಣಾಧಿಕಾರಿ (ಪ್ರಭಾರ) ಡಾ.ವಾಸುದೇವ ಉಪಾಧ್ಯಾಯ, ಶುದ್ದ ಕುಡಿಯುವ ನೀರಿನ ಪ್ರಾಮುಖ್ಯತೆ, ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ಬಗ್ಗೆ ಮತ್ತು ಅವುಗಳನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ವೈಯಕ್ತಿಕ ಶುಚಿತ್ವ ಮತ್ತು ಕೈಗಳ ಶುಚಿತ್ವ ಹಾಗೂ ಕ್ಲೋರಿನೇಷನ್ ವಿಧಾನದ ಬಗ್ಗೆ ತಿಳಿಸಿದರು.

Previous Post

ಮಣಿಪಾಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ – ಐ. ಟಿ. ಐ ಪ್ರವೇಶಾತಿಗೆ ಅರ್ಜಿ ಆಹ್ವಾನ..!!

Next Post

ಶಿರ್ವ :ಶಾಲಾ ಬಸ್ ಹಾಗೂ ರಿಕ್ಷಾ ಮಧ್ಯೆ ಡಿಕ್ಕಿ – ವಿದ್ಯಾರ್ಥಿಗಳು ಅಪಾಯದಿಂದ ಪಾರು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶಿರ್ವ :ಶಾಲಾ ಬಸ್ ಹಾಗೂ ರಿಕ್ಷಾ ಮಧ್ಯೆ ಡಿಕ್ಕಿ - ವಿದ್ಯಾರ್ಥಿಗಳು ಅಪಾಯದಿಂದ ಪಾರು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026

Recent News

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

ರೆಂಜಾಳ ಭೂಕುಸಿತ ಸ್ಥಳಕ್ಕೆ ಕಾರ್ಕಳ ಕಾಂಗ್ರೆಸ್ ನಿಯೋಗ ಬೇಟಿ

05/08/2026
ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

05/08/2026
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026