ಹೆಬ್ರಿ: ತನ್ನ ಅಜ್ಜಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಪುಟಾಣಿ ಮಗುವನ್ನು ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಡುಪಿ ತಾಲೂಕಿನ ನಾಲ್ಕೂರು ಗ್ರಾಮದ ಕಜೆ ಅರೆಮನೆ ಜಡ್ಡು ಎಂಬಲ್ಲಿ ನಡೆದಿದೆ
ನಾಲ್ಕೂರು ಗ್ರಾಮದ ಸಂತೋಷ್ ಬೋವಿ ಎಂಬುವರ ಮಗಳು ಕೃತಿಕಾ ಮೃತಪಟ್ಟ ಪುಟಾಣಿ ಬಾಲಕಿ. ಕೃತಿಕಾ ತನ್ನ ಅಜ್ಜಿ ಮಂಜುಳಾ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ಸಂಕಯ್ಯ ಶೆಟ್ಟಿ ಎಂಬುವರ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಪಕ್ಕದಲ್ಲಿದ್ದ ನೀರಿನ ಹೊಂಡಕ್ಕೆ ಮಗು ಜಾರಿ ಬಿದ್ದು ಮೃತಪಟ್ಟಿದೆ ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






