ಉಡುಪಿ ಅಕ್ಟೋಬರ್ 31: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ), ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ ಯ ಉದ್ಘಾಟನಾ ಕಾರ್ಯಕ್ರಮ ವನ್ನು NGC ಕಾಲೇಜು ಶಂಕರನಾರಾಯಣ ದಲ್ಲಿ ಶನಿವಾರ ಅಕ್ಟೋಬರ್ 31 ರಂದು ಹಮ್ಮಿಕೊಳ್ಳಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ವಿಶ್ವ ಸ್ಟ್ರೋಕ್ ದಿನದ ಬ್ಯಾನರ್ ಮತ್ತು IEC ಪ್ರದರ್ಶನ ನಡೆಯಿತು.
ಕಾರ್ಯಕ್ರಮ ದ ಉದ್ಘಾಟನೆ ಯನ್ನು ನೆರವೇರಿಸಿದ ಮಾನ್ಯ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಹಾಗೂ ಕಭೀ ಕಾರ್ಯಕ್ರಮದ ನೂಡಲ್ ಅಧಿಕಾರಿಗಳಾದ ಡಾ. ಲತಾ ನಾಯಕ್ ಅವರು ಮಾತನಾಡಿ, ಮೆದುಳು ಆರೋಗ್ಯ ದಲ್ಲಿ ಜೀವನ ಶೈಲಿ ಹಾಗೂ ಆಹಾರ ಶೈಲಿ ಬಹು ಮುಖ್ಯ ಪತ್ರ ವಹಿಸುತ್ತದೆ ಹಾಗೂ ಮಹಿಳೆಯರ ಆರೋಗ್ಯ ಮತ್ತು ಮಹಿಳಾ ಸಬಲೀಕರಣ ದ ಕುರಿತು ತಿಳಿಸಿದರು. ಕಭೀ ಕಾರ್ಯಕ್ರಮದಲ್ಲಿ, ನರವೈಜ್ಞಾನಿಕ ಖಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮೆಂಶಿಯ ಅಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ನರವೈಜ್ಞಾನಿಕ ಖಾಯಿಲೆ ಇರುವಂತಹ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಇಂದ ಟೆಲಿ ನ್ಯೂರೋಲಾಜಿ ಎಂಬ ಸೇವೆಯನ್ನು ನೀಡಲಾಗುತ್ತದೆ. ಹೀಗೆ ಕಭೀ ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ತಿಳಿಸಿದರು. ಡಾ. ವಿದ್ಯಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಶಂಕರನಾರಾಯಣ ಕಾಲೇಜಿನ ಪ್ರಾಂಶುಪಾಲರು ಆದ ಡಾ. ವೆಂಕಟರಾಮ್ ಭಟ್ ರವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದು ಈ ತರಹದ ಕಾರ್ಯಕ್ರಮ ಬಹಳ ಮುಖ್ಯವಾಗಿದೆ ಹಾಗೂ ಮೆದುಳು ಆರೋಗ್ಯ ಉತ್ತಮವಾಗಿಸಿಕೊಳ್ಳಬೇಕಾಗುವುದು ಬಹಳ ಮುಖ್ಯ ಎಂದು ತಿಳಿಸಿದರು.
ಮೆದುಳು ಆರೋಗ್ಯ ಹಾಗೂ ಕಭೀ ಕಾರ್ಯಕ್ರಮದ ಕುರಿತು ಜಿಲ್ಲಾ ಸಂಯೋಜಕರಾದ ಶ್ರೀಮತಿ ಅರ್ಪಿತಾ ಬ್ರಹ್ಮಾವರ ವಿಸ್ತರವಾಗಿ ಮಾಹಿತಿಯನ್ನು ನೀಡಿದರು.
ವೇದಿಕೆ ಯಲ್ಲಿ ಅತಿಥಿಗಳಾಗಿ ಕಭೀ ಕಾರ್ಯಕ್ರಮ ದ ಸ್ಪೀಚ್ ಥೆರೇಪಿಸ್ಟ್ ಕು. ಹೇಮಾ ಎಚ್ ಪಿ ಹಾಗೂ DMHP ಯ ಶ್ರೀಮತಿ ವಸಂತಿ ಉಪಸ್ಥಿತರಿದ್ದರು. . ಕಾಲೇಜು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ದವರ ಸಹಕಾರದೊಂದಿಗೆ ಕಾರ್ಯಕ್ರಮ ಉತ್ತಮವಾಗಿ ನೆರವೇರಿತು.






