Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲದಲ್ಲಿ ‘ಮಾಹೆ-ನೇಚರ್ ಕಾನ್ಫರೆನ್ಸ್’ ಉದ್ಘಾಟನೆ: ಸಾಂಕ್ರಾಮಿಕ ರೋಗಗಳ ನಿಯಂತ್ರಣದತ್ತ ಮಹತ್ವದ ಹೆಜ್ಜೆ

Dhrishya News by Dhrishya News
14/10/2026
in ಸುದ್ದಿಗಳು
0
ಮಣಿಪಾಲದಲ್ಲಿ ‘ಮಾಹೆ-ನೇಚರ್ ಕಾನ್ಫರೆನ್ಸ್’ ಉದ್ಘಾಟನೆ: ಸಾಂಕ್ರಾಮಿಕ ರೋಗಗಳ ನಿಯಂತ್ರಣದತ್ತ ಮಹತ್ವದ ಹೆಜ್ಜೆ
0
SHARES
2
VIEWS
Share on FacebookShare on Twitter

ಮಣಿಪಾಲ, ಅಕ್ಟೋಬರ್‌ 14, 2026: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಆತಿಥ್ಯವಹಿಸಿ ಆಯೋಜಿಸಿರುವ ಭಾರತದ ಮೊದಲ ʼಮಾಹೆ-ನೇಚರ್‌ ಕಾನ್ಫರೆನ್ಸ್‌ʼ ಬುಧವಾರ ಉದ್ಘಾಟನೆಗೊಂಡಿತು. ಪ್ರಕೃತಿ ಚಿಕಿತ್ಸೆ, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್ ಹಾಗೂ ನೇಚರ್ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಈ ಸಮ್ಮೇಳನದಲ್ಲಿ “ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವುದು” ಎನ್ನುವ ವಿಷಯದ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.

ಈ ಸಮ್ಮೇಳನವು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತಾದ ವೈಜ್ಞಾನಿಕ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲು, ಹೊಸ ಸಂಶೋಧನೆಗಳನ್ನು ವಿಶ್ಲೇಷಿಸಲು ಹಾಗೂ ಪರಸ್ಪರ ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಇಪ್ಪತ್ತು ದೇಶಗಳ ಸಂಶೋಧಕರು, ವೈದ್ಯಕೀಯ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು, ನೀತಿ ನಿರೂಪಕರು ಮತ್ತು ಉದ್ಯಮ ಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿದೆ.

ಈ ಸಮ್ಮೇಳನವು ಪ್ರಮುಖ ಜಾಗತಿಕ ಆರೋಗ್ಯ ಸವಾಲುಗಳಾದ ಹೊಸ ಮತ್ತು ಮರುಕಳಿಸುವ ರೋಗಾಣುಗಳು, ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್, ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಸಿದ್ಧತೆ, ರೋಗಗಳ ನಿಗಾ, ರೋಗನಿರ್ಣಯ, ಚಿಕಿತ್ಸಾ ವಿಧಾನಗಳು, ಲಸಿಕಾ ತಂತ್ರಗಳು ಹಾಗೂ ‘ಒನ್ ಹೆಲ್ತ್’ ವಿಧಾನಗಳ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, “ರೋಗಾಣುಗಳಿಗೆ ಗಡಿ ದಾಟಲು ಪಾಸ್‌ಪೋರ್ಟ್ ಅಥವಾ ವೀಸಾ ಬೇಕಿಲ್ಲ. ಅವು ಭೌಗೋಳಿಕ ಮಿತಿಗಳನ್ನು ಮೀರಿದ ಸವಾಲಾಗಿವೆ. ಕೋವಿಡ್-19 ಸಾಂಕ್ರಾಮಿಕವು ಆರೋಗ್ಯ ಭದ್ರತೆ ಮತ್ತು ಮನುಷ್ಯನ ಭದ್ರತೆ, ಎರಡೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದೆ. ಹಾಗಾಗಿ ಬಲವಾದ ನಿಗಾ, ಸಿದ್ಧತೆ ಮತ್ತು ಸಮಾನ ಆರೋಗ್ಯ ಸೇವೆಯ ಅಗತ್ಯವಿದೆ” ಎಂದು ತಿಳಿಸಿದರು.

“ಸಾಂಕ್ರಾಮಿಕ ರೋಗಗಳನ್ನು ತಡೆಯಲು ವೈದ್ಯಕೀಯ, ಫಾರ್ಮಸಿ, ಎಂಜಿನಿಯರಿಂಗ್, ಡೇಟಾ ಸೈನ್ಸ್ ಮತ್ತು ಸಾರ್ವಜನಿಕ ಆರೋಗ್ಯ ನೀತಿಯ ನಡುವೆ ಸಹಯೋಗ ಅತ್ಯಗತ್ಯ. ಸಂಶೋಧನೆಗಳನ್ನು ಸಾರ್ವಜನಿಕರ ಒಳಿತಿಗಾಗಿ ಬಳಸುವ ನಿಟ್ಟಿನಲ್ಲಿ ಅಂತರ್‌ಶಿಸ್ತೀಯ ಪಾಲುದಾರಿಕೆಯನ್ನು ಬೆಳೆಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ” ಎಂದು ಅವರು ವಿವರಿಸಿದರು.

ನೇಚರ್ ಮೈಕ್ರೋಬಯಾಲಜಿ (Nature Microbiology) ಜರ್ನಲ್‌ನ ಹಿರಿಯ ಸಂಪಾದಕರಾದ ಡಾ. ಜೆಸ್ಸಿಕಾ ಥಾಂಪ್ಸನ್ ಅವರು, ನೇಚರ್ ಸಂಪಾದಕೀಯ ತಂಡದ ಪರವಾಗಿ ಎಲ್ಲ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ದಿನವಿಡೀ ನಡೆಯಲಿರುವ ವೈಜ್ಞಾನಿಕ ಚರ್ಚೆಗಳು ಮತ್ತು ಅಧಿವೇಶನಗಳ ರೂಪುರೇಷೆಗಳನ್ನು ಅವರು ಪರಿಚಯಿಸಿದರು.

ದಿನದ ಕಾರ್ಯಕ್ರಮವನ್ನು ತಜ್ಞರ ನೇತೃತ್ವದಲ್ಲಿ ನಡೆಯುವ ವಿವಿಧ ಅಧಿವೇಶನಗಳ ಸುತ್ತ ರೂಪಿಸಲಾಗಿದೆ. ಇವುಗಳಲ್ಲಿ ರೋಗ ಹರಡುವಿಕೆಯ ಮುನ್ಸೂಚನೆಯಿಂದ ಹಿಡಿದು ರೋಗ ಕಣ್ಗಾವಲು ವ್ಯವಸ್ಥೆಗಳ ವಿನ್ಯಾಸದವರೆಗಿನ ರೋಗ ಕಣ್ಗಾವಲು ಮಾದರೀಕರಣ, ‘ಒನ್ ಹೆಲ್ತ್’ ಡಿಜಿಟಲ್ ವೇದಿಕೆಗಳು, ಜಾಲ ರಚನೆ ಮತ್ತು ಬಹುಮಾಧ್ಯಮ ದತ್ತಾಂಶಗಳ ಪಾತ್ರ, ದತ್ತಾಂಶದಿಂದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ಜನಸಂಖ್ಯಾ ಜೀನೋಮಿಕ್ಸ್, ಸಂಶೋಧನಾ ಆವಿಷ್ಕಾರಗಳನ್ನು ಪ್ರಾಯೋಗಿಕ ಬಳಕೆಗೆ ತರುವ ಬೌದ್ಧಿಕ ವಿಧಾನಗಳು ಹಾಗೂ ಆಂಟಿಮೈಕ್ರೊಬಿಯಲ್ ಪ್ರತಿರೋಧದ (AMR) ಕಣ್ಗಾವಲಿನ ಭಾರತೀಯ ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳು ಚರ್ಚೆಯಾಗಲಿವೆ.
ಈ ಸಮ್ಮೇಳನದ ಆಯೋಜನೆಯು ಆರೋಗ್ಯ ವಿಜ್ಞಾನ ಸಂಶೋಧನೆಯ ಜಾಗತಿಕ ಕೇಂದ್ರವಾಗಿ ಮಾಹೆಯ ಪಾತ್ರವನ್ನು ಬಲಪಡಿಸಿದೆ. ಜತೆಗೆ, ಸಾಂಕ್ರಾಮಿಕ ರೋಗಗಳ ಸಂಶೋಧನೆ, ಅಂತರರಾಷ್ಟ್ರೀಯ ವೈಜ್ಞಾನಿಕ ಸಹಯೋಗ ಮತ್ತು ಹೊಸ ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಸಾಕ್ಷ್ಯಾಧಾರಿತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಮಾಹೆ ಹೊಂದಿರುವ ದೃಢವಾದ ಬದ್ಧತೆಗೆ ಇದು ಕನ್ನಡಿ ಹಿಡಿದಿದೆ.

Previous Post

ಮೂರು ದಶಕಗಳ ಆಸ್ಪತ್ರೆ ನಾಯಕರು ಮರಳಿ ಮನೆಗೆ: ಮಣಿಪಾಲದಲ್ಲಿ ಮಿಲಾಪ್-2026, ಆಸ್ಪತ್ರೆ ಆಡಳಿತ ವಿಭಾಗದ 4ನೇ ಜಾಗತಿಕ ಹಳೆವಿದ್ಯಾರ್ಥಿಗಳ ಸಮಾವೇಶ

Next Post

ಪಂಚಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಮಡಿ ವಿಶ್ವನಾಥ ಖಾರ್ವಿ ಆಯ್ಕೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪಂಚಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಮಡಿ ವಿಶ್ವನಾಥ ಖಾರ್ವಿ ಆಯ್ಕೆ

ಪಂಚಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಮಡಿ ವಿಶ್ವನಾಥ ಖಾರ್ವಿ ಆಯ್ಕೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಸ್ವರ್ಣ ನದಿ ದಂಡೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಾರ್ಕಳ: ಸ್ವರ್ಣ ನದಿ ದಂಡೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

14/10/2026
ಕುಂದಾಪುರ: ಸಾಲಿಗ್ರಾಮಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!

ಕುಂದಾಪುರ: ಸಾಲಿಗ್ರಾಮಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!

14/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಬೈಂದೂರು: ವ್ಯಕ್ತಿ ನಾಪತ್ತೆ

14/10/2026
ಪಂಚಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಮಡಿ ವಿಶ್ವನಾಥ ಖಾರ್ವಿ ಆಯ್ಕೆ

ಪಂಚಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಮಡಿ ವಿಶ್ವನಾಥ ಖಾರ್ವಿ ಆಯ್ಕೆ

14/10/2026

Recent News

imunify-bot-check