ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ-2026ರ ಅಂಗವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕುಸ್ತಿಪಟುಗಳನ್ನು ಒಳಗೊಂಡ ಉಚ್ಚಿಲ ದಸರಾ ಕುಸ್ತಿ ಪಂದ್ಯಾಕೂಟ-2026 ಆಯೋಜಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಪುರುಷರ ವಿಭಾಗದಲ್ಲಿ “ಉಚ್ಚಿಲ ದಸರಾ ಕುಮಾರ್” ಹಾಗೂ “ಉಚ್ಚಿಲ ದಸರಾ ಕೇಸರಿ”, ಮಹಿಳೆಯರ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ” ಪ್ರಶಸ್ತಿ ವಿಭಾಗಗಳ ಸಹಿತ ವಿವಿಧ ದೇಹತೂಕದ ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ವಿವರ
ಸ್ಥಳ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗ
ದಿನಾಂಕ: ಅಕ್ಟೋಬರ್ 13, 2026 (ಮಂಗಳವಾರ)
ಸಮಯ: ಬೆಳಿಗ್ಗೆ 8 ಗಂಟೆಯಿಂದ
ಪುರುಷರ ವಿಭಾಗ:
34–38 ಕೆಜಿ, 41 ಕೆಜಿ, 46 ಕೆಜಿ, 50 ಕೆಜಿ, 57 ಕೆಜಿ, 61 ಕೆಜಿ, 65 ಕೆಜಿ – ಉಚ್ಚಿಲ ಕುಮಾರ್
74 ಕೆಜಿ – ಉಚ್ಚಿಲ ದಸರಾ ಕೇಸರಿ
86 ಕೆಜಿ ಹಾಗೂ 86ರಿಂದ 97 ಕೆಜಿ
ಮಹಿಳೆಯರ ವಿಭಾಗ:
32–36 ಕೆಜಿ, 43 ಕೆಜಿ, 46 ಕೆಜಿ, 53 ಕೆಜಿ – ಉಚ್ಚಿಲ ದಸರಾ ಕುವರಿ
59 ಕೆಜಿ, 65 ಕೆಜಿ, 68 ಕೆಜಿ ಹಾಗೂ 68ರಿಂದ 76 ಕೆಜಿ
ಸ್ಪರ್ಧೆಯ ನಿಯಮಗಳು
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಕುಸ್ತಿಪಟುಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಇತರ ಜಿಲ್ಲೆಗಳ ಕ್ರೀಡಾಪಟುಗಳಿಗೆ ಅವಕಾಶ ಇರುವುದಿಲ್ಲ.
ದೇಹದ ತೂಕ ಪರಿಶೀಲನೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಾಳು ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಕಡ್ಡಾಯವಾಗಿ ತರಬೇಕು.
ಯಾವುದೇ ವಿಭಾಗದಲ್ಲಿ ನಾಲ್ಕಕ್ಕಿಂತ ಕಡಿಮೆ ಸ್ಪರ್ಧಾಳುಗಳು ಇದ್ದಲ್ಲಿ, ಆ ವಿಭಾಗದ ಸ್ಪರ್ಧೆಯನ್ನು ರದ್ದುಗೊಳಿಸುವ ಅಧಿಕಾರ ಸಂಘಟಕರಿಗಿರುತ್ತದೆ. ಅಶಿಸ್ತಿನ ವರ್ತನೆ ತೋರಿದ ಕುಸ್ತಿಪಟು ಅಥವಾ ಅವರ ತಂಡದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಸ್ಪರ್ಧಾಳುಗಳಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು. ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ತೂಕ ಪರಿಶೀಲನೆ: ಅಕ್ಟೋಬರ್ 12, 2026 (ಸೋಮವಾರ) ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ನಿಗದಿತ ಸಮಯದ ಬಳಿಕ ಆಗಮಿಸುವ ಸ್ಪರ್ಧಾಳುಗಳ ತೂಕ ಪರಿಶೀಲನೆ ನಡೆಸಲಾಗುವುದಿಲ್ಲ.
ಕುಸ್ತಿ ಪಂದ್ಯಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ವಿಜಯ ಸುವರ್ಣ: 9731052556








