ಕಾರ್ಕಳದ ಎಣ್ಣೆ ಹೊಳೆ ಸ್ವರ್ಣ ನದಿಗೆ ಈಜಲು ತೆರಳಿದ್ದ ಮೂಜೂರು ಗ್ರಾಮದ 5 ಮಂದಿ ಯುವಕರಲ್ಲಿ ಎರಡು ಮಂದಿ ನೀರು ಪಾಲಾದ ಘಟನೆ ನಡೆದಿದೆ.
ಡ್ರೋನ್ ಕ್ಯಾಮೆರಾ ದ ಮೂಲಕ ಮೃತ ದೇಹವನ್ನು ಪತ್ತೆ ಹಚ್ಚಲಾಗಿದು ಮೃತಪಟ್ಟವರನ್ನು ಹರ್ಷನ್ ಆಚಾರ್ಯ (22) ಮತ್ತು ಭರತ್ ಪೂಜಾರಿ (30) ಎಂದು ಗುರುತಿಸಲಾಗಿದೆ.
ಮೃತ ದೇಹ ಪತ್ತೆಗಾಗಿ ಅಗ್ನಿ ಶಾಮಕ ಹಾಗೂ ಪೊಲೀಸ್ ಇಲಾಖೆ ಅವರು ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಸಿಗದ ವೇಳೆ ಡ್ರೋನ್ ನ ಮೂಲಕ ಮೃತ ದೇಹ ಪತ್ತೆ ಹಚ್ಚಿ ಈಜು ತಜ್ಞರ ಸಹಾಯದಿಂದ ಮೃತದೇಹವನ್ನು ಮೇಲೆತ್ತಲಾಗಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






