ಉಡುಪಿ : ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರು ಪರ್ಯಾಯ ಶ್ರೀ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ಶ್ರೀಗಳನ್ನು ತಾರೀಕು 23- 09 – 2026 ನೇ ಬುಧವಾರ ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಭೇಟಿಯಾಗಿ ಶ್ರೀಗಳವರಿಗೆ ಫಲ ಕಾಣಿಕೆಯನ್ನು ಸಮರ್ಪಿಸಿದರು.
ಶ್ರೀಗಳವರು ಅನುಗ್ರಹ ಸಂದೇಶವನ್ನಿತ್ತು ಸರ್ವರಿಗೂ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಪಾರುಪತ್ತೆಗಾರ ಶ್ರೀ ಶ್ರೀಶ ಭಟ್ ಕಡೆಕಾರು, ಅಧ್ಯಕ್ಷ ಜಯರಾಮ ಆಚಾರ್ಯ, ಕಾರ್ಯದರ್ಶಿ ರವೀಂದ್ರ ಆಚಾರ್ಯ, ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಪದ್ಮಲತಾ ವಿಷ್ಣು, ಸದಸ್ಯರಾದ ವಾದಿರಾಜ ಆಚಾರ್ಯ ರವಿಪ್ರಕಾಶ್ ಭಟ್, ರಘುಪತಿ ರಾವ್, ಉಡುಪ, ಶ್ರೀಮತಿ ಅಮಿತಾ ಕ್ರಮಧಾರಿ, ರಮಾಕಾಂತ್ ಭಟ್, ಮೊದಲಾದವರು ಉಪಸ್ಥಿತರಿದ್ದರು.







