ಬೈಂದೂರು: ಶಿರೂರಿನ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ ₹3.41 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚಿಸಿರುವ ಘಟನೆ ವರದಿಯಾಗಿದೆ.
ಶಿರೂರು ನ್ಯೂ ಕಾಲೋನಿ ನಿವಾಸಿ ಬೀಬಿ ಸುಹೇಲಾ (37) ಅವರು ಬ್ಯಾಂಕ್ ಆಫ್ ಬರೋಡಾ, ಶಿರೂರು ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಜೂನ್ 15, 2026ರಂದು ಅವರ ಖಾತೆಯಲ್ಲಿ ಒಟ್ಟು ₹4 ಲಕ್ಷ ಹಣ ಜಮಾ ಇತ್ತು ಎನ್ನಲಾಗಿದೆ.
ಜೂನ್ 20ರಂದು ಬೆಳಿಗ್ಗೆ 8.41ರಿಂದ 11.53ರ ನಡುವಿನ ಅವಧಿಯಲ್ಲಿ, ಯಾರೋ ದುಷ್ಕರ್ಮಿಗಳು ಅವರ ತಿಳುವಳಿಕೆಗೆ ಬಾರದಂತೆ ಖಾತೆಯಲ್ಲಿದ್ದ ₹3,41,000 ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2026ರಂತೆ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆಯ ಕಲಂ 66(D) ಹಾಗೂ BNS ಕಲಂ 318(2), 318(4) ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ.







