ಪಣಿಯಾಡಿ: ಇಲ್ಲಿನ ಶ್ರೀ ಅನಂತಪದ್ಮನಾಭ ದೇವರ ದೇವಸ್ಥಾನದಲ್ಲಿ ಇದೇ ತಿಂಗಳ 25 ರ ಶುಕ್ರವಾರದಂದು ನಡೆಯಲಿರುವ ಅನಂತ ವ್ರತದ ಅಂಗವಾಗಿ ಸಾರ್ವಜನಿಕ ಭಕ್ತರಿಗಾಗಿ ‘ಚತುರ್ದಶ ಪ್ರದಕ್ಷಿಣೆ’ ಎಂಬ ವಿಶೇಷ ಸೇವೆಯನ್ನು ಪರಿಚಯಿಸಲಾಗಿದೆ. ಈ ಸೇವೆಯ ಮಾಹಿತಿ ಒಳಗೊಂಡ ಕರಪತ್ರವನ್ನು ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿ ದರು.
ಹದಿನಾಲ್ಕು ಲೋಕಗಳ ಒಡೆಯನಾದ ಶ್ರೀ ಅನಂತಪದ್ಮನಾಭ ದೇವರ ಚತುರ್ದಶ ನಾಮಗಳನ್ನು ಭಕ್ತಿಪೂರ್ವಕವಾಗಿ ಉಚ್ಚರಿಸುತ್ತಾ ದೇವರಿಗೆ ಹದಿನಾಲ್ಕು ಪ್ರದಕ್ಷಿಣೆಗಳನ್ನು ಸಮರ್ಪಿಸುವುದು ಈ ಸೇವೆಯ ವೈಶಿಷ್ಟ್ಯವಾಗಿದೆ. ನಾಮಸ್ಮರಣೆ ಮತ್ತು ಪ್ರದಕ್ಷಿಣೆಯ ಮೂಲಕ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರಿಗೆ ಅವಕಾಶ ಕಲ್ಪಿಸುವ ಸರಳ ಹಾಗೂ ಶ್ರದ್ಧಾಪೂರ್ಣ ಸೇವೆ ಇದಾಗಿದೆ.
ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅನಂತ ವ್ರತವನ್ನು ಪ್ರತಿವರ್ಷ ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುತ್ತಿದ್ದು, ವಿವಿಧೆಡೆಗಳಿಂದ ಆಗಮಿಸುವ ಭಕ್ತರು ಶ್ರೀ ದೇವರ ದರ್ಶನ ಪಡೆದು ಸೇವೆಗಳನ್ನು ಸಲ್ಲಿಸುತ್ತಾರೆ. ಈ ಬಾರಿಯ ಅನಂತ ವ್ರತವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ಸರಳವಾದ ‘ಚತುರ್ದಶ ಪ್ರದಕ್ಷಿಣೆ’ ಸೇವೆಯನ್ನು ವಿಶೇಷವಾಗಿ ಪರಿಚಯಿಸಲಾಗಿದೆ.
ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ,ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್,ಅನಂತ ವಿಪ್ರ ಬಳಗದ ಶ್ರೀ ವಿಜಯರಾಘವ ರಾವ್ ಶ್ರೀ ನಾರಾಯಣ ಮಡಿ, ಶ್ರೀ ಶ್ರೀನಿವಾಸ ಆಚಾರ್ಯ,ಇಂದ್ರಾಳಿ ದೇವಸ್ಥಾನದ ಶ್ರೀ ಕುಶಲ ಶೆಟ್ಟಿ, ಶ್ರೀ ಶ್ರೀಶ ನಾಯಕ್, ಪತಂಜಲಿ ಯೋಗ ಶಿಕ್ಷಣದ ಶ್ರೀ ವಿಶ್ವನಾಥ ಭಟ್, ರಾಜ್ಯ ಸಮಿತಿ ಸದಸ್ಯ ಶ್ರೀ ಕೆ.ರಾಘವೇಂದ್ರ ಭಟ್, ಶ್ರೀಮತಿ ಭಾರತಿ ಕೃಷ್ಣಮೂರ್ತಿ,
ಚಂದ್ರಶೇಖರ್ ಶೆಟ್ಟಿ, ನಾಗರಾಜ ಪಣಿಯಾಡಿ,ಅನಂತ ವಿಪ್ರ ಬಳಗದ ಸದಸ್ಯರು, ಏಕದಂತ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಅನೇಕ ಭಕ್ತರು ಭಾಗವಹಿಸಿದ್ದರು.






