Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇಸ್ರೋ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

Dhrishya News by Dhrishya News
08/09/2026
in ಸುದ್ದಿಗಳು
0
ಇಸ್ರೋ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ
0
SHARES
9
VIEWS
Share on FacebookShare on Twitter

ಸಿಪಿಐ(ಎಂ) ) ಇಸ್ರೋ ಖಾಸಗೀಕರಣವನ್ನು ಖಂಡಿಸಿದೆ ಮತ್ತು ಅದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದೆ.

ರಕ್ಷಣೆ, ಕೃಷಿ, ವಿಪತ್ತು ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ದೂರಸಂವೇದನೆಯ ಕ್ಷೇತ್ರಗಳಿಗೆ ಇಸ್ರೋ ನೀಡಿರುವ ಕೊಡುಗೆಗಳು ಭಾರತದ ಅರ್ಥವ್ಯವಸ್ಥೆಗೆ ಮತ್ತು ಭದ್ರತೆಗೆ ಆಯಕಟ್ಟಿನ ಮಹತ್ವ ಹೊಂದಿವೆ. ಇಂತಹ ನಿರ್ಣಾಯಕ, ಸ್ವಾವಲಂಬಿ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದರಿಂದ ಪ್ರಮುಖ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಖಾಸಗಿ ವಲಯದ ಮೇಲೆ ಅನಗತ್ಯ ಅವಲಂಬನೆ ಉಂಟಾಗುತ್ತದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಇಸ್ರೋ ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ ಎಂಬ IN-SPACe ಅಧ್ಯಕ್ಷ ಪವನ್ ಗೋಯೆಂಕಾ ಅವರ ಟಿಪ್ಪಣಿಗಳು ಸಮರ್ಪಿತ ಭಾರತೀಯ ವಿಜ್ಞಾನಿಗಳು ಏಳು ದಶಕಗಳಲ್ಲಿ ನಿರ್ಮಿಸಿದ ಬಾಹ್ಯಾಕಾಶ ಸಂಶೋಧನಾ ಮೂಲಸೌಕರ್ಯವನ್ನು ಖಾಸಗಿ ಮಂದಿಗೆ ಹಸ್ತಾಂತರಿಸುವ ದುಷ್ಟ ಯೋಜನೆಯನ್ನು ಪ್ರಕಟಗೊಳಿಸುತ್ತದೆ. ಈ ಪಲ್ಲಟ ಭಾರತೀಯ ಬಾಹ್ಯಾಕಾಶ ನೀತಿ 2023 ರ ಭಾಗವಾಗಿದೆ, ಈ ನೀತಿ ಇಡೀ ಬಾಹ್ಯಾಕಾಶ ವಲಯವನ್ನು ಖಾಸಗಿ ಉದ್ಯಮಕ್ಕೆ ತೆರೆದಿದೆ ಮತ್ತು ವಿದೇಶಿ ಹೂಡಿಕೆಗೆ ಉದಾರ ರಿಯಾಯಿತಿಗಳನ್ನು ನೀಡಿದೆ, ಇವೆಲ್ಲಕ್ಕೂಉಡಾವಣಾ ಕಾರ್ಯಾಚರಣೆಗಳಲ್ಲಿ ವೆಚ್ಚ-ದಕ್ಷತೆ ಎಂಬ ಮೋಸಗೊಳಿಸುವ ಹೆಸರು ಕೊಡಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮಾರ್ಚ್ 2026 ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ, ಪಾರದರ್ಶಕತೆ ಅಥವ ಉತ್ತರದಾಯಿತ್ವ ಇಲ್ಲದೆ ಸಾರ್ವಜನಿಕ ಸ್ವತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಇಸ್ರೋ ಸಿಬ್ಬಂದಿ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಇಸ್ರೋ ಮುಖ್ಯಸ್ಥರಿಗೆ ಬರೆದ ಜಂಟಿ ಪತ್ರದ ಮೂಲಕ ಎತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೋ ನೀಡಿರುವ ಸ್ಪಷ್ಟೀಕರಣವು, ಈ ನೀತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಬಹುದು ಎಂಬ ಮೂಲ ಆತಂಕವನ್ನು ಪರಿಹರಿಸಲು ಇದು ವಿಫಲವಾಗಿದೆ ಎಂದಿರುವ ಪೊಲಿಟ್‌ಬ್ಯುರೊ, ಸಿಪಿಐ(ಎಂ) ದೇಶದ ಆಯಕಟ್ಟಿನ ಹಿತಾಸಕ್ತಿಗಳ ರಕ್ಷಣೆಯ ಪರವಾಗಿ ಮತ್ತು ಇಸ್ರೋವನ್ನು ಬಲಪಡಿಸಲು ಒತ್ತಾಯಿಸುತ್ತಿರುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಯ ಪರವಾಗಿ ನಿಲ್ಲುತ್ತದೆ ಎನ್ನುತ್ತ ಇಂತಹ ಒಂದು ಬಹುಮಹತ್ವದ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಅದು ವಿರೋಧಿಸುವುದಾಗಿ ಹೇಳಿದೆ.

ಸುರೇಶ್ ಕಲ್ಲಾಗರ
ಕಾರ್ಯದರ್ಶಿ

Previous Post

ಶಾಲಾ ಮಕ್ಕಳಿಗೆ ಸೈಕಲ್ ಮತ್ತು ಛತ್ರಿ ವಿತರಣಾ ಕಾರ್ಯಕ್ರಮ

Next Post

ಕುಂದಾಪುರದಲ್ಲಿ ಮನೆಯ ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕುಂದಾಪುರದಲ್ಲಿ ಮನೆಯ ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

ಕುಂದಾಪುರದಲ್ಲಿ ಮನೆಯ ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. — ವಿಜಯ ಕೊಡವೂರು

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. — ವಿಜಯ ಕೊಡವೂರು

09/09/2026
ಉಡುಪಿಯಲ್ಲಿ ಕಣ್ಮನ ಸೆಳೆದ ಮುದ್ದು ಕೃಷ್ಣ ಸ್ಪರ್ಧೆ–2026..!

ಉಡುಪಿಯಲ್ಲಿ ಕಣ್ಮನ ಸೆಳೆದ ಮುದ್ದು ಕೃಷ್ಣ ಸ್ಪರ್ಧೆ–2026..!

09/09/2026
ಹಿರಿಯ ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಜಿ. ಅಮೀನ್ ನಿಧನ

ಹಿರಿಯ ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಜಿ. ಅಮೀನ್ ನಿಧನ

09/09/2026
ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!

ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!

09/09/2026

Recent News

imunify-bot-check