ಉಡುಪಿ: ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ಕೃಷ್ಣ ಮಠಕ್ಕೆ ಕೇರಳ ರಾಜ್ಯಸಭಾ ಸದಸ್ಯರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಚಾರಕರಾದ ಸದಾನಂದ ಮಾಸ್ಟರ್ ಅವರು ಇಂದು ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಸದಾನಂದ ಮಾಸ್ಟರ್ ಅವರನ್ನು ಗೌರವಿಸಿ, ಶ್ರೀ ಕೃಷ್ಣನ ಪ್ರಸಾದವನ್ನು ನೀಡಿ ಆಶೀರ್ವದಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಮಠದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಪರಸ್ಪರ ಮಾತುಕತೆ ನಡೆಯಿತು.







