ಬ್ರಹ್ಮಾವರ: ಹತ್ತು ಕೆರೆ ಮತ್ತು ಹತ್ತು ಕೇರಿಗಳ ದೇವಾಲಯಗಳ ನಗರ ಬಾರಕೂರು ಪರಿಸರದ ಅನೇಕ ಸಾರ್ವಜನಿಕ ಶ್ರೀ ಗಣೇಶೋತ್ಸವದಗಣಪತಿ ವಿಗ್ರಹ ವಿಸರ್ಜನೆ ನಡೆಯುವ ಕೋಟೇಕೇರಿಯ ವಿಶಾಲ ಸರೋವರವನ್ನು ಇಲ್ಲಿನ ನಾನಾ ಯುವಕ ಸಂಘ, ಸಮಾಜಸೇವಾ ಸಂಘದ ಯುವಕರಿಂದ ಶುಕ್ರವಾರ ಸ್ಚಚ್ಚತೆ ನಡೆಯಿತು.
ಹಲವಾರು ವರ್ಷದಿಂದ ಹೂಳು ಮತ್ತು ಪಾಚಿ ಮತ್ತು ಗಿಡಗಂಟಿಗಳಿoದ ಮುಚ್ಚಿದಂತಿದ್ದ ಸರೋವರದ ಪಾಚಿ ಹುಲ್ಲುಗಳನ್ನು ಮತ್ತು ಗಣಪತಿ ವಿಸರ್ಜನೆಗೆ ಸಾಗುವ ದಾರಿಯನ್ನು ದೋಣೀಯ ಮೂಲಕ ಸಾಗಿ ಸ್ವಚ್ಚ ಮಾಡಿ ಟೆಂಪೋ ಒಂದರಲ್ಲಿ ಊರ ಹೊರಗಿನ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ರಾಜಧಾನಿ ರಾಜ ಗಣೇಶೋತ್ಸವ ಸಮಿತಿಯ ರಕ್ಷೀತ್,ಶೌರ್ಯ ತಂಡದ ಮಂಜುನಾಥ್ ಪೂಜಾರಿ, ರೋಟರಿಯ ಅಜಿತ್ ಕುಮಾರ್ ಶೆಟ್ಟಿ, ಗಣೇಶ ಆಚಾರ್ಯ, ಆರ್ ಸಿಸಿಯ ಸಂಧೀಪ್ ಅಮೀನ್ ಸೇರಿದಂತೆ ಅನೇಕರು ಸ್ವಚ್ಚತಾ ಕಾರ್ಯದಲ್ಲಿ ಇದ್ದರು.









