ಪರ್ಕಳ : ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ ವನ್ನು ಪರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮೀರಾ ಫೆರ್ನಾಂಡಿಸ್ ಮಾಹೆ ಕೆ ಹೆಚ್ ಉದ್ಯೋಗಿ ಧ್ವಜಾರೋಹಣ ಮಾಡುವ ಮೂಲಕ ವಿಜೃಂಭಣೆ ಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇಶಕ್ಕೋಸ್ಕರ ಪ್ರಾಣ ತೆತ್ತ ಹುತಾತ್ಮ ರನ್ನು ಸ್ಮರಿಸಿ ಅವರ ಗುಣಗಾನ ಮಾಡಲಾಯಿತು. ಹಾಗೂ ದೇಶಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆ ಯನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಪರ್ಕಳ ಕಾಂಗ್ರೆಸ್ ನ ಮುಖಂಡರಾದ ಮೋಹನ್ ದಾಸ್ ನಾಯಕ್ ಪರ್ಕಳ, ಬಿ. ಜೈರಾಮ್ ಪರ್ಕಳ, ಗಣೇಶರಾಜ್ ಸರಳೆಬೆಟ್ಟು, ಆದರ್ಶ್ ಶೆಟ್ಟಿಗಾರ್ ಕೆಳಪರ್ಕಳ,ರಾಮಕೃಷ್ಣ (ಮುನ್ನ ) ಪರ್ಕಳ, ದೇವಿಪ್ರಸಾದ್ ಆಚಾರ್ಯ ಪರ್ಕಳ, ಸದಾನಂದ ಪೂಜಾರಿ ಪರ್ಕಳ, ಅಪ್ರಾಯ ನಾಯ್ಕ್, ಚೇತನ್ ಕುಡ್ವಾ, ಅಪ್ಪು ನಾಯ್ಕ್, ಅಶ್ವಿನಿ ಶೆಟ್ಟಿಗಾರ್, ರಾಜೇಶ್ ಪ್ರಭು, ಉಮೇಶ್ ನಾಯ್ಕ್, ಅರುಣ್ ಹಿರಿಯಡ್ಕ,ಪ್ರಕಾಶ್ ನಾಯ್ಕ್, ಸಚ್ಚಿದಾ ನಂದ, ಕೆ ದೇವೇಂದ್ರ ಕಾಮತ್, ಸುಧೀರ್ ಶೆಟ್ಟಿ ಹಿರಿಯಡ್ಕ, ಬಾಲಕೃಷ್ಣ ಶೆಟ್ಟಿಗಾರ್ ಕೆಳ ಪರ್ಕಳ, ಹೊನ್ನಯ್ಯ್ ಆಚಾರ್ಯ ಉಪಸ್ಥಿತರಿದ್ದರು.







