Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ದೇಶಭಕ್ತಿ ಹಾಗೂ ಸೇವಾ ಬದ್ಧತೆಯೊಂದಿಗೆ ಮಾಹೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

Dhrishya News by Dhrishya News
15/08/2026
in ಸುದ್ದಿಗಳು
0
ದೇಶಭಕ್ತಿ ಹಾಗೂ ಸೇವಾ ಬದ್ಧತೆಯೊಂದಿಗೆ ಮಾಹೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
0
SHARES
3
VIEWS
Share on FacebookShare on Twitter

ಮಣಿಪಾಲ, ಆಗಸ್ಟ್ 15, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ತನ್ನ ಕ್ಯಾಂಪಸ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿತು.

ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ದೇಶದ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಜತೆಗೆ, ಶಿಕ್ಷಣ, ಆರೋಗ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾಹೆಯ ನಿರಂತರ ಸೇವಾ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದರು.

ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಧ್ವಜಾರೋಹಣ ಮಾಡಿದರು. ನಂತರ ಮೊಳಗಿದ ರಾಷ್ಟ್ರಗೀತೆ ಇಡೀ ಮಾಹೆ ಸಮುದಾಯವನ್ನು ರಾಷ್ಟ್ರಾಭಿಮಾನ ಮತ್ತು ಒಗ್ಗಟ್ಟಿನ ಪ್ರತೀಕವಾಗಿ ಒಂದೆಡೆ ಸೇರಿಸಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, “ರಾಷ್ಟ್ರ ನಿರ್ಮಾಣದತ್ತ ನಮ್ಮ ಜವಾಬ್ದಾರಿಯನ್ನು ಸ್ವಾತಂತ್ರ್ಯ ದಿನ ನೆನಪಿಸುತ್ತದೆ. ಜ್ಞಾನ, ಆವಿಷ್ಕಾರ ಮತ್ತು ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಬಹಳ ದೊಡ್ಡದು. ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಒದಗಿಸಲು ಮಾಹೆ ಸದಾ ಬದ್ಧ. ನಮ್ಮ ವಿದ್ಯಾರ್ಥಿಗಳನ್ನು ಶ್ರೇಷ್ಠ ವೃತ್ತಿಪರರನ್ನಾಗಿ ರೂಪಿಸುವ ಮೂಲಕ, ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡಲು ನಾವು ಅವರನ್ನು ಅಣಿಗೊಳಿಸುತ್ತಿದ್ದೇವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಹೆಯ ಹಿರಿಯ ಅಧಿಕಾರಿಗಳಾದ ಸಹ ಕುಲಪತಿಗಳಾದ ಡಾ. ಕರುಣಾಕರ್ ಎ. ಕೋಟೆಗಾರ್, ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ (ನಿವೃತ್ತ), ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಹಾಗೂ ಸಿಒಒ ಡಾ. ಆನಂದ್ ವೇಣುಗೋಪಾಲ್ ಸೇರಿದಂತೆ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು ಈ ಸಂಭ್ರಮಾಚರಣೆಗೆ ಮೆರುಗು ನೀಡಿದರು.

ಮಣಿಪಾಲದ ಎಂಸಿಒಎನ್ ಡೀನ್ ಡಾ. ಜುದಿತ್ ಏಂಜಲಿಟ್ಟಾ ನೊರೊನ್ಹಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವ ಮಾಹೆ ಸಮುದಾಯದ ದೃಢ ಸಂಕಲ್ಪದೊಂದಿಗೆ ಈ ಸ್ವಾತಂತ್ರ್ಯ ದಿನಾಚರಣೆ ಸಂಪನ್ನಗೊಂಡಿತು.

ಸ್ವಾತಂತ್ರ್ಯ ದಿನದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ 26 ತುಕಡಿಗಳ ಪೈಕಿ ವಿಜೇತರ ಪಟ್ಟಿ ಹೀಗಿದೆ:
• ಪ್ರಥಮ ಸ್ಥಾನ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ
• ದ್ವಿತೀಯ ಸ್ಥಾನ: ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಮಣಿಪಾಲ
• ತೃತೀಯ ಸ್ಥಾನ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೋಫೆಷನ್ಸ್, ಮಣಿಪಾಲ

ಮಣಿಪಾಲದ ಎಂಸಿಒಎನ್‌ನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಉಪನ್ಯಾಸಕಿ ಪ್ರತಿಭಾ ಲಿಡಿಯಾ ಬ್ರಾಗ್ಸ್ ಅವರು ನಿರೂಪಕರಾಗಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸಿದರು.

Previous Post

ಉಡುಪಿಯಲ್ಲಿ ಸ್ಮರಣಿಕಾ ಸಂಸ್ಥೆಯ 34ನೇ ವಾರ್ಷಿಕೋತ್ಸವ ಸಂಭ್ರಮ :ಪ್ರತಿ ಖರೀದಿಯ ಮೇಲೆ 34% ವಿಶೇಷ ರಿಯಾಯಿತಿ..!

Next Post

ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ..!

ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

15/08/2026
20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

15/08/2026
ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ..!

ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯತೋತ್ಸವ ಕಾರ್ಯಕ್ರಮ..!

15/08/2026
ದೇಶಭಕ್ತಿ ಹಾಗೂ ಸೇವಾ ಬದ್ಧತೆಯೊಂದಿಗೆ ಮಾಹೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ದೇಶಭಕ್ತಿ ಹಾಗೂ ಸೇವಾ ಬದ್ಧತೆಯೊಂದಿಗೆ ಮಾಹೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

15/08/2026

Recent News