Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

‘ಭಜನೋತ್ಸವ’ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : 'ಭಜನೋತ್ಸವ-2026' ಸಂಪನ್ನ

Dhrishya News by Dhrishya News
03/08/2026
in ಸುದ್ದಿಗಳು
0
‘ಭಜನೋತ್ಸವ’ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್
0
SHARES
16
VIEWS
Share on FacebookShare on Twitter

ಉಡುಪಿ:ಇಂದಿನ ತಾಂತ್ರಿಕ ಯುಗದಲ್ಲಿ ಒತ್ತಡ ನಿವಾರಣೆ, ಏಕಾಗ್ರತೆ ಸಿದ್ಧಿಯ ಜೊತೆಗೆ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ವಿಧಾನ ಭಜನೆ. ಭಜನೋತ್ಸವದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ. ಭಜನಾ ಸಂಸ್ಕೃತಿಯ ಗತ ವೈಭವ ಮರುಕಳಿಸುವಂತಾಗಲಿ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ವತಿಯಿಂದ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಇದರ ಆಶ್ರಯದಲ್ಲಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ‘ಭಜನೋತ್ಸವ 2026’ನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನವನ್ನಿತರು.

ದಾಸವರೇಣ್ಯರು ರಚಿಸಿರುವ ಭಜನೆಗಳು ವೇದ, ಉಪನಿಷತ್ ಗಳ ಸತ್ವಗಳನ್ನೊಳಗೊಂಡಿರುವ ಜೊತೆಗೆ ತತ್ವಾದರ್ಶಗಳನ್ನು ಸಾರುವ ಅತ್ಯಮೂಲ್ಯ ಕೃತಿಗಳಾಗಿವೆ. ಸರಳ ಭಾಷೆಯಲ್ಲಿರುವ ಭಜನೆ ಮಾನಸಿಕ ನೆಮ್ಮದಿ ಮತ್ತು ಭಗವಂತನ ಸಾಕ್ಷಾತ್ಕಾರಕ್ಕೆ ರಹದಾರಿಯಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಯುವ ಜನತೆಯ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸದೃಢ ಮನಸ್ಥಿತಿಗೆ ಭಜನೆಯೊಂದೇ ಪರಿಹಾರ ಮಾರ್ಗವಾಗಿದೆ. ವಿದ್ಯಾರ್ಥಿಗಳ ಸಹಿತ ಎಲ್ಲ ವಯೋಮಾನದ ಜನತೆ ನಾಡಿನ ಭವ್ಯ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಮೌಲ್ಯಾಧಾರಿತ ಭಜನೆಯ ಸದುಪಯೋಗವನ್ನು ಪಡೆಯುವುದು ಇಂದಿನ ಅಗತ್ಯತೆಯಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ಜಿಲ್ಲಾ ನಿರ್ದೇಶಕ ಬಿ.ನಾಗರಾಜ ಶೆಟ್ಟಿ, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಮಲ್ಪೆ ಶ್ರೀ ವಿಠೋಬ ಭಜನಾ ಮಂದಿರ – ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜನ ಜಾಗೃತಿ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್., ಸುಬ್ರಹ್ಮಣ್ಯ ಆಚಾರ್ಯ ಹಿರಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಾಶoಸನೆಗೈದರು.

ಭಜನೋತ್ಸವದ ಆಯೋಜನೆಗೆ ಆಶ್ರಯದಾತರಾಗಿ ಸಹಕಾರ ನೀಡಿದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರನ್ನು ಉಡುಪಿ ತಾಲೂಕು ಭಜನಾ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ವಜ್ರಾಕ್ಷಿ ಪಿ. ದಾಸ್, ವಲಯಗಳ ಸಂಯೋಜಕರಾದ ಪ್ರದೀಪ್ ಕುಮಾರ್, ಲತಾ ನಾಯ್ಕ್, ರೂಪಾಶ್ರೀ, ಶೋಭಾ ಪೂಜಾರಿ, ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರಭಾವತಿ, ಸೇವಾ ನಿರತೆ ಹೇಮಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್ ಸಹಿತ ಯೋಜನೆಯ ಪ್ರಮುಖರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ತಾಲೂಕಿನಾದ್ಯoತ 50ಕ್ಕೂ ಮಿಕ್ಕಿ ಭಜನಾ ಮಂಡಳಿಗಳ 750ಕ್ಕೂ ಮಿಕ್ಕಿ ಭಜಕರು ಭಜನೋತ್ಸವದ ಕುಣಿತ ಭಜನೆಯಲ್ಲಿ ಪಾಲ್ಗೊಂಡು ಭಾವಪರವಶರಾಗಿ ಸಂಭ್ರಮಿಸಿದರು.

ತಾಲೂಕು ಭಜನಾ ಪರಿಷತ್ ವತಿಯಿಂದ ಪ್ರತೀ ಭಜನಾ ಮಂಡಳಿಗಳ ಪ್ರಮುಖರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶ್ರೀ ದೇವಳದಲ್ಲಿ ನಡೆದ ಮಹಾ ಪೂಜೆಯಲ್ಲಿ ಸಾಮೂಹಿಕವಾಗಿ ಭಾಗವಹಿಸಿ, ಅನ್ನ ಪ್ರಸಾದ ಸ್ವೀಕಾರದೊಂದಿಗೆ ಭಜನೋತ್ಸವವು ಸಮಾಪನಗೊಂಡಿತು.

Previous Post

ಗಂಗೊಳ್ಳಿ: ಕೋಳಿ ಅಂಕ ಜುಗಾರಿ ಮೇಲೆ ಪೊಲೀಸರ ದಾಳಿ – ಇಬ್ಬರ ಬಂಧನ, 10 ಕೋಳಿಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳ ವಶ..!

Next Post

ತೆಕ್ಕಟ್ಟೆಯಲ್ಲಿ ವಿಘ್ನೇಶ್ವರ ಎಂಟರ್‌ಪ್ರೈಸಸ್ ನೂತನ ಎಲೆಕ್ಟ್ರಿಕ್ ವಾಹನಗಳ ಶೋರೂಂ ಹಾಗೂ ಸರ್ವೀಸ್ ಸ್ಟೇಷನ್ ಉದ್ಘಾಟನೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ತೆಕ್ಕಟ್ಟೆಯಲ್ಲಿ ವಿಘ್ನೇಶ್ವರ ಎಂಟರ್‌ಪ್ರೈಸಸ್ ನೂತನ ಎಲೆಕ್ಟ್ರಿಕ್ ವಾಹನಗಳ ಶೋರೂಂ ಹಾಗೂ ಸರ್ವೀಸ್ ಸ್ಟೇಷನ್ ಉದ್ಘಾಟನೆ..!

ತೆಕ್ಕಟ್ಟೆಯಲ್ಲಿ ವಿಘ್ನೇಶ್ವರ ಎಂಟರ್‌ಪ್ರೈಸಸ್ ನೂತನ ಎಲೆಕ್ಟ್ರಿಕ್ ವಾಹನಗಳ ಶೋರೂಂ ಹಾಗೂ ಸರ್ವೀಸ್ ಸ್ಟೇಷನ್ ಉದ್ಘಾಟನೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

17/09/2026
ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

17/09/2026
ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

17/09/2026
ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

17/09/2026

Recent News

imunify-bot-check