ಬ್ರಹ್ಮಾವರ: ಯಕೃತ್ತಿನ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಆಗಸ್ಟ್ 7ರಂದು ಉಚಿತ ಲಿವರ್ ಫೈಬ್ರೋಸ್ಕ್ಯಾನ್ (FibroScan) ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಫ್ಯಾಟಿ ಲಿವರ್, ಲಿವರ್ ಫೈಬ್ರೋಸಿಸ್ ಸೇರಿದಂತೆ ಯಕೃತ್ತಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಈ ತಪಾಸಣೆ ನೆರವಾಗಲಿದೆ.
ಶಿಬಿರದಲ್ಲಿ ಎಂಬಿಬಿಎಸ್, ಎಂಡಿ (ಜನರಲ್ ಮೆಡಿಸಿನ್) ತಜ್ಞ ವೈದ್ಯ ಡಾ. ಶರತ್ ಮದ್ಯಸ್ತ ಅವರು ಉಪಸ್ಥಿತರಿದ್ದು, ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ಯಕೃತ್ತಿನ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ.








