Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.

Dhrishya News by Dhrishya News
23/06/2026
in ಸುದ್ದಿಗಳು
0
ಯಕ್ಷಗಾನ ಕಲಾರಂಗದ 99ನೆಯ ಮನೆ ಹಸ್ತಾಂತರ.
0
SHARES
59
VIEWS
Share on FacebookShare on Twitter

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರ್ಷಿತ್ (ಶ್ರೀಮತಿ ದೇವಕಿ ಮತ್ತು ಶ್ರೀ ಸುಂದರ ಪೂಜಾರಿ ಇವರ ಪುತ್ರ) ಇವನಿಗೆ ಬ್ರಹ್ಮಾವರ ತಾಲೂಕಿನ ಹಾರಾಡಿಯ ಮೂಡು ಕುಕ್ಕುಡೆಯಲ್ಲಿ, ಬೈಕಾಡಿ ಕೃಷ್ಣಯ್ಯ ಮತ್ತು ಯಶೋದಾದೇವಿ ಇವರ ಪುತ್ರ ಶ್ರೀ ಬಿ. ನರಹರಿ ಹಾಗೂ ಸಹೋದರರು ತಮ್ಮ ಮಾತೃಶ್ರೀಯವರ ಶತಾಬ್ದಿ ಸಂದರ್ಭದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಯಶೋದಾಕೃಷ್ಣ’ 23.06.2026 ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಮಣಿಪಾಲ ಟೆಕ್ನಾಲಜೀಸ್ ಲಿ. ನ ಕಾರ್ಯನಿರ್ವಾಹಕ ಅಧ್ಯಕ್ಷ ಶ್ರೀ ಗೌತಮ್ ಪೈ ಅವರು ಯಕ್ಷಗಾನ ಕಲಾರಂಗ ಮಾಡುತ್ತಿರುವ ಯಕ್ಷಗಾನ ಕಲೆ ಕಲಾವಿದರ ಕ್ಷೇಮಚಿಂತನೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಮಾಜಪರ ಕಾಳಜಿಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಹರ್ಷಿತನಿಗೆ ಚೆನ್ನಾಗಿ ಕಲಿತು ಬೇರೆಯವರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆಯ ಬೇಕೆಂದು ಶುಭ ಹಾರೖಸಿದರು.

ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣದಾಸ ಆಸ್ರಣ್ಣರು ಮಾತನಾಡಿ ಮನುಷ್ಯನಿಗೆ ಮನೆ ಕೇವಲ ಆಶ್ರಯ ತಾಣವಷ್ಟೇ ಅಲ್ಲ, ಅವನ ಎಲ್ಲಾ ಇಷ್ಟಾರ್ಥಗಳ ಈಡೇರಿಕೆಗೆ ಅದು ಅತ್ಯಂತ ಮುಖ್ಯ ಎಂಬುದನ್ನು ಸೊಗಸಾಗಿ ವಿವರಿಸಿ, ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಕಲಾರಂಗದ ಕೊಡುಗೆ ಅನನ್ಯ ಎಂದು ಹೇಳಿದರು. ಮಣಿಪಾಲ ಟೆಕ್ನಾಲಜೀಸ್ ಲಿ.ನ ಸೀನಿಯರ್ ಜನರಲ್ ಮ್ಯಾನೇಜರ್,ಮನೆಯ ಪ್ರಾಯೋಜಕರೂ ಆದ ಬಿ. ನರಹರಿ ಯಕ್ಷಗಾನ ಕಲಾರಂಗ ಬಡ ವಿದ್ಯಾರ್ಥಿಗೆ ತಮ್ಮ ಮಾತಾಪಿತರ ನೆನಪಿನಲ್ಲಿ ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನಮ್ಮ ಕುಟುಂಬವನ್ನು ಧನ್ಯರನ್ನಾಗಿಸಿದೆ ಎಂದರು. ಮಣಿಪಾಲ ಮೀಡಿಯ ಲಿ. ನ ನಿವೃತ್ತ ಅಧಿಕಾರಿ ನಾರಾಯಣ ಬಿ.ಕೆ. ತಮ್ಮ ತೀರ್ಥರೂಪರ ಶ್ರದ್ಧೆಯ ದುಡಿಮೆಗೆ ಪೈ ಬಂಧುಗಳು ತೋರಿದ ಔದಾರ್ಯ, ತಮ್ಮ ತಾಯಿಯ ಪರಿಶ್ರಮದ ದುಡಿಮೆಯನ್ನು ಸ್ಮರಿಸಿ ಕೊಂಡರು. ವೇದಿಕೆಯಲ್ಲಿ ಮಣಿಪಾಲ್ ಟೆಕ್ನಾಲಾಜಿಸ್ ನ ಸಿ.ಇ.ಓ. ಅಭಯ್ ಗುಪ್ತೆ, ಗ್ರೂಪ್ ಸಿ.ಎಚ್.ಆರ್.ಒ.ಪ್ರಮೋದ್ ಫೆರ್ನಾಂಡಿಸ್ ಹಾಗು ಜ್ಯೋತಿ ನರಹರಿ, ಲೋಲಾಕ್ಷಿ ರತ್ನಾಕರ, ಭಾರತಿ ನಾರಾಯಣ, ಉಪೇಂದ್ರ ಸೋಮಯಾಜಿ, ಮನೋಜ ಬೈಕಾಡಿ, ಡಾ. ಅನನ್ಯಾ ಬೈಕಾಡಿ, ಶ್ರೀಪತಿ ಆಚಾರ್ಯ, ಪ್ರಸನ್ನ ಕುಮಾರ್, ಮಣಿಪಾಲ್ ಗ್ರೂಪ್ ನ ರಾಜೇಶ್ ಶೇಟ್,ಮಧು ಬಿ.ಎಸ್., ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು. ಡಾ.ವಿರೂಪಾಕ್ಷ ದೇವರ ಮನೆ, ವಿಷ್ಣುಮೂರ್ತಿ ಭಟ್, ರಾಮಚಂದ್ರ ಉಪಾಧ್ಯ, ಗುರುರಾಜ ಭಟ್,ಮಹಾಲಕ್ಷೀ ಸೋಮಯಾಜಿ, ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರುಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಯು.ಅನಂತರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರ್, ಡಾ.ರಾಜೇಶ ನಾವುಡ, ಎಚ್. ಎನ್.ವೆಂಕಟೇಶ್, ಗಣೇಶ ಬ್ರಹ್ಮಾವರ, ಸುಜಯೀಂದ್ರ ಹಂದೆ,ದಿನೇಶ್ ಪೂಜಾರಿ,ಅಜಿತ್ ಕುಮಾರ್,ಪ್ರಭಾಕರ ಭಂಡಿ, ನಾಗರಾಜ ಹೆಗಡೆ,ಜಯರಾಮ ಪಡಿಯಾರ್, ರಘುರಾಮ್ ಬೈಕಾಡಿ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Previous Post

ಹಿರಿಯಡ್ಕ: ₹3.50 ಲಕ್ಷ ಆನ್‌ಲೈನ್ ವಂಚನೆ ಪ್ರಕರಣ ದಾಖಲು

Next Post

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ: ಪಕ್ಷದ ಕಚೇರಿಯಲ್ಲಿ ಪುಷ್ಪನಮನ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

ಉಡುಪಿ: ಶಿಕ್ಷಕಿಯ ಮನೆಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು

11/08/2026
ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

ಕಾರ್ಕಳದಲ್ಲಿ ₹32.68 ಲಕ್ಷ ಆನ್‌ಲೈನ್ ಹೂಡಿಕೆ ವಂಚನೆ

11/08/2026
ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ..!

11/08/2026
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

ಕಥೋಲಿಕ್ ಸಭಾ ಉಡುಪಿ ಪ್ರದೇಶ್ ನ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ 

11/08/2026

Recent News