Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

Dhrishya News by Dhrishya News
10/06/2026
in ಮುಖಪುಟ
0
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

Dr B Unnikrishnan, Dean and Professor in the Department of Community Medicine, Kasturba Medical College (KMC), Mangalore, and Dr. Shiran Shetty, Professor & Unit Head, Department of Gastroenterology & Hepatology, KMC Manipal and Deputy Medical Superintendent, Kasturba Hospital, Manipal (both sitting) were felicitated in MAHE Manipal today. Senior leadership of MAHE (from left to right) Dr. Vinod Thomas, Registrar Evaluation, Dr. Dilip G Naik, Pro Vice Chancellor (Mangalore Campus), Dr Reshmi, Associate Dean of MCHP, Dr H S Ballal, Pro Chancellor, Dr Sharath K Rao, Vice Chancellor, Dr P Giridhar Kini, Registrar, and Dr Anand Venugopal, Chief Operating Officer, MAHE are in the picture.

0
SHARES
14
VIEWS
Share on FacebookShare on Twitter

ಮಣಿಪಾಲ್: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅಂಗಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಂಗಳೂರಿನ ಡೀನ್ ಹಾಗೂ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್ ಡಾ| ಬಿ. ಉನ್ನಿಕೃಷ್ಣನ್ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಪ್ರೊಫೆಸರ್ ಡಾ| ಶಿರನ್ ಶೆಟ್ಟಿ ಅವರು ಪ್ರತಿಷ್ಟಿತ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್, ಎಡಿನ್ ಬರ್ಗ್ (FRCP Edin) ಸಂಸ್ಥೆಯ ಗೌರವಾನ್ವಿತ ಫೆಲೋ ಆಗಿ ಆಯ್ಕೆಯಾದ ನಿಮಿತ್ತ, ಮಣಿಪಾಲದಲ್ಲಿ ಮಂಗಳವಾರ ಸನ್ಮಾಸಲಾಯಿತು. 

ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹಾಗೂ ಕೊಡುಗೆಗಳನ್ನು ನೀಡಿದ ವೈದ್ಯರಿಗೆ ಜಾಗತಿಕ ಮಟ್ಟದ ಮನ್ನಣೆಯಾಗಿ ಕೊಡಮಾಡುವ ಪ್ರತಿಷ್ಠಿತ ರಾಯಲ್ ಕಾಲೇಜ್ ಫೆಲೋಶಿಪ್ ಅನ್ನು ಡಾ| ಬಿ. ಉನ್ನಿಕೃಷ್ಣನ್ ಹಾಗೂ ಡಾ| ಶಿರನ್ ಶೆಟ್ಟಿ ಅವರಿಗೆ ನೀಡಲಾಗಿದೆ.   

ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ‘ಡಾ| ಬಿ. ಉನ್ನಿಕೃಷ್ಣನ್ ಹಾಗೂ ಡಾ| ಶಿರನ್ ಶೆಟ್ಟಿ ಅವರು ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್‌ಬರ್ಗ್‌ನ ಫೆಲೋ ಆಗಿ ಆಯ್ಕೆಯಾಗಿರುವುದು ಮಾಹೆ ಸಂಸ್ಥೆಗೆ ಹಾಗೂ ಇಡೀ ಶೈಕ್ಷಣಿಕ ಮತ್ತು ವೈದ್ಯಕೀಯ ಜಗತ್ತಿಗೆ ಅಪಾರ ಹೆಮ್ಮೆಯ ವಿಷಯ. ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮನ್ನಣೆಯು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ,’ ಎಂದು ತಿಳಿಸಿದರು.

ಮಾಹೆ ಕುಲಪತಿ ಡಾ| ಶರತ್ ಕೆ. ರಾವ್ ಅವರು ಮಾತನಾಡಿ, ʼಡಾ| ಬಿ. ಉನ್ನಿಕೃಷ್ಣನ್ ಹಾಗೂ ಡಾ| ಶಿರನ್ ಶೆಟ್ಟಿ ಅವರ ಈ ಸಾಧನೆ ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಇದು ಎತ್ತಿ ತೋರಿಸುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಆರೋಗ್ಯ ರಕ್ಷಣೆಯ ಪ್ರಗತಿಗೆ ಅವರ ಮುಡುಪಾದ ಸೇವೆ ಸಂಸ್ಥೆಗೆ ಅಪಾರ ಕೀರ್ತಿಯನ್ನು ತಂದಿದೆ ಹಾಗೂ ಇದು ವೈದ್ಯಕೀಯ ಮತ್ತು ಶೈಕ್ಷಣಿಕ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ,ʼ ಎಂದರು.

1681ರಲ್ಲಿ ಆರಂಭವಾದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್‌ಬರ್ಗ್ ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಯಾಗಿದ್ದು, ಜಾಗತಿಕವಾಗಿ ರೋಗಿಗಳ ಆರೈಕೆ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ.

 ಡಾ| ದಿಲೀಪ್ ನಾಯಕ್, ಸಹ ಕುಲಪತಿಗಳು (ಮಂಗಳೂರು ಕ್ಯಾಂಪಸ್) ಸ್ವಾಗತಿಸಿದರು ಹಾಗೂ ಡಾ| ಗಿರಿಧರ ಕಿಣಿ, ಕುಲ ಸಚಿವರು, ಮಾಹೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಾಹೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯ ಕಾಲೇಜಿನ ಹಿರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.

Dr B Unnikrishnan, Dean and Professor in the Department of Community Medicine, Kasturba Medical College (KMC), Mangalore, and Dr. Shiran Shetty, Professor & Unit Head, Department of Gastroenterology & Hepatology, KMC Manipal and Deputy Medical Superintendent, Kasturba Hospital, Manipal (both sitting) were felicitated in MAHE Manipal today. Senior leadership of MAHE (from left to right) Dr. Vinod Thomas, Registrar Evaluation, Dr. Dilip G Naik, Pro Vice Chancellor (Mangalore Campus), Dr Reshmi, Associate Dean of MCHP, Dr H S Ballal, Pro Chancellor, Dr Sharath K Rao, Vice Chancellor, Dr P Giridhar Kini, Registrar, and Dr Anand Venugopal, Chief Operating Officer, MAHE are in the picture.
Previous Post

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

Next Post

ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

17/09/2026
ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

17/09/2026
ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

17/09/2026
ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

17/09/2026

Recent News

imunify-bot-check