ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುಎಇ ಸೇರಿದಂತೆ ಐದು ದೇಶಗಳ ಮಹತ್ವದ ರಾಜತಾಂತ್ರಿಕ ಪ್ರವಾಸ ಆರಂಭಿಸಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧ ಭೀತಿಯ ನಡುವೆಯೇ ನಡೆಯುತ್ತಿರುವ ಈ ಭೇಟಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರವಾಸದ ಮೊದಲ ಹಂತದಲ್ಲಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ಇಂಧನ ಭದ್ರತೆ ಹಾಗೂ ಕಚ್ಚಾ ತೈಲ ಪೂರೈಕೆ ಕುರಿತು ಚರ್ಚಿಸಲಿದ್ದಾರೆ.
ಬಳಿಕ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಿ ವ್ಯಾಪಾರ, ರಕ್ಷಣೆ, ಎಐ, ಹಸಿರು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಸಹಕಾರ ಕುರಿತ ಮಾತುಕತೆ ನಡೆಸಲಿದ್ದಾರೆ.
ನಾರ್ವೆಯಲ್ಲಿ ನಡೆಯಲಿರುವ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದು, ಇಟಲಿಯಲ್ಲಿ ಪ್ರಧಾನಿ Giorgia Meloni ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಭಾರತದ ಜಾಗತಿಕ ಬಾಂಧವ್ಯ ಮತ್ತಷ್ಟು ಬಲಪಡಿಸುವತ್ತ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ.






