ಉಡುಪಿ: ಧರ್ಮ-ಭೇದ ಮರೆತು ಮಾನವೀಯತೆಯ ಸಂದೇಶ ಸಾರಿದ ಹೃದಯಸ್ಪರ್ಶಿ ಘಟನೆ ಉಡುಪಿಯಲ್ಲಿ ನಡೆದಿದೆ.
ಸಂತೆಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರು ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯ ಮತ್ತು ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಕಲ್ಯಾಣಪುರದ ಪೆರಿಹೌಸ್ ಫ್ಯಾಮಿಲಿ ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರಿತು.
ಈ ಸೇವಾ ಕಾರ್ಯದಲ್ಲಿ ಪೆರಿಹೌಸ್ ಫ್ಯಾಮಿಲಿಯ ಪ್ರಮುಖರಾದ ಉಸ್ಮಾನ್ ಸಾಹೇಬ್, ಶಹಜಹಾನ್, ರಫೀಕ್ ಕಲ್ಯಾಣಪುರ, ಮನ್ಸೂರ್, ಸುಹೇಲ್, ತೌಫೀಕ್ ಬ್ಯಾರಿ, ಆಸ್ಪಕ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಸೇವೆಯಲ್ಲಿ ಕೈಜೋಡಿಸಿದರು.
ಗಣೇಶೋತ್ಸವದ ಸಂಭ್ರಮದಲ್ಲಿ ಭಕ್ತರೊಂದಿಗೆ ಬೆರೆತು ಸೇವೆ ಸಲ್ಲಿಸಿದ ಈ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.







