Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!

Dhrishya News by Dhrishya News
15/05/2026
in ಮುಖಪುಟ
0
NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!
0
SHARES
3
VIEWS
Share on FacebookShare on Twitter

NEET (UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಪರೀಕ್ಷೆಯನ್ನು ಮರುನಡೆಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಜೂನ್ 21, 2026ರ ಭಾನುವಾರ NEET-UG ಮರುಪರೀಕ್ಷೆ ನಡೆಯಲಿದೆ ಎಂದು ಎನ್‌ಟಿಎ ಅಧಿಕೃತವಾಗಿ ತಿಳಿಸಿದೆ.

ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಎನ್‌ಟಿಎ, ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಹಾಗೂ ನಿಖರ ಮಾಹಿತಿಗಾಗಿ ಅಭ್ಯರ್ಥಿಗಳು ಮತ್ತು ಪೋಷಕರು ಎನ್‌ಟಿಎ ಅಧಿಕೃತ ಪ್ರಕಟಣೆಗಳನ್ನೇ ಅವಲಂಬಿಸಬೇಕು ಎಂದು ಮನವಿ ಮಾಡಿದೆ.

ವೈದ್ಯಕೀಯ ಕಾಲೇಜುಗಳ ಪದವಿ ಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 3ರಂದು ದೇಶಾದ್ಯಂತ ನಡೆದಿದ್ದ NEET (UG) 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಂದ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿವಿಧ ರಾಜ್ಯಗಳಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲು ತೀರ್ಮಾನಿಸಿತ್ತು.

ಈ ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರ ಸರ್ಕಾರವು Central Bureau of Investigation (CBI)ಗೆ ವಹಿಸಿದ್ದು, ಸೋರಿಕೆ ಜಾಲ ಹಾಗೂ ಅಕ್ರಮಗಳ ಹಿಂದೆ ಇರುವವರ ಪತ್ತೆಗೆ ತನಿಖೆ ಮುಂದುವರಿದಿದೆ.

ಪರೀಕ್ಷೆ ರದ್ದಾದ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ, ಕೌನ್ಸೆಲಿಂಗ್ ವೇಳಾಪಟ್ಟಿ ಹಾಗೂ ಮುಂದಿನ ಸಿದ್ಧತೆಗಳ ಕುರಿತು ಅನಿಶ್ಚಿತತೆಯಲ್ಲಿ ಸಿಲುಕಿದ್ದರು. ಮರುಪರೀಕ್ಷೆಯ ದಿನಾಂಕ ಪ್ರಕಟಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಇದೀಗ ಜೂನ್ 21ರಂದು ಮರುಪರೀಕ್ಷೆ ನಡೆಯಲಿರುವುದರಿಂದ ವಿದ್ಯಾರ್ಥಿಗಳಿಗೆ ಸ್ಪಷ್ಟತೆ ದೊರೆತಂತಾಗಿದೆ.

Previous Post

ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ

Next Post

ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

15/05/2026
NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!

NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!

15/05/2026
ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ

ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ

14/05/2026
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನ ಸಮಯದಲ್ಲಿ ಬದಲಾವಣೆ: ಭಕ್ತರಿಗೆ ಹೆಚ್ಚುವರಿ 1 ಗಂಟೆ ಅವಕಾಶ

Recent News

ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

ಐದು ರಾಷ್ಟ್ರಗಳತ್ತ ಮೋದಿ ರಾಜತಾಂತ್ರಿಕ ಹೆಜ್ಜೆ; ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವಿಸ್ತರಣೆ..!

15/05/2026
NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!

NEET UG ಮರುಪರೀಕ್ಷೆಗೆ ದಿನಾಂಕ ಘೋಷಣೆ: ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ಎನ್‌ಟಿಎ ನಿರ್ಧಾರ..!

15/05/2026
ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ

ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ

14/05/2026
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನ ಸಮಯದಲ್ಲಿ ಬದಲಾವಣೆ: ಭಕ್ತರಿಗೆ ಹೆಚ್ಚುವರಿ 1 ಗಂಟೆ ಅವಕಾಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನ ಸಮಯದಲ್ಲಿ ಬದಲಾವಣೆ: ಭಕ್ತರಿಗೆ ಹೆಚ್ಚುವರಿ 1 ಗಂಟೆ ಅವಕಾಶ

14/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved