ಬೆಂಗಳೂರು , ಮೇ 14, 2026: ಭಾರತೀಯ ಮನರಂಜನಾ ಲೋಕದ ದಿಕ್ಕನ್ನೇ ಬದಲಿಸುವ ನಿಟ್ಟಿನಲ್ಲಿ ‘ಗ್ಯಾಮೆನ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ‘ಬಿಗ್ ಪಿಚ್ಚರ್’ ಎಂಬ ಕ್ರಾಂತಿಕಾರಿ ರಿಯಾಲಿಟಿ ಶೋ ಅನ್ನು ಘೋಷಿಸಿದೆ. ಚಲನಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ನೇರವಾಗಿ ಪ್ರೇಕ್ಷಕರ ಕೈಗೇ ನೀಡುವ ಈ ಶೋ, ಶೀಘ್ರದಲ್ಲೇ ಜಿಯೋ ಹಾಟ್ ಸ್ಟಾರ್ ನಲ್ಲಿ ಐದು ಭಾಷೆಗಳಲ್ಲಿ ಪ್ರಸಾರವಾಗಲಿದೆ. “ನೀವು ಯಾವಾಗಲೂ ಸಿನಿಮಾಗಳನ್ನು ವಿಮರ್ಶಿಸಿದ್ದೀರಿ, ಈಗ ನೀವೇ ಒಂದು ಸಿನಿಮಾ ಮಾಡಿ” ಎಂಬ ಸವಾಲನ್ನು ಈ ಶೋ ದೇಶದ ಜನರ ಮುಂದಿಟ್ಟಿದೆ.
ಇಂದಿನ ಕಾಲದಲ್ಲಿ ಸಿನಿಮಾಗಳು ಬಿಡುಗಡೆಯಾದ ತಕ್ಷಣವೇ ಸ್ಮಾರ್ಟ್ ಫೋನ್‌ಗಳಲ್ಲಿ ವಿಮರ್ಶೆ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ‘ಬಿಗ್ ಪಿಚ್ಚರ್’ 15 ವಾರಗಳ ಕಾಲ ನಡೆಯುವ ಪ್ರಯಾಣವಾಗಿದ್ದು, ಪ್ರೇಕ್ಷಕರನ್ನೇ ಕಥೆಗಾರರು, ನಿರ್ದೇಶಕರು, ನಟರು ಮತ್ತು ನಿರ್ಣಯಕಾರರನ್ನಾಗಿ ಮಾಡುತ್ತದೆ. ಈ ಶೋನ ಅಂತ್ಯದಲ್ಲಿ “ಜನರಿಂದ, ಜನರಿಗಾಗಿ” ತಯಾರಾದ ಚಲನಚಿತ್ರವು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
*ಗ್ಯಾಮೆನ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ಮಾಪಕ ಮಿ. ರಾವ್ ಮಾತನಾಡಿ* “ಪ್ರತಿ ಶುಕ್ರವಾರ ಬಿಡುಗಡೆಯಾಗುವ ಸಿನಿಮಾದ ವರ್ಷಗಳ ಕಠಿಣ ಶ್ರಮವನ್ನು ಕೇವಲ ಕೆಲವು ನಿಮಿಷಗಳ ವಿಮರ್ಶೆಯಲ್ಲಿ ಅಳೆದುಹಾಕಲಾಗುತ್ತದೆ. ‘ಬಿಗ್ ಪಿಚ್ಚರ್’ ಮೂಲಕ ನಾವು ಈ ಚಿತ್ರಣವನ್ನು ಬದಲಿಸಲು ಬಯಸಿದ್ದೇವೆ. ಸಿನಿಮಾ ನಿರ್ಮಾಣದ ಒತ್ತಡ ಮತ್ತು ಅದರ ಗಾಂಭೀರ್ಯ ಪ್ರೇಕ್ಷಕರಿಗೆ ತಿಳಿಯಬೇಕು ಎಂಬುದು ನಮ್ಮ ಆಸೆ ಎಂದರು.
ಒಟ್ಟು 15 ವಾರಗಳ ಕಾಲ ನಡೆಯುವ ಈ ಶೋನಲ್ಲಿ ಪ್ರತಿ ಭಾನುವಾರ 60 ನಿಮಿಷಗಳ ಸಂಚಿಕೆ ಪ್ರಸಾರವಾಗಲಿದೆ. ಅಂತಿಮ ಸಂಚಿಕೆಯಲ್ಲಿ ವಿಜೇತರನ್ನು ಘೋಷಿಸಿದ ನಂತರ, ಅವರೆಲ್ಲರೂ ಸೇರಿ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗಾಗಿ ಪೂರ್ಣ ಪ್ರಮಾಣದ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ.
ಕನ್ನಡ ಆವೃತ್ತಿಯ ನಿರೂಪಕ ನಟ ವಸಿಷ್ಠ ಎನ್. ಸಿಂಹ ಮಾತನಾಡಿ: “ಕನ್ನಡ ಚಿತ್ರರಂಗವು ಯಾವಾಗಲೂ ಸಿನಿಮಾ ಪ್ರೇಮಿಗಳ ಪ್ರೀತಿಯಿಂದಲೇ ಬೆಳೆದಿದೆ. ಈಗ ಇದೇ ಮೊದಲ ಬಾರಿಗೆ ಅಭಿಮಾನಿಗಳು ಕೇವಲ ಪ್ರೇಕ್ಷಕರಾಗಿ ಉಳಿಯದೆ, ನಿರ್ದೇಶಕನ ಕುರ್ಚಿಯಲ್ಲಿ ಕುಳಿತುಕೊಳ್ಳಲಿದ್ದಾರೆ ಎಂದರು.
ನೋಂದಣಿ ಪ್ರಕ್ರಿಯೆ:
ಆಸಕ್ತ ಬರಹಗಾರರು, ನಟರು, ತಂತ್ರಜ್ಞರು ಮತ್ತು ಸಂಗೀತಗಾರರು ಅಧಿಕೃತ ವೆಬ್‌ಸೈಟ್ www.bigpitchure.in ಅಥವಾ ‘Big Pitchure’ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ತಮ್ಮ ಎಂಟ್ರಿಗಳನ್ನು ಸಲ್ಲಿಸಬಹುದು.
ಆಡಿಷನ್ ವಿವರ:
ಬೆಂಗಳೂರಿನ ಗೋಪಾಲನ್ ಮಾಲ್‌ನಲ್ಲಿ ಆಡಿಷನ್‌ಗಳು ಪ್ರಾರಂಭವಾಗಲಿವೆ.






