ಉಡುಪಿ:ಏಪ್ರಿಲ್ 01:ಕೇಂದ್ರ ಸರಕಾರ ಇಂದಿನಿಂದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿದ್ದು ಇದನ್ನು ವಿರೋಧಿಸಿ ಇಂದು ಸೆಂಟ್ರಲ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ದೇಶಾದ್ಯಂತ ಕೆಲಸದ ಸ್ಥಳಗಳಲ್ಲಿ, ಜಿಲ್ಲಾ, ತಾಲೂಕು, ಎಲ್ಲಾ ಗ್ರಾಮಗಳಲ್ಲಿ ಕಾರ್ಮಿಕರು ಕಪ್ಪು ದಿನ ಆಚರಣೆ ಮಾಡಲು ಕರೆ ನೀಡಿದ್ದು ಉಡುಪಿ ಜಿಲ್ಲೆಯ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಕಾರ್ಮಿಕರ ಕೆಲಸದ ಸ್ಥಳಗಳಲ್ಲಿ, ಪ್ಯಾಕ್ಟರಿ,ಕಂಪನಿ ಗಳ ಮುಂದೆ ಎಲ್ಲಾ ವರ್ಗದ ಕಾರ್ಮಿಕರು ಪ್ರತಿಭಟನೆ ನಡೆಸಿ ಕಪ್ಪು ದಿನ ಆಚರಣೆ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿ ಸಿಐಟಿಯು ಉಡುಪಿ ವಲಯ ಸಮಿತಿ ನೇತ್ರತ್ವದಲ್ಲಿ ಬಸ್ ನಿಲ್ದಾಣ ಬಳಿ ಕಾರ್ಮಿಕರು ಕಪ್ಪು ದಿನ ,ಪ್ರತಿಭಟನೆ ನಡೆಸಿದರು,ಪ್ರತಿಭಟನ ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಶಶಿಧರ್ ಗೊಲ್ಲ ಮಾತನಾಡಿ ಕೇಂದ್ರ ಸರಕಾರ ಜಾರಿ ಮಾಡಿರುವ ಕಾರ್ಮಿಕ 4ಸಂಹಿತೆಗಳಿಂದ ಕಾರ್ಮಿಕರು ಬೀದಿಗೆ ಬಿಳುವಂತಾಗಿದೆ,ಕಾರ್ಮಿಕರಿಗೆ ಇನ್ನೂ ಮುಂದೆ ಸವಲತ್ತುಗಳು ಸಿಗಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ, ಕೆಲಸದ ಅವಧಿಗಳು ಹೆಚ್ಚಳ ಮಾಡಿರುವುದು, ಕಾರ್ಮಿಕರ ಮುಷ್ಕರದ ಹಕ್ಕುಗಳನ್ನು ದುರ್ಬಲ ಗೊಳಿಸಿರುವುದು,ಕಾರ್ಮಿಕ ಸಂಘಗಳ ನೊಂದವಣಿಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಸರಕಾರ ಇವತ್ತು ಜಾರಿಮಾಡಿದೆ.ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆವಕಾಶ ನೀಡಿದ್ದು ಇವರಿಗೆ ಸರಿಯಾದ ಸುರಕ್ಷತೆ, ಭದ್ರತೆ,ಆರೋಗ್ಯ ಸಮಸ್ಯೆ ಗಳನ್ನು ಎದುರಿಸಬೇಕಾಗಿದೆಎಂದು ಹೇಳಿದರು.
ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಸಂಜೀವ ಬಳ್ಕೂರು ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸರಕಾರವು ಕಾರ್ಮಿಕರ ವಿರೋಧದ ನಡುವೆಯೂ 4 ಕಾರ್ಮಿಕ ಸಂಹಿತೆಗಳನ್ನು ಇಂದಿನಿಂದ ಜಾರಿ ಮಾಡಲು ಹೋರಟಿದ್ದು.ಇದಕ್ಕೆ ಸರಿಯಾದ ಬೆಲೆ ತೆರ ಬೇಕಾಗಬಹುದು ಎಂಬ ಎಚ್ಚರಿಕೆಯನ್ನು ಕೇಂದ್ರ ಸರಕಾರಕ್ಕೆ ನೀಡಿದರು
ಪ್ರತಿಭಟನೆ ಯಲ್ಲಿ ಬೀಡಿ ಸಂಘದ ಉಡುಪಿ ಅಧ್ಯಕ್ಷ ರಾದ ನಳಿನಿ,ಕಾರ್ಯದರ್ಶಿ ಉಮೇಶ್ ಕುಂದರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷ ರಾದ ಸರೋಜ.ಎಸ್,ಸಿಐಟಿಯು ಮುಖಂಡರಾದ ಮೋಹನ್, ಗಿರಿಜಾ,ವಸಂತಿ, ಕಟ್ಟಡ ಸಂಘದ ಮುಖಂಡರಾದಸಾರಿಕಾ,ಶರ್ಮಿಳ,ಸೌಮ್ಯಶಾರದ ಉಪಸ್ಥಿತರಿದ್ದರು ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಕಾರ್ಯಕ್ರಮ ನಿರೂಪಿಸಿದರು
ಬ್ರಹ್ಮವರದಲ್ಲಿ ಆಕಾಶವಾಣಿ ಬಳಿ ಕಾರ್ಮಿಕರು ಪ್ರತಿಭಟನೆ ನಡೆಸಿದರು,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಸುಭಾಷ್ ನಾಯಕ್,ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಶಶಿಧರ್ ಗೊಲ್ಲ, ಸಿಐಟಿಯು ಮುಖಂಡರಾದ ಸದಾಶಿವ ಪೂಜಾರಿ,ರಮೇಶ್ ಪೂಜಾರಿ ,ಮುರಳಿ ಹಾಗೂ ಇತರರು ಉಪಸ್ಥಿತರಿದ್ದರು

ಕಾರ್ಕಳ ದಲ್ಲಿ ಸಿಐಟಿಯು ನೇತ್ರತ್ವದಲ್ಲಿ ಕಪ್ಪು ದಿನ ಆಚರಿಸಿ ಪ್ರತಿಭಟನೆ ನಡೆಸಿದರು ಕಾರ್ಕಳ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷ ರಾದ ಸುನೀತಾ ಶೆಟ್ಟಿ, ಕಟ್ಟಡ ಸಂಘದ ಮುಖಂಡರಾದ ನಾಗೇಶ್, ಸಿಐಟಿಯು ಮುಖಂಡರಾದ ಜಯಂತಿ, ಶಕುಂತಲಾ, ಪುಷ್ಪ ಉಪಸ್ಥಿತರಿದ್ದರು







