Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಬೆಂಗಳೂರಿನಲ್ಲಿ ಯಮಹಾದಿಂದ ಮೊಟ್ಟಮೊದಲ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜನೆ

Dhrishya News by Dhrishya News
30/03/2026
in ಮುಖಪುಟ
0
ಬೆಂಗಳೂರಿನಲ್ಲಿ ಯಮಹಾದಿಂದ ಮೊಟ್ಟಮೊದಲ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜನೆ
0
SHARES
38
VIEWS
Share on FacebookShare on Twitter

ಬೆಂಗಳೂರು, 30 ಮಾರ್ಚ್ 2026: ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ FZ-S Fi Hybrid ಮೋಟಾರ್‌ ಸೈಕಲ್ ಹಾಗೂ 125ಸಿಸಿ ಸಾಮರ್ಥ್ಯದ Fascino ಮತ್ತು RayZR Hybrid ಸ್ಕೂಟರ್‌ ಗಳಿಗಾಗಿ ‘ಮೆಗಾ ಮೈಲೇಜ್ ಚಾಲೆಂಜ್’ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಸ್ಮಾರ್ಟ್ ಮೋಟಾರ್ ಜನರೇಟರ್ ವ್ಯವಸ್ಥೆಯನ್ನು ಹೊಂದಿರುವ ಹೈಬ್ರಿಡ್ ತಂತ್ರಜ್ಞಾನದ ಅದ್ಭುತ ಇಂಧನ ದಕ್ಷತೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಅಧಿಕೃತ ಡೀಲರ್‌ ಶಿಪ್‌ ಗಳಾದ Eye Automobiles, ವೈಟ್‌ ಫೀಲ್ಡ್ ಯಮಹಾ, ಗರುಡ ಮೋಟಾರ್‌ ಸೈಕಲ್ಸ್, ವಿನಾಯಕ ಮೋಟಾರ್ಸ್ ಮತ್ತು ಪನಾಚೆ ಎಂಟರ್‌ ಪ್ರೈಸಸ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಯಮಹಾ ಗ್ರಾಹಕರು ಮತ್ತು ಅವರ ಕುಟುಂಬ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.

ಈ ವಾಹನಗಳಲ್ಲಿನ ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ಮತ್ತು ಸ್ಟಾಪ್ ಅಂಡ್ ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್), ಇಂಧನ ಬಳಕೆಯನ್ನು ಉತ್ತಮಗೊಳಿಸುವುದಲ್ಲದೆ, ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯು ಎಂಜಿನ್ ಅನ್ನು ಶಬ್ದವಿಲ್ಲದೆ ಸ್ಟಾರ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೇ, ಎಲೆಕ್ಟ್ರಿಕ್- ಅಸಿಸ್ಟೆಡ್ ಟಾರ್ಕ್ ಮೂಲಕ ವಾಹನಕ್ಕೆ ಉತ್ತಮ ಆಕ್ಸಲರೇಷನ್ ನೀಡುತ್ತದೆ ಮತ್ತು ವಾಹನವು ಚಲಿಸದೆ ಸುಮ್ಮನೆ ನಿಂತಾಗ ಎಂಜಿನ್ ಅನ್ನು ಸ್ಥಗಿತಗೊಳಿಸುವ ಮೂಲಕ ಇಂಧನವನ್ನು ಉಳಿಸುತ್ತದೆ.

ಈ ಹೈಬ್ರಿಡ್ ಆವಿಷ್ಕಾರವು ಸವಾರರಿಗೆ ಕಡಿಮೆ ವೆಚ್ಚದಲ್ಲಿ ದೀರ್ಘ ಪ್ರಯಾಣದ ಆನಂದವನ್ನು ನೀಡುವುದಲ್ಲದೆ, ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಬಯಸುವ ಪರಿಸರ ಪ್ರೇಮಿ ಸವಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಬೆಂಗಳೂರಿನ ಸಮೃದ್ಧಿ ಕನ್ವೆನ್ಷನ್ ಸೆಂಟರ್‌ ನಿಂದ ಆರಂಭವಾದ ಈ ‘ಮೆಗಾ ಮೈಲೇಜ್ ಚಾಲೆಂಜ್’ಗೆ ಚಾಲನೆ ನೀಡಲಾಗಿದ್ದು, ಅದಕ್ಕೂ ಮುನ್ನ ಎಲ್ಲಾ ಯಮಹಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್‌ ಗಳಿಗೆ ಇಂಧನ ತುಂಬಿಸಲಾಯಿತು. ಮೋಟಾರ್‌ ಸೈಕಲ್‌ ಗಳಿಗೆ 60 ಕಿ.ಮೀ ಮತ್ತು ಸ್ಕೂಟರ್‌ ಗಳಿಗೆ 35 ಕಿ.ಮೀ ದೂರದ ನಿಗದಿತ ಮಾರ್ಗವನ್ನು ನಿಗದಿಪಡಿಸಲಾಗಿತ್ತು. ಈ ಮಾರ್ಗವು ನಗರದ ರಸ್ತೆಗಳು, ಟ್ರಾಫಿಕ್ ಮತ್ತು ಮುಕ್ತ ರಸ್ತೆಗಳು ಸೇರಿದಂತೆ ವಿವಿಧ ರೀತಿಯ ರಸ್ತೆಗಳನ್ನು ಒಳಗೊಂಡಿತ್ತು. ಈ ಸ್ಪರ್ಧೆಯು ಭಾಗವಹಿಸಿದವರಿಗೆ ವಾಹನದ ಸಸ್ಪೆನ್ಷನ್, ಚಾಲನಾ ಸೌಲಭ್ಯ, ಬ್ರೇಕಿಂಗ್, ಆಕ್ಸಲರೇಷನ್ ಮತ್ತು ಪಿಕ್-ಅಪ್ ಅನ್ನು ನೇರವಾಗಿ ಪರೀಕ್ಷಿಸಲು ಉತ್ತಮ ಅವಕಾಶ ನೀಡಿತು.

ಸವಾರಿಯನ್ನು ಪೂರ್ಣಗೊಳಿಸಿ ಮರಳಿದ ನಂತರ, ವಾಹನಗಳಿಗೆ ಮೊದಲಿದ್ದ ಮಟ್ಟಕ್ಕೆ ಪುನಃ ಇಂಧನ ತುಂಬಿಸಿ, ಮೈಲೇಜ್ ಅನ್ನು ಲೆಕ್ಕಹಾಕಲು ಎಷ್ಟು ಇಂಧನ ಬಳಕೆ ಆಗಿದೆ ಎಂಬುದನ್ನು ದಾಖಲಿಸಿಕೊಳ್ಳಲಾಯಿತು. 

ಇದೇ ಸಂದರ್ಭದಲ್ಲಿ ಯಮಹಾ ತಜ್ಞರು ಉತ್ತಮ ಮೈಲೇಜ್ ಪಡೆಯಲು ಅಗತ್ಯವಿರುವ ಪರಿಣಾಮಕಾರಿ ಚಾಲನಾ ವಿಧಾನಗಳು ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಗೌರವದ ಸಂಕೇತವಾಗಿ ಪ್ರತಿಯೊಬ್ಬ ಭಾಗವಹಿಸಿದವರಿಗೂ ವಿಶೇಷ ಸ್ಮರಣಿಕೆಗಳನ್ನು ನೀಡಲಾಯಿತು ಮತ್ತು ಉಚಿತವಾಗಿ ಬೈಕ್ ವಾಶ್ ಮಾಡಿಕೊಡಲಾಯಿತು. ಇದರೊಂದಿಗೆ, ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ಯಮಹಾ ಸಂಸ್ಥೆಯು ಎಲ್ಲಾ ವಾಹನಗಳಿಗೆ ಸಮಗ್ರ ‘10-ಪಾಯಿಂಟ್ ಇನ್ಸ್‌ ಪೆಕ್ಷನ್’ ಸೌಲಭ್ಯವನ್ನು ಒದಗಿಸುವ ಮೂಲಕ ಸುರಕ್ಷತೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿತು.

125cc Fi ಹೈಬ್ರಿಡ್ ಸ್ಕೂಟರ್ ಮೆಗಾ ಮೈಲೇಜ್ ಚಾಲೆಂಜ್‌ನಲ್ಲಿ ತಮ್ಮ ಸಾಧನೆಗಳಿಗಾಗಿ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆದ ಅಗ್ರ 5 ವಿಜೇತರು ಕೆಳಗೆ:

Winner Customer Name Mileage Achieved

1 Mr. Sasi Dhar 115.15 KMPL

2 Mr. Durgappa 100 KMPL

3 Mr. Gowtham 97.43 KMPL

4 Mr. Satyaraj 96.25 KMPL

5 Mr. Narasimha 92.6 KMPL

FZ-S Fi ಹೈಬ್ರಿಡ್ ಮೆಗಾ ಮೈಲೇಜ್ ಚಾಲೆಂಜ್‌ನಲ್ಲಿ ತಮ್ಮ ಸಾಧನೆಗಳಿಗಾಗಿ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆದ ಅಗ್ರ 3 ವಿಜೇತರು ಕೆಳಗೆ:

Winner Customer Name Mileage Achieved

1 Mr. Prabhakaran 103.7 KMPL

2 Mr. Rakshith 92.4 KMPL

3 Mr. Ambrish 92 ಕೆಎಂಪಿಲ್

Previous Post

ಮಗನ ಸಾವಿನ ನೋವಿನಲ್ಲಿ ಖಿನ್ನತೆ: ಇಲಿ ಪಾಷಾಣ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು..!!

Next Post

ಉಡುಪಿ ಕಕ್ಕುಂಜೆ ಪಾಸ್ಟರಲ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 132ನೇ ‘ಮನ್ ಕೀ ಬಾತ್’ ನೇರ ಪ್ರಸಾರದ ಸಾಮೂಹಿಕ ವೀಕ್ಷಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ಕಕ್ಕುಂಜೆ ಪಾಸ್ಟರಲ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 132ನೇ ‘ಮನ್ ಕೀ ಬಾತ್’ ನೇರ ಪ್ರಸಾರದ ಸಾಮೂಹಿಕ ವೀಕ್ಷಣೆ

ಉಡುಪಿ ಕಕ್ಕುಂಜೆ ಪಾಸ್ಟರಲ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 132ನೇ 'ಮನ್ ಕೀ ಬಾತ್' ನೇರ ಪ್ರಸಾರದ ಸಾಮೂಹಿಕ ವೀಕ್ಷಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

10/06/2026
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

10/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

10/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

10/06/2026

Recent News

ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ಮೋದಿ ಸೇವೆಯ 4339ನೇ ದಿನ: ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

10/06/2026
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

10/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

10/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

10/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved