Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

ಸಮಯಕ್ಕೆ ಸರಿಯಾಗಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಲು ತೊಂದರೆ ಮುಕ್ತ, ವೇಗದ ಮತ್ತು ಕಡಿಮೆ ವೆಚ್ಚದ ಚಿನ್ನದ ಸಾಲಗಳಿಗೆ ಮೊರೆ ಹೋಗುತ್ತಿರುವ ಸಾಲಗಾರರು

Dhrishya News by Dhrishya News
27/03/2026
in ಮುಖಪುಟ
0
ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??
0
SHARES
5
VIEWS
Share on FacebookShare on Twitter

ಭಾರತದಲ್ಲಿ ಚಿನ್ನದ ಸಾಲವು ‘ಬೇರೆ ದಾರಿಯಿಲ್ಲದ ಅಂತಿಮ ಆಯ್ಕೆ’ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿದೆ, ಬದಲಿಗೆ ಈಗ ‘ಯೋಜಿತ ಸಾಲದ ಆಯ್ಕೆ’ ಯಾಗಿ ಬದಲಾಗುತ್ತಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಇಂದು ತಿಳಿಸಿದೆ. ಅಡಮಾನ ಸಾಲಗಳು ಮತ್ತು ಅಸುರಕ್ಷಿತ ಸಾಲಗಳಿಗೆ ಹೋಲಿಸಿದರೆ, ಚಿನ್ನದ ಸಾಲವು ಕಿರಿಕಿರಿ ಇಲ್ಲದ, ವೇಗವಾದ ಮತ್ತು ಕಡಿಮೆ ಬಡ್ಡಿ ದರದ ಆಯ್ಕೆಯಾಗಿದೆ. ಹೀಗಾಗಿ ಸಾಲಗಾರರು ಮನೆಯಲ್ಲಿ ಸುಮ್ಮನೆ ಬಿದ್ದಿರುವ ಪೂರ್ವಜರ ಆಭರಣಗಳನ್ನು ಅಡವಿಟ್ಟು ಸಾಲ ಪಡೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

ಈ ಕುರಿತು ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಚಿನ್ನದ ಸಾಲ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥರಾದ ಶ್ರೀಪಾದ್ ಜಾಧವ್ ಅವರು, “ಗ್ರಾಹಕರ ನಡವಳಿಕೆಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬರುತ್ತಿದೆ. ಚಿನ್ನದ ಸಾಲವು ಈಗ ಸಂಕಷ್ಟದ ಸಂಕೇತವಾಗಿ ಉಳಿದಿಲ್ಲ. ಈಗ ಸ್ಥಿರ ಆದಾಯ ಮತ್ತು ಆಸ್ತಿ ಹೊಂದಿರುವ ಗ್ರಾಹಕರು ಸಹ ಸಿಗುವ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ತಾತ್ಕಾಲಿಕವಾಗಿ ಚಿನ್ನವನ್ನು ಅಡವಿಟ್ಟು ಹಣ ಪಡೆಯುತ್ತಿದ್ದಾರೆ. ಇದು ಅಲ್ಪಾವಧಿಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಅನುಸರಿಸುತ್ತಿರುವ ಒಂದು ಶಿಸ್ತುಬದ್ಧ ಮಾರ್ಗವಾಗಿದೆ,” ಎಂದು ತಿಳಿಸಿದರು.

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದರಿಂದ, ಮನೆಗಳಲ್ಲಿರುವ ಬಂಗಾರದ ಆಭರಣಗಳ ಮೌಲ್ಯವು ಗಣನೀಯವಾಗಿ ಹೆಚ್ಚಾಗಿದೆ. ಇದು ಕುಟುಂಬಗಳು ತಮ್ಮ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಾಗೂ ಸಮಯೋಚಿತವಾಗಿ ಒದಗಿಬರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಚಿನ್ನದ ಸಾಲದ ಮೊರೆ ಹೋಗುವಂತೆ ಮಾಡಿದೆ.

ಈ ಕುರಿತು ಜಾಧವ್ ಅವರು, “ಈ ಬದಲಾವಣೆಯು ಸಾಲಗಾರರಲ್ಲಿ ಕಂಡುಬರುತ್ತಿರುವ ‘ಸೌಲಭ್ಯ ಆಧಾರಿತ ಸಾಲ’ ಹೆಚ್ಚಳದ ಟ್ರೆಂಡ್ ಅನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ಚಿನ್ನದ ಸಾಲ ಪಡೆಯಲು ಅತಿ ಕಡಿಮೆ ದಾಖಲೆಗಳು ಇದ್ದರೆ ಸಾಕಾಗಿರುತ್ತದೆ,” ಎಂದು ಜಾಧವ್ ತಿಳಿಸಿದರು.

ಮೊದಲ ಆದ್ಯತೆ

ಚಿನ್ನದ ಸಾಲಕ್ಕೆ ಸಾಮಾಜಿಕವಾಗಿ ಮನ್ನಣೆ ಹೆಚ್ಚಾಗುತ್ತಿದ್ದಂತೆ, ಈ ಸಾಲವನ್ನು ಪಡೆಯುವ ಗ್ರಾಹಕರ ವರ್ಗವು ಕೂಡಾ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಕೋಟಕ್ ಬ್ಯಾಂಕ್ ತಿಳಿಸಿದೆ. ಒಂದು ಕಾಲದಲ್ಲಿ ಸಮಾಜದ ಒಂದು ಸೀಮಿತ ವರ್ಗ ಮಾತ್ರ ಬಳಸುತ್ತಿದ್ದ ಈ ಆಯ್ಕೆಯನ್ನು ಈಗ ಹೆಚ್ಚಿನ ಜನರು ಬಳಸಿಕೊಳ್ಳುತ್ತಿದ್ದಾರೆ. ವೇಗ, ಸೌಕರ್ಯ ಮತ್ತು ಕಡಿಮೆ ವೆಚ್ಚದ ಸಾಲವನ್ನು ಬಯಸುವ ವೇತನದಾರ ಮಂದಿ, ಉದ್ಯಮಿಗಳು ಮತ್ತು ಶ್ರೀಮಂತ ಹೂಡಿಕೆದಾರರು ತಮ್ಮ ವ್ಯವಹಾರ ಬೆಳವಣಿಗೆ, ಶಿಕ್ಷಣ, ಆಸ್ತಿ ಹೂಡಿಕೆ ಮತ್ತು ಇತರ ಅಗತ್ಯಗಳಿಗಾಗಿ ಹೆಚ್ಚಾಗಿ ಚಿನ್ನದ ಸಾಲವನ್ನು ಬಳಸುತ್ತಿದ್ದಾರೆ.

“ವೆಚ್ಚ ಮತ್ತು ಸಮಯದ ಉಳಿತಾಯ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ,” ಎಂದು ಜಾಧವ್ ಹೇಳುತ್ತಾರೆ. ಈ ಕುರಿತು ಅವರು, “ಅಸುರಕ್ಷಿತ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲದ ಮೇಲಿನ ಬಡ್ಡಿದರಗಳು ಸಾಮಾನ್ಯವಾಗಿ ಕಡಿಮೆ ಇರುತ್ತವೆ, ಸಾಲದ ಮಂಜೂರಾತಿ ವೇಗವಾಗಿರುತ್ತದೆ ಮತ್ತು ಮರುಪಾವತಿ ವಿಧಾನವು ಸುಲಭವಾಗಿರುತ್ತದೆ. ಯೋಜಿತ ಉದ್ದೇಶಗಳಿಗಾಗಿ ಇದು ಅತ್ಯಂತ ಸ್ಮಾರ್ಟ್ ಆದ ಹಣಕಾಸು ಪರಿಹಾರವಾಗಿದೆ. ಗ್ರಾಹಕರು ಚಿನ್ನವನ್ನು ಅಡವಿಡುತ್ತಾರೆ, ಹಣ ಬಳಸುತ್ತಾರೆ, ಮರುಪಾವತಿ ಮಾಡಿ ತಮ್ಮ ಆಭರಣಗಳನ್ನು ಮರಳಿ ಪಡೆಯುತ್ತಾರೆ” ಎನ್ನುತ್ತಾರೆ.

*ಹೆಚ್ಚುತ್ತಿರುವ ಸಾಲದ ಮೊತ್ತ*

ಹಿಂದೆ ದಕ್ಷಿಣ ರಾಜ್ಯಗಳು ಮತ್ತು ಸಣ್ಣ ನಗರ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಿದ್ದ ಚಿನ್ನದ ಸಾಲದ ಬೆಳವಣಿಗೆಯು ಈಗ ಎಲ್ಲೆಡೆ ವ್ಯಾಪಿಸಿದೆ. ವಿಶೇಷವಾಗಿ ₹2 ಲಕ್ಷದಿಂದ ₹10 ಲಕ್ಷದವರೆಗಿನ ಸಾಲದ ಮೊತ್ತದ ವಿಭಾಗದಲ್ಲಿ, ವೇಗ ಮತ್ತು ಸೌಕರ್ಯ ಬಯಸುವ ಗ್ರಾಹಕರು ಆಸ್ತಿ ಅಡಮಾನ ಸಾಲ ಅಥವಾ ಗೃಹ ಸಾಲದ ಟಾಪ್-ಅಪ್‌ ಗಳ ಬದಲಿಗೆ ಚಿನ್ನದ ಸಾಲವನ್ನೇ ಆಯ್ದುಕೊಳ್ಳುತ್ತಿದ್ದಾರೆ. ಗ್ರಾಹಕರು ತಮ್ಮ ಚಿನ್ನದ ಆಸ್ತಿಯನ್ನು ‘ಮಾರಾಟ ಮಾಡುವ ಬದಲು ಅಡವಿಡಲು’ ಇಷ್ಟಪಡುತ್ತಿದ್ದಾರೆ. ಏಕೆಂದರೆ ಚಿನ್ನವು ಅಡಮಾನದಲ್ಲಿದ್ದಾಗಲೂ ಅದರ ಮೌಲ್ಯ ಹೆಚ್ಚುತ್ತಲೇ ಇರುತ್ತದೆ.

“ಸಮಯದ ಮೌಲ್ಯವು ಈಗ ಅತ್ಯಂತ ನಿರ್ಣಾಯಕವಾಗಿದೆ,” ಎಂದು ಜಾಧವ್ ಹೇಳುತ್ತಾರೆ. “ವ್ಯಾಪಾರಸ್ಥ ಕುಟುಂಬಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಶ್ರೀಮಂತ ಹೂಡಿಕೆದಾರರಿಗೆ ಯಾವುದಾದರೂ ಹೊಸ ಅವಕಾಶವನ್ನು ಬಳಸಿಕೊಳ್ಳಲು ಕೇವಲ 48 ರಿಂದ 72 ಗಂಟೆಗಳ ಕಾಲಾವಕಾಶವಿದ್ದಾಗ, ಕೆಲವೇ ನಿಮಿಷಗಳಲ್ಲಿ ಸಿಗುವ ಚಿನ್ನದ ಸಾಲವು ಅವರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ” ಎಂಬುದು ಅವರ ಮಾತು.

*ಚಿನ್ನದ ಸಾಲವು ವೇಗವಾಗಿ ಬೆಳೆಯಲು ಕಾರಣಗಳೇನು?*

ಭಾರತದ ಒಟ್ಟು ಗೃಹಬಳಕೆಯ ಚಿನ್ನದ ಸಂಗ್ರಹದ ಮೌಲ್ಯವು ಸುಮಾರು 5 ಟ್ರಿಲಿಯನ್ ಡಾಲರ್‌ ಗಿಂತಲೂ ಹೆಚ್ಚಿದೆ. ಇದರಲ್ಲಿ ಹೆಚ್ಚಿನವು ಪೂರ್ವಜರ ಆಭರಣಗಳಾಗಿದ್ದು, ಲಾಕರ್‌ ಗಳಲ್ಲಿ ಸುಮ್ಮನೆ ಬಿದ್ದಿವೆ. ಅಂದಾಜು 90% ರಷ್ಟು ಚಿನ್ನವು ಇನ್ನೂ ಆರ್ಥಿಕ ಬಳಕೆಗೆ ಬಂದಿಲ್ಲ. ಸಂಘಟಿತ ವಲಯದ ಚಿನ್ನದ ಸಾಲದ ಪ್ರಮಾಣವು ಈಗಾಗಲೇ ಸುಮಾರು ₹15 ಲಕ್ಷ ಕೋಟಿಯಷ್ಟಿದ್ದು, ಇದು ಆಸ್ತಿ ಅಡಮಾನ ಸಾಲವನ್ನು ಹಿಂದಿಕ್ಕಿದೆ. ಪ್ರಸ್ತುತ ಸುಭದ್ರ ಸಾಲಗಳ ವಿಭಾಗದಲ್ಲಿ ಗೃಹ ಸಾಲದ ನಂತರದ ಸ್ಥಾನದಲ್ಲಿದೆ. ಮುಂಬರುವ ವರ್ಷಗಳಲ್ಲಿ ಚಿನ್ನದ ಸಾಲವು ಒಂದು ಪ್ರಮುಖ ಸ್ವತಂತ್ರ ಆಸ್ತಿ ವರ್ಗವಾಗಿ ಹೊರಹೊಮ್ಮಲಿದೆ ಎಂದು ಕೋಟಕ್ ಬ್ಯಾಂಕ್ ಅಂದಾಜಿಸಿದೆ.

“‘ಮಾರಾಟ ಮಾಡಬೇಡಿ, ಅಡವಿಡಿ’ ಎಂಬುದು ಈಗ ಆರ್ಥಿಕವಾಗಿ ಜಾಣ್ಮೆ ಹೊಂದಿರುವ ಕುಟುಂಬಗಳ ಸರಳ ನಿಯಮವಾಗಿದೆ,” ಎಂದು ಜಾಧವ್ ಈ ಕುರಿತು ಹೇಳಿದರು. ಮಾತು ಮುಂದುವರಿಸಿದ ಅವರು, “ದೀರ್ಘಕಾಲದ ಸಂಪತ್ತಿನ ಜೊತೆ ರಾಜಿ ಮಾಡಿಕೊಳ್ಳದೆ, ಹೊಸ ಅವಕಾಶಗಳಿಗೆ ಹಣ ಒದಗಿಸಲು ಚಿನ್ನದ ಸಾಲವು ಈಗ ಪಾರದರ್ಶಕ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ” ಎಂದರು.

Previous Post

ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

27/03/2026
ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

27/03/2026
1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

27/03/2026
ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

27/03/2026

Recent News

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

ಅನಿವಾರ್ಯತೆಯಿಂದ ಆದ್ಯತೆಯವರೆಗೆ:ಭಾರತೀಯರು ಚಿನ್ನದ ಸಾಲದ ಮೊರೆ ಹೋಗುತ್ತಿರುವುದು ಏಕೆ ??

27/03/2026
ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

ತುಳುನಾಡಿನ ಬಾಲ ಪ್ರತಿಭೆ ಸಚಿತ ರಾವ್ ಜೂನಿಯರ್ ಇಂಟರ್‌ನ್ಯಾಷನಲ್ ಮಾಡೆಲ್ ಇಂಡಿಯನ್ ಫೈನಲ್‌ಗೆ ಆಯ್ಕೆ..!!

27/03/2026
1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : 60 ದಿನಗಳ ವಿನಾಯಿತಿ ಘೋಷಣೆ ..!

27/03/2026
ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

27/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved