Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

Dhrishya News by Dhrishya News
27/03/2026
in ಮುಖಪುಟ, ಸುದ್ದಿಗಳು
0
ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

The leadership team of MAHE with the BSL-3 laboratory certification conferred by the Government of India (from left to right) Dr Padmalatha Rai S, Associate Director- Academics & HOD, MSLS; Dr S. V. Kirthanashri, Associate Professor and In-Charge Head DBR, Dr Avinash Shetty, Medical Superintendent, Professor, KMC, Manipal, Dr G. Arun Maiya, Dean, MCHP, Manipal; Lt. Gen Dr M D Venkatesh, VSM (Retd.) Vice Chancellor, MAHE, Dr Anil K Bhat, Dean KMC, Manipal, Dr Chiranjay Mukhopadhyay, Director, MIV, Dr H S Ballal, Pro Chancellor, MAHE, Dr Gopalakrishnan Dharmarajan, Dean MCODS, Manipal, Dr Sharath K Rao, Pro Vice Chancellor, Health Sciences, MAHE, Dr P. Giridhar Kini, Registrar, MAHE, Dr Vinod V. Thomas, Registrar Evaluation, MAHE

0
SHARES
15
VIEWS
Share on FacebookShare on Twitter

ಮಣಿಪಾಲ್‌, ಮಾರ್ಚ್‌ 26, 2026: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಬಯೋಸೇಫ್ಟಿ ಲೆವೆಲ್-3 (ಬಿಎಸ್‌ಎಲ್‌-3) ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಅಧಿಕೃತ ಪ್ರಮಾಣೀಕರಣ ನೀಡಿದೆ. ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗತಿಕ ಆರೋಗ್ಯ ಸುರಕ್ಷೆಯಲ್ಲಿ ಶ್ರೇಷ್ಠತೆ ಸಾಧಿಸುವ ವಿಶ್ವವಿದ್ಯಾಲಯದ ಬದ್ಧತೆಯ ಹಾದಿಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. 

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ (ಎಂಐವಿ) ಸಂಶೋಧನೆ, ರೋಗ ಪತ್ತೆ ಮತ್ತು ತರಬೇತಿ ಕಾರ್ಯಗಳಿಗೆ ಈ ಸಾಧನೆ ಮಹತ್ತರ ಬಲ ನೀಡಿದೆ. ಬಿಎಸ್‌ಎಲ್‌-3 ಪ್ರಯೋಗಾಲಯಗಳು ಉಸಿರಾಟದ ಮೂಲಕ ಹರಡುವ, ಗಂಭೀರ ಸೋಂಕುಕಾರಕ ಸೂಕ್ಷ್ಮಜೀವಿಗಳ ಸುರಕ್ಷಿತವಾದ ಅಧ್ಯಯನಕ್ಕಾಗಿ ವಿನ್ಯಾಸಗೊಳಿಸಲಾದ ವಿಶೇಷ ಸುರಕ್ಷತಾ ವ್ಯವಸ್ಥೆಯ ಪ್ರಯೋಗಾಲಯಗಳಾಗಿವೆ. ಈ ಪ್ರಮಾಣೀಕರಣವು ಅಂತರಾಷ್ಟ್ರೀಯ ಮಟ್ಟದ ಜೈವಿಕ ಸುರಕ್ಷತೆ ಹಾಗೂ ಜೈವಿಕ ಭದ್ರತೆಯ ಮಾನದಂಡಗಳನ್ನು ಮಾಹೆ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಪ್ರಯೋಗಾಲಯದ ಸುರಕ್ಷತೆ ಮತ್ತು ವೈಜ್ಞಾನಿಕ ನಿಷ್ಠೆಯ ಉನ್ನತ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸಂಸ್ಥೆಯ ಅಚಲ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಈ ಬಿಎಸ್‌ಎಲ್‌-3 ಪ್ರಯೋಗಾಲಯವನ್ನು ಅತ್ಯಾಧುನಿಕ ಸೌಲಭ್ಯ, ಸುಧಾರಿತ ಬಯೋಸೇಫ್ಟಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ವಿಶೇಷ ನಿಯಂತ್ರಿತ ವಿನ್ಯಾಸ, ಋಣಾತ್ಮಕ ಒತ್ತಡ (ನೆಗೆಟಿವ್ ಪ್ರೆಶರ್) ಇರುವ ಗಾಳಿಯ ಹರಿವು ವ್ಯವಸ್ಥೆ, ಎಚ್‌ಇಪಿಎ ಫಿಲ್ಟರ್, ಸುರಕ್ಷಿತ ಪ್ರವೇಶ ನಿಯಂತ್ರಣ ಹಾಗೂ ಕಟ್ಟುನಿಟ್ಟಿನ ಕಾರ್ಯವಿಧಾನಗಳನ್ನು ಅಳವಡಿಸಲಾಗಿದ್ದು, ಅಪಾಯಕಾರಕ ರೋಗಕಾರಕಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ನೆರವಾಗುತ್ತದೆ. ಪ್ರಮಾಣೀಕರಣ ಪ್ರಕ್ರಿಯೆಯ ಭಾಗವಾಗಿ ಪ್ರಯೋಗಾಲಯದ ವಿನ್ಯಾಸ, ಎಂಜಿನಿಯರಿಂಗ್ ವ್ಯವಸ್ಥೆಗಳು, ಬಯೋಸೇಫ್ಟಿ ನಿರ್ವಹಣೆ, ಕಾರ್ಯವಿಧಾನಗಳು, ಸಿಬ್ಬಂದಿ ಪರಿಣತಿ ಮತ್ತು ತುರ್ತು ಪರಿಸ್ಥಿತಿಗಳಿಗಿರುವ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ. 

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎಂಐವಿ) ನಿರ್ದೇಶಕ ಡಾ. ಚಿರಂಜಯ್ ಮುಖೋಪಾಧ್ಯಾಯ ಅವರ ನಾಯಕತ್ವದಲ್ಲಿ ಈ ಸುಸಜ್ಜಿತ ಸೌಲಭ್ಯದ ಸ್ಥಾಪನೆ ಮತ್ತು ಪ್ರಮಾಣೀಕರಣ ಲಭಿಸಿದೆ. ಈ ಯಶಸ್ಸಿಗೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ), ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಎಂಸಿಒಪಿಎಸ್‌), ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್‌ಎಲ್‌ಎಸ್‌) ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಸ್ಥೆಗಳ ಸಮನ್ವಯತೆ ಮತ್ತು ಬೆಂಬಲವಿದೆ. ಹೆಚ್ಚಿನ ಅಪಾಯಕಾರಿ ರೋಗಕಾರಕಗಳನ್ನು ಸುರಕ್ಷಿತವಾಗಿ ಪತ್ತೆ ಹಚ್ಚಲು, ಹೊಸದಾದ ಹಾಗೂ ಮರುಕಳಿಸುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಸುಧಾರಿತ ರೋಗಪತ್ತೆ, ಮೇಲ್ವಿಚಾರಣೆ ಹಾಗೂ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಬಿಎಸ್‌ಎಲ್‌-3 ಸೌಲಭ್ಯವು ನೆರವಾಗಲಿದೆ. 

ಮೈಕ್ರೋಬಯಾಲಜಿಸ್ಟ್‌ಗಳು, ವೈರಾಲಜಿಸ್ಟ್‌ಗಳು, ವೈದ್ಯರು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ನಡುವಿನ ಅಂತರಶಿಸ್ತೀಯ ಸಹಯೋಗಕ್ಕೆ ಈ ಪ್ರಯೋಗಾಲಯವು ಪ್ರಮುಖ ವೇದಿಕೆಯಾಗಲಿದೆ. ಅತ್ಯಾಧುನಿಕ ಸಂಶೋಧನೆಗಳಿಗೆ ಬೆಂಬಲ ನೀಡುವ ಜತೆಗೆ, ಈ ಪ್ರಯೋಗಾಲಯವು ಬಯೋಸೇಫ್ಟಿ ಕ್ರಮಗಳು, ಉನ್ನತ ಸುರಕ್ಷತಾ ಪ್ರಯೋಗಾಲಯಗಳ ನಿರ್ವಹಣೆ ಮತ್ತು ಸೋಂಕು ಹರಡುವಿಕೆಯನ್ನು ತಡೆಯುವ ತಂತ್ರಗಳಲ್ಲಿ ತರಬೇತಿ ನೀಡುವ ಮೂಲಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸನ್ನದ್ಧತೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ‘ಬಿಎಸ್‌ಎಲ್-3 ಪ್ರಯೋಗಾಲಯಕ್ಕೆ ಸಿಕ್ಕ ಈ ಪ್ರಮಾಣೀಕರಣವು ಮಾಹೆಗೆ ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿದೆ. ಇದು ವೈಜ್ಞಾನಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗಿನ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ, ಇಂತಹ ಅತ್ಯಾಧುನಿಕ ಹಾಗೂ ಸ್ವತಂತ್ರ ಬಿಎಸ್‌ಎಲ್-3 ಸೌಲಭ್ಯ ಹೊಂದಿರುವ ಮೊದಲ ಕೆಲವು ಸಂಸ್ಥೆಗಳಲ್ಲಿ ಮಾಹೆ ಕೂಡ ಒಂದಾಗಿದೆ. ರಾಷ್ಟ್ರಮಟ್ಟದಲ್ಲಿ ವ್ಯಾಪಕ ಸೇವೆ ಸಲ್ಲಿಸಲು ಇದು ಸಜ್ಜಾಗಿದ್ದು, ಭವಿಷ್ಯದಲ್ಲಿ ರಾಷ್ಟ್ರೀಯ ಬಿಎಸ್‌ಎಲ್-3 ಒಕ್ಕೂಟಕ್ಕೆ ಮಹತ್ವದ ಕೊಡುಗೆ ನೀಡುವ ಗುರಿ ಹೊಂದಿದೆʼ ಎಂದು ತಿಳಿಸಿದರು.

ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ವಿ.ಎಸ್‌.ಎಂ. (ನಿವೃತ್ತ) ಅವರು ಮಾತನಾಡಿ, ‘ಈ ಅತ್ಯಾಧುನಿಕ ಪ್ರಯೋಗಾಲಯವು ಅಪಾಯಕಾರಿ ರೋಗಾಣುಗಳ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳಿಗೆ ನೆರವು ನೀಡಲಿದೆ. ರೋಗಾಣುಗಳನ್ನು ಪತ್ತೆಹಚ್ಚುವುದು, ಹೊಸ ಲಸಿಕೆ ಮತ್ತು ಔಷಧಿಗಳನ್ನು ಕಂಡುಹಿಡಿಯುವುದು ಹಾಗೂ ರೋಗಗಳು ಹರಡುವ ವಿಧಾನಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಲು ಇದು ಪೂರಕವಾಗಿದೆ. ಈ ಮೂಲಕ ಮಾಹೆಯು ಜಾಗತಿಕ ಸಾಂಕ್ರಾಮಿಕ ರೋಗಗಳ ಸಿದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಮತ್ತು ಭಾರತದ ವೈದ್ಯಕೀಯ ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ಹೇಳಿದರು.

ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಈ ಕೇಂದ್ರವು ಉನ್ನತ ಮಟ್ಟದ ಮತ್ತು ವಿವಿಧ ಕ್ಷೇತ್ರಗಳನ್ನು ಒಳಗೊಂಡ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲಿದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ’ ಎಂದರು.  

ಪ್ರಮಾಣೀಕೃತ ಬಿಎಸ್‌ಎಲ್-3 ಪ್ರಯೋಗಾಲಯ ಸೌಲಭ್ಯ ಹೊಂದಿರುವ ಭಾರತದ ಆಯ್ದ ಕೆಲವೇ ಸಂಸ್ಥೆಗಳ ಪೈಕಿ ಮಾಹೆಯೂ ಒಂದಾಗಿದೆ. ಇದರಿಂದ ಜೀವವೈದ್ಯಕೀಯ ನಾವೀನ್ಯತೆ, ಸೋಂಕು ರೋಗಗಳ ಸಂಶೋಧನೆ ಮತ್ತು ಜಾಗತಿಕ ಆರೋಗ್ಯ ಭದ್ರತೆಯಲ್ಲಿ ಮಾಹೆಯ ನಾಯಕತ್ವ ಮತ್ತಷ್ಟು ಬಲಪಟ್ಟಿದೆ.

The leadership team of MAHE with the BSL-3 laboratory certification conferred by the Government of India (from left to right) Dr Padmalatha Rai S, Associate Director- Academics & HOD, MSLS; Dr S. V. Kirthanashri, Associate Professor and In-Charge Head DBR, Dr Avinash Shetty, Medical Superintendent, Professor, KMC, Manipal, Dr G. Arun Maiya, Dean, MCHP, Manipal; Lt. Gen Dr M D Venkatesh, VSM (Retd.) Vice Chancellor, MAHE, Dr Anil K Bhat, Dean KMC, Manipal, Dr Chiranjay Mukhopadhyay, Director, MIV, Dr H S Ballal, Pro Chancellor, MAHE, Dr Gopalakrishnan Dharmarajan, Dean MCODS, Manipal, Dr Sharath K Rao, Pro Vice Chancellor, Health Sciences, MAHE, Dr P. Giridhar Kini, Registrar, MAHE, Dr Vinod V. Thomas, Registrar Evaluation, MAHE

Previous Post

ಡಿ.ಸಿ ಉಪಸ್ಥಿತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉಡುಪಿಯಲ್ಲಿ ಮಹತ್ವದ ಸಭೆ….!

Next Post

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೋರಾಟಗಾರರಿಗೆ ಬೇಕಿದೆ ಕುಟುಂಬದ ಸಾಥ್

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

09/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

09/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

09/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

09/06/2026

Recent News

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

09/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

09/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

09/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

09/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved