Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಹಳಿ ನಿರ್ವಹಣೆ ಕಾಮಗಾರಿ: ರೈಲುಗಳ ಸಂಚಾರದಲ್ಲಿ ಬದಲಾವಣೆ….!

Dhrishya News by Dhrishya News
11/03/2026
in ಕರಾವಳಿ, ಸುದ್ದಿಗಳು
0
ಹಳಿ ನಿರ್ವಹಣೆ ಕಾಮಗಾರಿ: ರೈಲುಗಳ ಸಂಚಾರದಲ್ಲಿ ಬದಲಾವಣೆ….!

Portrait engineer under inspection and checking construction process railway switch and checking work on railroad station .Engineer wearing safety uniform and safety helmet in work.

0
SHARES
7
VIEWS
Share on FacebookShare on Twitter

ಮಂಗಳೂರು, ಮಾ. 11: ತಿರುವನಂತಪುರಂ ರೈಲು ವಿಭಾಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ.

ನಂ. 16605 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್‌ಪ್ರೆಸ್‌ ಮಾ.12ರಂದು ಮಂಗಳೂರಿನಿಂದ ಹೊರಟು ಕೊಲ್ಲಂ ಜಂಕ್ಷನ್‌ವರೆಗೆ ಮಾತ್ರ ಸಂಚರಿಸಲಿದೆ. ಆ ದಿನ ಕೊಲ್ಲಂ ಜಂಕ್ಷನ್‌ ಮತ್ತು ತಿರುವನಂತಪುರಂ ನಡುವಿನ ಮಾರ್ಗದಲ್ಲಿ ಈ ರೈಲು ಓಡಾಡುವುದಿಲ್ಲ.

ನಂ. 12695 ಎಂಜಿಆರ್‌ ಚೆನ್ನೈ ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮಾ.13ರಂದು ಕೊಟ್ಟಾಯಂವರೆಗೆ ಮಾತ್ರ ಸಂಚರಿಸಲಿದ್ದು, ಕೊಟ್ಟಾಯಂ–ತಿರುವನಂತಪುರಂ ನಡುವೆ ಸೇವೆ ಇರದು.

ನಂ. 12626 ದಿಲ್ಲಿ–ತಿರುವನಂತಪುರಂ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮಾ.10ರಂದು ದಿಲ್ಲಿಯಿಂದ ಹೊರಟಿರುವ ರೈಲು ತಿರುವನಂತಪುರಂ ಸೆಂಟ್ರಲ್ ಬದಲಾಗಿ ತಿರುವನಂತಪುರಂ ನಾರ್ತ್‌ ನಿಲ್ದಾಣದಲ್ಲೇ ಸಂಚಾರವನ್ನು ಅಂತ್ಯಗೊಳಿಸಲಿದೆ.

ನಂ. 16606 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಎರ್ನಾಡ್ ಎಕ್ಸ್‌ಪ್ರೆಸ್‌ ಮಾ.13ರಂದು ಬೆಳಿಗ್ಗೆ 4.38ಕ್ಕೆ ತಿರುವನಂತಪುರಂ ಬದಲಿಗೆ ಕೊಲ್ಲಂ ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದೆ.

ಅದೇ ರೀತಿ, ನಂ.12696 ತಿರುವನಂತಪುರಂ ಸೆಂಟ್ರಲ್–ಎಂಜಿಆರ್‌ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್‌ ರೈಲು ಮಾ.14ರಂದು ತಿರುವನಂತಪುರಂ ಬದಲಿಗೆ ಕೊಟ್ಟಾಯಂ ನಿಲ್ದಾಣದಿಂದ ರಾತ್ರಿ 8.05ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Previous Post

ಬ್ರಹ್ಮಾವರದಲ್ಲಿ ಶೇಷಗಿರಿ ಭಟ್ ಅವರಿಗೆ ನುಡಿನಮನ

Next Post

ಗ್ಯಾಸ್ ದರ ಏರಿಕೆ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗ್ಯಾಸ್ ದರ ಏರಿಕೆ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ….!

ಗ್ಯಾಸ್ ದರ ಏರಿಕೆ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026
ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

29/04/2026

Recent News

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026
ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

29/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved