Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಹೊಸ ಕ್ರಮ: ಉತ್ತರಪತ್ರಿಕೆಗೆ ಸಂಕೇತ ಸಂಖ್ಯೆ ಮಾತ್ರ….!

Dhrishya News by Dhrishya News
07/03/2026
in ಕರಾವಳಿ, ಸುದ್ದಿಗಳು
0
ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಹೊಸ ಕ್ರಮ: ಉತ್ತರಪತ್ರಿಕೆಗೆ ಸಂಕೇತ ಸಂಖ್ಯೆ ಮಾತ್ರ….!
0
SHARES
16
VIEWS
Share on FacebookShare on Twitter

ಮಂಗಳೂರು, ಮಾ. 07: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಷ್ಪಕ್ಷಪಾತಗೊಳಿಸಲು ಪ್ರೌಢಶಿಕ್ಷಣ ಮಂಡಳಿ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.

ಈಗಿನಿಂದ ಮೌಲ್ಯಮಾಪಕರು ತಾವು ಪರಿಶೀಲಿಸುವ ಉತ್ತರಪತ್ರಿಕೆಗಳು ಯಾವ ಜಿಲ್ಲೆಯಿಂದ ಅಥವಾ ಯಾವ ಪರೀಕ್ಷಾ ಕೇಂದ್ರದಿಂದ ಬಂದಿವೆ ಎಂಬ ಮಾಹಿತಿ ತಿಳಿಯುವುದಿಲ್ಲ. ಪರೀಕ್ಷಾ ಕೇಂದ್ರಗಳಿಂದ ಕಳುಹಿಸುವ ಉತ್ತರಪತ್ರಿಕೆಗಳ ಕಟ್ಟಿನ ಮೇಲೆ ‘ಸಂಕೇತ ಸಂಖ್ಯೆ’ ಮಾತ್ರ ಉಲ್ಲೇಖಿಸಲಾಗುತ್ತದೆ. ಇದಲ್ಲದೆ ಯಾವುದೇ ವಿವರ ಇರದು.

ಹಿಂದಿನ ವರ್ಷಗಳಲ್ಲಿ ಉತ್ತರಪತ್ರಿಕೆಗಳ ಕಟ್ಟಿನ ಮೇಲೆ ಪರೀಕ್ಷಾ ಕೇಂದ್ರದ ಹೆಸರು ಸೇರಿದಂತೆ ವಿವಿಧ ಮಾಹಿತಿಯನ್ನು ನಮೂದಿಸಿ ಕಸ್ಟೋಡಿಯನ್ ಸಹಿ ಹಾಗೂ ಮುದ್ರೆ ಹಾಕಲಾಗುತ್ತಿತ್ತು. ಇದರಿಂದ ಉತ್ತರಪತ್ರಿಕೆಗಳ ಮೂಲ ಜಿಲ್ಲೆ ಸೇರಿದಂತೆ ಕೆಲವು ವಿವರಗಳು ಮೌಲ್ಯಮಾಪಕರಿಗೆ ತಿಳಿಯುತ್ತಿದ್ದವು.

ಈ ಬಾರಿ ಹೊಸ ವ್ಯವಸ್ಥೆ

ಈ ಬಾರಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಪ್ರತಿಯೊಂದು ಪರೀಕ್ಷೆಯ ದಿನವೇ ಸಂಕೇತ ಸಂಖ್ಯೆಯನ್ನು ನೀಡಲಾಗುತ್ತದೆ. ಅವರು ಲಾಗಿನ್‌ ಆಗಿ ಆ ಸಂಖ್ಯೆಯನ್ನು ಪಡೆದು ಉತ್ತರಪತ್ರಿಕೆಗಳ ಕಟ್ಟಿನಲ್ಲಿ ದಾಖಲಿಸಬೇಕು. ಜೊತೆಗೆ ಪರೀಕ್ಷೆಯ ವಿಷಯ, ದಿನಾಂಕ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಉತ್ತರಪತ್ರಿಕೆಗಳ ಒಟ್ಟು ಸಂಖ್ಯೆಯನ್ನು ಮಾತ್ರ ದಾಖಲಿಸಲು ಅವಕಾಶ ಇರುತ್ತದೆ.

ಈ ರೀತಿ ಸಿದ್ಧಪಡಿಸಿದ ಕಟ್ಟನ್ನು ರೂಟ್‌ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ಅವರು ಅದನ್ನು ಜಿಲ್ಲಾ ಕೇಂದ್ರಕ್ಕೆ ತಲುಪಿಸಿ ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿ ಸಂಗ್ರಹಿಸಲಿದ್ದಾರೆ. ಎಲ್ಲ ಪರೀಕ್ಷೆಗಳು ಮುಗಿದ ಬಳಿಕ ಇಲಾಖೆಯ ಸೂಚನೆಯಂತೆ ಈ ಕಟ್ಟನ್ನು ಮೌಲ್ಯಮಾಪನ ಕೇಂದ್ರಗಳಿಗೆ ರವಾನಿಸಲಾಗುತ್ತದೆ.

ಪರೀಕ್ಷಾ ಫಲಿತಾಂಶ ಪ್ರಕಟವಾದ ಬಳಿಕ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನದ ಕುರಿತು ಆಕ್ಷೇಪಗಳು ಕೇಳಿಬರುತ್ತಿದ್ದವು. ಯಾವ ಜಿಲ್ಲೆಯ ಉತ್ತರಪತ್ರಿಕೆ ಯಾವ ಜಿಲ್ಲೆಗೆ ಹೋಗಿದೆ ಎಂಬ ಮಾಹಿತಿ ತಿಳಿದಿದ್ದ ಕಾರಣ ಈ ರೀತಿಯ ಅನುಮಾನಗಳು ಉಂಟಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಈ ಬಾರಿ ಉತ್ತರಪತ್ರಿಕೆಗಳ ಕಟ್ಟಿನಲ್ಲಿ ಯಾವುದೇ ಜಿಲ್ಲೆ ಅಥವಾ ಇತರ ವಿವರಗಳನ್ನು ಬರೆಯಬಾರದು ಎಂದು ಇಲಾಖೆ ಸೂಚನೆ ನೀಡಿದೆ. ಸಂಕೇತ ಸಂಖ್ಯೆ ಮಾತ್ರ ನಮೂದಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ ಶಶಿಧರ್ ತಿಳಿಸಿದ್ದಾರೆ.

ಅಂಚೆ ಮೂಲಕ ಕಳುಹಿಸುವ ಯೋಜನೆ ಕೈಬಿಟ್ಟು

ದ್ವಿತೀಯ ಪಿಯು ಪರೀಕ್ಷೆಯಂತೆ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳನ್ನೂ ಅಂಚೆ ಮೂಲಕ ಮೌಲ್ಯಮಾಪನ ಕೇಂದ್ರಗಳಿಗೆ ಕಳುಹಿಸುವ ಬಗ್ಗೆ ಇಲಾಖೆ ಆಲೋಚನೆ ನಡೆಸಿತ್ತು. ಆದರೆ ಹೆಚ್ಚಿನ ವೆಚ್ಚ ಹಾಗೂ ಅಂತಿಮ ಹಂತದಲ್ಲಿ ಎದುರಾಗುವ ತೊಂದರೆಗಳ ಕಾರಣ ಈ ಯೋಜನೆಯನ್ನು ಕೈಬಿಡಲಾಗಿದೆ.

ಪ್ರಸ್ತುತ ದ್ವಿತೀಯ ಪಿಯು ಉತ್ತರಪತ್ರಿಕೆಗಳನ್ನು ಪರೀಕ್ಷಾ ಕೇಂದ್ರದ ಸಮೀಪದ ತಾಲೂಕು ಕೇಂದ್ರದಲ್ಲಿರುವ ಅಂಚೆ ಕಚೇರಿ ಮೂಲಕ ಕಳುಹಿಸಲಾಗುತ್ತದೆ. ಕಳೆದ ವರ್ಷದಿಂದ ಆ ಕಟ್ಟಿನ ಮೇಲೂ ಜಿಲ್ಲೆಯ ಹೆಸರು ಸೇರಿದಂತೆ ಯಾವುದೇ ವಿವರಗಳನ್ನು ನಮೂದಿಸುವ ಪದ್ಧತಿ ಇಲ್ಲ.

Previous Post

ಮೊಬೈಲ್‌ ಆಪ್‌ ಮೂಲಕ ಜನಗಣತಿ: ಜಿಲ್ಲೆಯಲ್ಲಿ ಪೂರ್ವ ಸಿದ್ಧತೆ ಆರಂಭ..!

Next Post

ಕಾಪು ಬಳಿ ಸರಣಿ ಅಪಘಾತ: ನಾಲ್ಕು ವಾಹನ ಜಖಂ, ಮೂವರಿಗೆ ಗಾಯ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾಪು ಬಳಿ ಸರಣಿ ಅಪಘಾತ: ನಾಲ್ಕು ವಾಹನ ಜಖಂ, ಮೂವರಿಗೆ ಗಾಯ…..!

ಕಾಪು ಬಳಿ ಸರಣಿ ಅಪಘಾತ: ನಾಲ್ಕು ವಾಹನ ಜಖಂ, ಮೂವರಿಗೆ ಗಾಯ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

ಕಾರ್ಕಳದಲ್ಲಿ ಮಟ್ಕಾ ಜುಗಾರಿ: ₹3,440 ನಗದು ವಶ

24/09/2026
ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಫಲ ಕಾಣಿಕೆ ಸಮರ್ಪಣೆ

ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಫಲ ಕಾಣಿಕೆ ಸಮರ್ಪಣೆ

24/09/2026
15 ದಿನಗಳ ಹಸುಗೂಸಿನ ಮೆದುಳಿನ ಬೃಹತ್ ಗೆಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ: 3 ವರ್ಷಗಳ ಬಳಿಕ ಪ್ರಿಸ್ಕೂಲ್‌ಗೆ ಸಜ್ಜಾದ ಮಗು..!

15 ದಿನಗಳ ಹಸುಗೂಸಿನ ಮೆದುಳಿನ ಬೃಹತ್ ಗೆಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ: 3 ವರ್ಷಗಳ ಬಳಿಕ ಪ್ರಿಸ್ಕೂಲ್‌ಗೆ ಸಜ್ಜಾದ ಮಗು..!

24/09/2026
ಭಾರತದ ಸಾರ್ವಭೌಮತ್ವವನ್ನು ರಕ್ಷಿಸಿ: ಯುಎಸ್ ನಿರ್ಬಂಧಗಳ ಕಾನೂನನ್ನು ತಿರಸ್ಕರಿಸಿ-ಸಿಪಿಐ(ಎಂ) ಪೊಲಿಟ್‌ಬ್ಯುರೊ

ಭಾರತದ ಸಾರ್ವಭೌಮತ್ವವನ್ನು ರಕ್ಷಿಸಿ: ಯುಎಸ್ ನಿರ್ಬಂಧಗಳ ಕಾನೂನನ್ನು ತಿರಸ್ಕರಿಸಿ-ಸಿಪಿಐ(ಎಂ) ಪೊಲಿಟ್‌ಬ್ಯುರೊ

24/09/2026

Recent News

imunify-bot-check