Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!

Dhrishya News by Dhrishya News
05/03/2026
in ಕರಾವಳಿ, ಸುದ್ದಿಗಳು
0
ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!
0
SHARES
14
VIEWS
Share on FacebookShare on Twitter

ಕಡಬ, ಮಾ. 05: ಪತ್ನಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ಪತಿಗೆ ಜೀವ ಬೆದರಿಕೆ ಹಾಕಿ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ರಾಕೇಶ್ ಮಿಶ್ರಾ (39) ಗಾಯಗೊಂಡವರು. ಅವರು ಇನ್ನಾ ಗ್ರಾಮದ ಆಶಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ಪಡುಬಿದ್ರಿಪತ್ನಿ ನಿಶಾ ಮಿಶ್ರಾ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದು, ಕಾಂಜರಕಟ್ಟೆಯ ಬೈಟ್‌ಪ್ಲೆಕ್ಸ್ ಕಂಪನಿಯಲ್ಲಿ 2018ರಿಂದ ಉದ್ಯೋಗದಲ್ಲಿದ್ದಾರೆ.

ಮಾ. 3ರ ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ವಾಪಾಸಾಗುತ್ತಿದ್ದ ವೇಳೆ, ಮಂಜರಪಲ್ಕೆ ನಿವಾಸಿ ಮೋಹನಚಂದ್ರ (26) ರಾಕೇಶ್ ಮಿಶ್ರಾ ಅವರ ಬೈಕ್‌ನ್ನು ತಡೆದು ನಿಲ್ಲಿಸಿದ್ದಾನೆ. ಬಳಿಕ ತನ್ನ ಮೊಬೈಲ್‌ನಲ್ಲಿ ಮಿಶ್ರಾ ಅವರ ಪತ್ನಿಯ ಫೋಟೋ ತೋರಿಸಿ, “ನಿನ್ನ ಪತ್ನಿಯನ್ನು ನಾನು ಪ್ರೀತಿಸುತ್ತೇನೆ. ನೀನು ಆಕೆಯನ್ನು ಬಿಡಬೇಕು, ಇಲ್ಲದಿದ್ದರೆ ಜೀವಂತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದನೆಂದು ತಿಳಿದುಬಂದಿದೆ.

ಇದಕ್ಕೆ ಮಿಶ್ರಾ ವಿರೋಧ ವ್ಯಕ್ತಪಡಿಸಿ ಅಲ್ಲಿಂದ ಹೊರಡಲು ಪ್ರಯತ್ನಿಸಿದಾಗ, ಆರೋಪಿ ತನ್ನ ಬಳಿ ಇದ್ದ ಚೂರಿಯಿಂದ ಅವರ ಕುತ್ತಿಗೆ, ಎಡ ಕೆನ್ನೆಯ ಕೆಳಭಾಗ, ಎಡ ಪಕ್ಕೆಲುಬಿನ ಭಾಗ ಹಾಗೂ ಬಲ ಭುಜದ ಹಿಂಭಾಗಕ್ಕೆ ಇರಿದು ಕೊಲೆ ಯತ್ನ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡ ಮಿಶ್ರಾ ಬೈಕ್‌ನಲ್ಲಿ ಮನೆ ತಲುಪಿದ್ದು, ಬಳಿಕ ಅವರ ಪತ್ನಿ ನಿಶಾ ಮಿಶ್ರಾ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ತನಿಖೆ ಆರಂಭಿಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನಚಂದ್ರನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆರೋಪಿ ಮಾ.4ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Previous Post

ಆನೆ ದಂತ ಅಕ್ರಮ ಮಾರಾಟ ಯತ್ನ; ಕಡಬದ ವ್ಯಕ್ತಿ ಬಂಧನ…!

Next Post

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

03/05/2026
ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

03/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

03/05/2026
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026

Recent News

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ

03/05/2026
ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಯುವಕನ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

03/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 03 ಭಾನುವಾರ )

03/05/2026
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

02/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved