Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಸುರಕ್ಷಿತ ಕರಾವಳಿ ಅಭಿಯಾನ: ಉಡುಪಿ ಜಿಲ್ಲೆ ತಲುಪಿದ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

Dhrishya News by Dhrishya News
19/02/2026
in ಕರಾವಳಿ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
ಸುರಕ್ಷಿತ ಕರಾವಳಿ ಅಭಿಯಾನ: ಉಡುಪಿ ಜಿಲ್ಲೆ ತಲುಪಿದ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026
0
SHARES
4
VIEWS
Share on FacebookShare on Twitter

ಉಡುಪಿ, ಫೆ. 19: “ಸುರಕ್ಷಿತ ತಟ – ಸಮೃದ್ಧ ಭಾರತ” ಎಂಬ ಘೋಷವಾಕ್ಯದೊಂದಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಮ್ಮಿಕೊಂಡಿರುವ ಕೋಸ್ಟಲ್ ಸೈಕ್ಲೋಥಾನ್–2026 ಬುಧವಾರ ಉಡುಪಿ ಜಿಲ್ಲೆ ಹಾದು ದಕ್ಷಿಣ ಕನ್ನಡದತ್ತ ಮುಂದುವರಿಯಿತು. ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ಈ ರಾಷ್ಟ್ರೀಯ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ.

ಒಟ್ಟು 130 ಸೈಕ್ಲಿಸ್ಟ್‌ಗಳು ಭಾಗವಹಿಸಿರುವ ಈ ಯಾತ್ರೆಯಲ್ಲಿ 65 ಮಂದಿ ಮಹಿಳೆಯರು ಸೇರಿದ್ದಾರೆ. ಎರಡು ತಂಡಗಳಾಗಿ ಕರಾವಳಿ ರಾಜ್ಯಗಳಲ್ಲಿ ಸೈಕಲ್ ಮೂಲಕ ಸಂಚರಿಸುತ್ತಿರುವುದಾಗಿ ಅಭಿಯಾನದ ಮುಖ್ಯಸ್ಥ ಹಾಗೂ ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.

ಜ.28ರಂದು ಗುಜರಾತ್‌ನ ಲಖ್‌ಪತ್ ಮತ್ತು ಪಶ್ಚಿಮ ಬಂಗಾಳದ ಬಕ್ಖಾಲಿಯಿಂದ ಪ್ರಾರಂಭವಾದ ಸೈಕ್ಲೋಥಾನ್ 9 ರಾಜ್ಯಗಳಲ್ಲಿ 6,550 ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಫೆ.22ರಂದು ಕೇರಳದ ಕೊಚ್ಚಿಯಲ್ಲಿ ಸಮಾಪ್ತಿಗೊಳ್ಳಲಿದೆ. ಗುಜರಾತ್‌ನಿಂದ ಪ್ರಾರಂಭವಾದ ಪಶ್ಚಿಮ ಕರಾವಳಿ ತಂಡ ಮಹಾರಾಷ್ಟ್ರ, ದಿಯು, ಗೋವಾ ದಾಟಿ ಉತ್ತರ ಕನ್ನಡ ಮೂಲಕ ಉಡುಪಿ ಜಿಲ್ಲೆಗೆ ಪ್ರವೇಶಿಸಿತು.

ಶಿರೂರಿನಿಂದ ಆರಂಭವಾದ ರ್ಯಾಲಿ ಬ್ರಹ್ಮಾವರ ತಲುಪಿದಾಗ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಸ್ವಾಗತಿಸಿದರು. ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಅಭಿನಂದನಾ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಸಂದೀಪ್ ಚಕ್ರವರ್ತಿ, ಕರಾವಳಿ ಭದ್ರತೆ ಕುರಿತ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಜನರಿಗೆ ತಲುಪಿಸುವುದು ಅಭಿಯಾನದ ಉದ್ದೇಶ ಎಂದರು. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದಾಗಿ ತಿಳಿಸಿದರು.

ತ್ರಾಸಿ, ಕುಂದಾಪುರ, ಉಡುಪಿ, ಕಾಪು ಮಾರ್ಗವಾಗಿ ಹೆಜಮಾಡಿ ಮೂಲಕ ತಂಡ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿತು. ಕಾರ್ಯಕ್ರಮದಲ್ಲಿ ಸಿಐಎಸ್‌ಎಫ್ ಹಾಗೂ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Previous Post

ಕೆಲಸಕ್ಕೆ ಹೋಗಿದ್ದ ಯುವಕ ಕಾಣೆ ; ಪ್ರಕರಣ ದಾಖಲು….!

Next Post

ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದ ಒಟ್ಟು ಸಾರವೇ ಧರ್ಮ

30/06/2026
1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

30/06/2026
ಶ್ರೀಕೃಷ್ಣ ಮಠದಲ್ಲಿ ಎಸ್‌ಐಆರ್ ಅಭಿಯಾನಕ್ಕೆ ಚಾಲನೆ ನೀಡಿದ ಉಡುಪಿ ಡಿಸಿ ಸ್ವರೂಪಾ ಟಿ.ಕೆ

ಶ್ರೀಕೃಷ್ಣ ಮಠದಲ್ಲಿ ಎಸ್‌ಐಆರ್ ಅಭಿಯಾನಕ್ಕೆ ಚಾಲನೆ ನೀಡಿದ ಉಡುಪಿ ಡಿಸಿ ಸ್ವರೂಪಾ ಟಿ.ಕೆ

30/06/2026
ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ: ಜು. 4ರಂದು ರಕ್ತದಾನ ಶಿಬಿರ

ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ: ಜು. 4ರಂದು ರಕ್ತದಾನ ಶಿಬಿರ

30/06/2026

Recent News

ಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದ ಒಟ್ಟು ಸಾರವೇ ಧರ್ಮ

30/06/2026
1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

30/06/2026
ಶ್ರೀಕೃಷ್ಣ ಮಠದಲ್ಲಿ ಎಸ್‌ಐಆರ್ ಅಭಿಯಾನಕ್ಕೆ ಚಾಲನೆ ನೀಡಿದ ಉಡುಪಿ ಡಿಸಿ ಸ್ವರೂಪಾ ಟಿ.ಕೆ

ಶ್ರೀಕೃಷ್ಣ ಮಠದಲ್ಲಿ ಎಸ್‌ಐಆರ್ ಅಭಿಯಾನಕ್ಕೆ ಚಾಲನೆ ನೀಡಿದ ಉಡುಪಿ ಡಿಸಿ ಸ್ವರೂಪಾ ಟಿ.ಕೆ

30/06/2026
ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ: ಜು. 4ರಂದು ರಕ್ತದಾನ ಶಿಬಿರ

ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ: ಜು. 4ರಂದು ರಕ್ತದಾನ ಶಿಬಿರ

30/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved