Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ….!

Dhrishya News by Dhrishya News
18/02/2026
in ಕರಾವಳಿ, ಸುದ್ದಿಗಳು
0
ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ….!
0
SHARES
11
VIEWS
Share on FacebookShare on Twitter

ಬಂಟ್ವಾಳ, ಫೆ. 18: ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್‌ನಲ್ಲಿ ವಿದ್ಯುತ್ ಮೀಟರ್ ರೀಡರ್ ಮೇಲೆ ಸಾಕು ನಾಯಿದಾಳಿ ನಡೆದಿದ್ದು, ಬಲ ಕೈಗೆ ಗಂಭೀರ ಗಾಯವಾದ ಘಟನೆ ಸೋಮವಾರ ನಡೆದಿದೆ.

ಮೂಲತಃ ಮುಡಿಪು ನಿವಾಸಿಯಾದ ಮೆಸ್ಕಾಂ ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್. ಶೆಟ್ಟಿ ಅವರು ಮನೆಗಳ ಮೀಟರ್ ರೀಡಿಂಗ್ ಕಾರ್ಯ ಮುಗಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಏಕಾಏಕಿ ಓಡಿ ಬಂದು ದಾಳಿ ನಡೆಸಿದ್ದು, ಬಲ ಕೈಯ ಮಾಂಸ ಕಿತ್ತು ಗಂಭೀರವಾಗಿ ಗಾಯಗೊಳಿಸಿದೆ.

ಸ್ಥಳೀಯರು ತಕ್ಷಣ ಧಾವಿಸಿ ನಾಯಿಯನ್ನು ಓಡಿಸಿ, ರಕ್ತಸ್ರಾವವಾಗುತ್ತಿದ್ದ ಸಂಪತ್ ಅವರನ್ನು ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿಸಿದರು. ಬಳಿಕ ಸಿದ್ಧಕಟ್ಟೆ ಮೆಸ್ಕಾಂ ಎಂಜಿನಿಯರ್ ಯೋಗೀಶ್ ಅವರ ಸಹಕಾರದಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಂಗಳವಾರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದುಬಂದಿದೆ.

ಬಂಟ್ವಾಳ ಉಪವಿಭಾಗ–2 ವ್ಯಾಪ್ತಿಯ ವಾಮದಪದವು, ಸಿದ್ಧಕಟ್ಟೆ, ರಾಯಿ, ವಗ್ಗ, ಕಕ್ಯಪದವು ಹಾಗೂ ಬಂಟ್ವಾಳ ಪೇಟೆ ಪ್ರದೇಶಗಳಲ್ಲಿ ಒಟ್ಟು 17 ಮಂದಿ ಹೊರಗುತ್ತಿಗೆ ಆಧಾರಿತ ಮೀಟರ್ ರೀಡರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಿ ಪ್ರದೇಶದ ಮೀಟರ್ ರೀಡರ್ ಗೈರಾಗಿದ್ದ ಹಿನ್ನೆಲೆ ಮೇಲ್ವಿಚಾರಕ ಸಂಪತ್ ಅವರೇ ರೀಡಿಂಗ್‌ಗೆ ತೆರಳಿದ್ದರು.

ಹೊರಗುತ್ತಿಗೆ ಆಧಾರಿತ, ಅಸಂಘಟಿತ ಕಾರ್ಮಿಕರ ಸುರಕ್ಷತೆ ಹಾಗೂ ಸಮಸ್ಯೆಗಳ ಕುರಿತು ಮೆಸ್ಕಾಂ ಮೌನ ವಹಿಸಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪತ್ ಅವರ ಶಸ್ತ್ರಚಿಕಿತ್ಸೆಗೆ ಇದುವರೆಗೆ ಸುಮಾರು ₹30 ಸಾವಿರ ವೆಚ್ಚವಾಗಿದೆ ಎಂದು ಮೂಲಗಳು ತಿಳಿಸಿವೆ.

Previous Post

ಮಹಾರಾಷ್ಟ್ರ ಮೀನುಗಾರಿಕಾ ಸಚಿವರನ್ನು ಭೇಟಿಯಾದ ಶಾಸಕ ಯಶ್ ಪಾಲ್ ಸುವರ್ಣ..!!

Next Post

ಫೆ.19ರಿಂದ ‘ಸುರಭಿ ಜೈಸಿರಿ 2026’: ಉಮಾಶ್ರೀಗೆ ಸುರಭಿ ಬಿಂದುಶ್ರೀ ಗೌರವ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಫೆ.19ರಿಂದ ‘ಸುರಭಿ ಜೈಸಿರಿ 2026’: ಉಮಾಶ್ರೀಗೆ ಸುರಭಿ ಬಿಂದುಶ್ರೀ ಗೌರವ…!

ಫೆ.19ರಿಂದ ‘ಸುರಭಿ ಜೈಸಿರಿ 2026’: ಉಮಾಶ್ರೀಗೆ ಸುರಭಿ ಬಿಂದುಶ್ರೀ ಗೌರವ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026

Recent News

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved