Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಫೆ.19ರಿಂದ ‘ಸುರಭಿ ಜೈಸಿರಿ 2026’: ಉಮಾಶ್ರೀಗೆ ಸುರಭಿ ಬಿಂದುಶ್ರೀ ಗೌರವ…!

Dhrishya News by Dhrishya News
18/02/2026
in ಸುದ್ದಿಗಳು
0
ಫೆ.19ರಿಂದ ‘ಸುರಭಿ ಜೈಸಿರಿ 2026’: ಉಮಾಶ್ರೀಗೆ ಸುರಭಿ ಬಿಂದುಶ್ರೀ ಗೌರವ…!
0
SHARES
8
VIEWS
Share on FacebookShare on Twitter

ಬೈಂದೂರು, ಫೆ. 18:ಸುರಭಿ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸೇವಾ ಪ್ರತಿಷ್ಠಾನ ವತಿಯಿಂದ ಫೆಬ್ರವರಿ 19ರಿಂದ 22ರವರೆಗೆ ‘ಸುರಭಿ ಜೈಸಿರಿ 2026’ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ಈ ವರ್ಷದ ‘ಸುರಭಿ ಬಿಂದುಶ್ರೀ’ ಪ್ರಶಸ್ತಿಗೆ ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟಿ ಉಮಾಶ್ರೀ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ  ತಿಳಿಸಿದ್ದಾರೆ.

₹25 ಸಾವಿರ ನಗದು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಪ್ರದಾನ ಮಾಡಲಾಗುತ್ತದೆ. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅವರು ಉಮಾಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸುವರು. ಇದೇ ದಿನ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ನಾಟ್ಯೋತ್ಸವ ನಡೆಯಲಿದೆ.

ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಾರ್ಥವಾಗಿ ನಡೆಯುವ ಈ ಸಾಂಸ್ಕೃತಿಕೋತ್ಸವ ಪ್ರತಿದಿನ ಸಂಜೆ 6 ಗಂಟೆಗೆ ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಫೆಬ್ರವರಿ 19ರಂದು ಮುಖಂಡ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸುವರು. ಬಳಿಕ ಸುರಭಿ ಯಕ್ಷ ಕಲಾವಿದರಿಂದ ‘ಯಕ್ಷ ಸಂಭ್ರಮ’ ನಡೆಯಲಿದೆ.

ಫೆಬ್ರವರಿ 21ರಂದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪ್ರಭಾಕರ ಎಚ್. ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಸಂಸ್ಮರಣಾ ನುಡಿಗಳನ್ನಾಡುವರು. ಸುರಭಿಯ ನೃತ್ಯ ಕಲಾವಿದರಿಂದ ಜಾನಪದ ಮತ್ತು ನಾಟ್ಯ ವೈಭವ, ಜೊತೆಗೆ ಹಾಸ್ಯ ಕಲಾವಿದ ಪ್ರೊ. ಕೃಷ್ಣ ಗೌಡ ಮತ್ತು ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ.

ಫೆಬ್ರವರಿ 22ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಲಿದ್ದಾರೆ. ಮುಖಂಡ ರಮಾನಾಥ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಸುರಭಿ ವಿದ್ಯಾರ್ಥಿಗಳಿಂದ ‘ನಾದ ಗಾನಾಮೃತ’, ‘ಕುಂಚ ಸಂಭ್ರಮ’ ಕಾರ್ಯಕ್ರಮಗಳು ಹಾಗೂ ಮಂಗಳೂರು ಸನಾತನ ತಂಡದಿಂದ ‘ಸನಾತನ ರಾಷ್ಟ್ರಾಂಜಲಿ’ ನಾಟ್ಯ ವೈವಿಧ್ಯ ಪ್ರದರ್ಶನ ನಡೆಯಲಿದೆ.

ಇದೇ ವೇಳೆ ವಿದ್ವಾನ್ ಚಂದ್ರಶೇಖರ ನಾವಡ (ಸುರತ್ಕಲ್) ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಬಾಲ ಪ್ರತಿಭೆಗಳಾದ ಕೃತಿಕಾ ಕೃಷ್ಣ ಗಾಣಿಗ, ತ್ರಿಷಾ ಮತ್ತು ದೀಪ್ತಾ ಡಿ. ಕುಂದರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಆನಂದ ಮದ್ದೋಡಿ ವಿವರಿಸಿದರು.

Previous Post

ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ….!

Next Post

ದ್ವಿತೀಯ ಪಿಯುಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಸಿದ್ಧತೆ: ಗೊಂದಲಕ್ಕೆ ಅವಕಾಶ ಕೊಡಬೇಡಿ – ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ದ್ವಿತೀಯ ಪಿಯುಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಸಿದ್ಧತೆ: ಗೊಂದಲಕ್ಕೆ ಅವಕಾಶ ಕೊಡಬೇಡಿ – ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ…..!

ದ್ವಿತೀಯ ಪಿಯುಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಸಿದ್ಧತೆ: ಗೊಂದಲಕ್ಕೆ ಅವಕಾಶ ಕೊಡಬೇಡಿ – ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026

Recent News

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved