Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಹಾರಾಷ್ಟ್ರ ಮೀನುಗಾರಿಕಾ ಸಚಿವರನ್ನು ಭೇಟಿಯಾದ ಶಾಸಕ ಯಶ್ ಪಾಲ್ ಸುವರ್ಣ..!!

ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ

Dhrishya News by Dhrishya News
18/02/2026
in ಕರಾವಳಿ
0
ಮಹಾರಾಷ್ಟ್ರ ಮೀನುಗಾರಿಕಾ ಸಚಿವರನ್ನು ಭೇಟಿಯಾದ ಶಾಸಕ ಯಶ್ ಪಾಲ್ ಸುವರ್ಣ..!!
0
SHARES
18
VIEWS
Share on FacebookShare on Twitter

ಉಡುಪಿ, ಫೆ.18: ಕರ್ನಾಟಕ ಕರಾವಳಿ ಜಿಲ್ಲೆಯ ಮೀನುಗಾರರು ಅಂತಾರಾಜ್ಯ ಮೀನುಗಾರಿಕೆ ನಡೆಸುವ ವೇಳೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಶ್ ಪಾಲ್ ಸುವರ್ಣ ಅವರು ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರನ್ನು ಅವರ ಸಚಿವಾಲಯದ ಕಚೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರು ಆಳ ಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭಗಳಲ್ಲಿ ಸಮನ್ವಯತೆಯ ಕೊರತೆ ಹಾಗೂ ಮಾಹಿತಿ ಅಭಾವದಿಂದ ನಿಗದಿತ ವ್ಯಾಪ್ತಿಯನ್ನು ಮೀರಿದ ಆರೋಪದಲ್ಲಿ ಮಹಾರಾಷ್ಟ್ರ ಮೀನುಗಾರಿಕಾ ಇಲಾಖೆ ಪ್ರಕರಣ ದಾಖಲಿಸಿ ಹೆಚ್ಚಿನ ದಂಡ ವಿಧಿಸುವ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದ ಮೀನುಗಾರರು ಸಂಕಷ್ಟ ಅನುಭವಿಸುತ್ತಿರುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ಸಚಿವರಿಗೆ ವಿವರಿಸಿ, ಇಂತಹ ಪ್ರಕರಣಗಳನ್ನು ಕೈಬಿಟ್ಟು ಮೀನುಗಾರರಿಗೆ ನೆರವು ನೀಡುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ಒತ್ತಾಯ

ಪಶ್ಚಿಮ ಮತ್ತು ಪೂರ್ವ ಕರಾವಳಿ ರಾಜ್ಯಗಳ ನಡುವೆ ಮೀನುಗಾರಿಕಾ ಚಟುವಟಿಕೆಗಳಲ್ಲಿ ಸಮನ್ವಯತೆ ಸಾಧಿಸಲು ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ತರಲು ಸಹಕಾರ ನೀಡುವಂತೆ ಹಾಗೂ ಎಲ್ಲಾ ರಾಜ್ಯಗಳ ಮೀನುಗಾರಿಕಾ ಸಚಿವರು ಮತ್ತು ಮುಖಂಡರನ್ನು ಒಳಗೊಂಡ ಅಂತಾರಾಜ್ಯ ಸಮನ್ವಯ ಸಮಿತಿ ರಚಿಸುವಂತೆ ಅವರು ಮನವಿ ಮಾಡಿದರು. ಈಗಾಗಲೇ ಗೋವಾ ಸರ್ಕಾರದ ಮೀನುಗಾರಿಕಾ ಸಚಿವರೊಂದಿಗೆ ಈ ವಿಷಯವಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಮಲ್ಪೆ ಬಂದರಿಗೆ ಆಹ್ವಾನ

ಏಷ್ಯಾದಲ್ಲೇ ಅತಿ ದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದೆಂದು ಪ್ರಸಿದ್ಧಿಯಾಗಿರುವ ಮಲ್ಪೆ ಮೀನುಗಾರಿಕಾ ಬಂದರುದಲ್ಲಿ ಸಾವಿರಾರು ಬೋಟ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿವೆ. ಮಹಾರಾಷ್ಟ್ರ ಮೀನುಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಮಲ್ಪೆ ಬಂದರಿಗೆ ಭೇಟಿ ನೀಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಸಚಿವ ನಿತೇಶ್ ರಾಣೆ ಅವರಿಗೆ ಆಹ್ವಾನ ನೀಡಿದರು.

ಸಚಿವರಿಂದ ಭರವಸೆ

ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ನಿತೇಶ್ ರಾಣೆ ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಾಷ್ಟ್ರೀಯ ಮೀನುಗಾರಿಕಾ ನೀತಿಯ ಕುರಿತು ಸಹಮತ ಸೂಚಿಸಿ, ಅಂತಾರಾಜ್ಯ ಸಮನ್ವಯ ಸಮಿತಿ ರಚನೆಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು. ಮಲ್ಪೆ ಬಂದರಿಗೆ ಭೇಟಿ ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಂಬೈ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅರವಿಂದ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಕುಂದರ್, ಕಿಶನ್ ಶೆಟ್ಟಿ, ಅಮಿತ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Previous Post

ಸ್ವಾವಲಂಬಿ ಸಾರಥಿ ಯೋಜನೆ: 6 ಫಲಾನುಭವಿಗಳಿಗೆ ವಾಹನ, ಸಹಾಯಧನ ವಿತರಣೆ….!

Next Post

ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ….!

ನಾಯಿದಾಳಿ : ಮೀಟರ್ ರೀಡರ್‌ಗೆ ಕೈಗೆ ಗಂಭೀರ ಗಾಯ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026

Recent News

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved