ಉಡುಪಿ ಜ. 29: ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಆಯೋಜಿಸುವ ಅಂತಾರಾಷ್ಟ್ರೀಯ ರಂಗ ಹಬ್ಬದಲ್ಲಿ ಫೆಬ್ರವರಿ 3ರಂದು ಭಾರತ್ ರಂಗ ಮಂಚ್‌ನಲ್ಲಿ ಉಡುಪಿಯ ಅಂಬಾ ಭವಾನಿ ಕಲಾ ಆರ್ಟ್ಸ್ ಪ್ರಸ್ತುತಿಯ ಖ್ಯಾತ ರಂಗ ನಿರ್ದೇಶಕ ಭುವನ್ ಮಣಿಪಾಲ ಅವರ ಸಂಗೀತ ಮತ್ತು ನಿರ್ದೇಶನದ “ದೇವಿಮಹಾತ್ಮೆ” ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಈ ನಾಟಕವು ತುಳು ರಂಗಭೂಮಿಗೆ ಹೆಮ್ಮೆಯ ವಿಷಯವಾಗಿದ್ದು, ದೇಶದಾದ್ಯಂತ ರಂಗಪ್ರಿಯರ ಗಮನ ಸೆಳೆಯಲಿದೆ ಎಂದು ಕಲಾ ಜಗತ್ತಿನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.






