Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ವಿಜ್ಞಾನ ಮತ್ತು ತಂತ್ರಜ್ಞಾನ

ಲಂಡನ್‌ ನಿಂದ ಪುಣೆಯ ರಿಟೇಲ್ ಮಳಿಗೆಗಳವರೆಗೆ: ಜಾಗತಿಕವಾಗಿ ಶಿಕ್ಷಣ ಪಡೆದ ಯುವಜನತೆ ರಿಟೇಲ್ ತರಬೇತಿಯನ್ನು ಆರಿಸಿಕೊಳ್ಳುತ್ತಿರುವುದು ಏಕೆ..?

Dhrishya News by Dhrishya News
28/01/2026
in ವಿಜ್ಞಾನ ಮತ್ತು ತಂತ್ರಜ್ಞಾನ, ಸುದ್ದಿಗಳು
0
ಲಂಡನ್‌ ನಿಂದ ಪುಣೆಯ ರಿಟೇಲ್ ಮಳಿಗೆಗಳವರೆಗೆ: ಜಾಗತಿಕವಾಗಿ ಶಿಕ್ಷಣ ಪಡೆದ ಯುವಜನತೆ ರಿಟೇಲ್ ತರಬೇತಿಯನ್ನು ಆರಿಸಿಕೊಳ್ಳುತ್ತಿರುವುದು ಏಕೆ..?
0
SHARES
1
VIEWS
Share on FacebookShare on Twitter

ಬೆಂಗಳೂರು: ಜನವರಿ 28:ಇಂದಿನ ಕಾಲದಲ್ಲಿ ಭಾರತೀಯ ಯುವಜನತೆ ಜಾಗತಿಕ ಮಟ್ಟದ ಕಾರ್ಪೊರೇಟ್ ಉದ್ಯೋಗಗಳು ಮತ್ತು ಆಕರ್ಷಕ ಆಫೀಸ್ ಹುದ್ದೆಗಳ ಬೆನ್ನತ್ತುತ್ತಿರುವುದು ಸಹಜ. ಆದರೆ ಇದೀಗ ನಿಶ್ಶಬ್ದವಾಗಿ ಭಾರತದ ರಿಟೇಲ್ ಮಳಿಗೆಗಳ ಕ್ಷೇತ್ರದಲ್ಲಿ ಒಂದು ಆಶ್ಚರ್ಯಕರ ವೃತ್ತಿಪರ ಬದಲಾವಣೆ ಆಗುತ್ತಿದೆ. ವಿದೇಶಗಳಲ್ಲಿ ಪದವಿ ಪಡೆದ ಪದವೀಧರರು ಸಹ ವೃತ್ತಿಜೀವನಕ್ಕೆ ಸಿದ್ಧರಾಗಲು ರಿಟೇಲ್ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

 

ಇವರು ಈ ಆಯ್ಕೆಯನ್ನು ಮಾಡಿಕೊಳ್ಳುತ್ತಿರುವುದು ಅವರಿಗೆ ಬೇರೆ ಆಯ್ಕೆಗಳಿಲ್ಲದ ಕಾರಣಕ್ಕಾಗಿ ಅಲ್ಲ. ಬದಲಾಗಿ, ಇವರೆಲ್ಲರೂ ಒಂದು ವಿಷಯವನ್ನು ಮೊದಲೇ ಅರಿತುಕೊಂಡಿದ್ದಾರೆ. ಅದೇನೆಂದರೆ ಪದವಿಗಳು ನಿಮಗಾಗಿ ದಾರಿಗಳನ್ನು ತೆರೆಯಬಹುದು, ಆದರೆ ಒಬ್ಬ ಗ್ರಾಹಕ ನಿಮ್ಮ ಮುಂದೆ ಬಂದು ನಿಂತಾಗ ಆತ ಅಸಹನೆಯಿಂದಿರಲಿ, ಗೊಂದಲದಲ್ಲಿರಲಿ, ಬ್ರ್ಯಾಂಡ್‌ ಗಳನ್ನು ಹೋಲಿಕೆ ಮಾಡುತ್ತಿರಲಿ ಅಥವಾ ಕ್ಷಣಾರ್ಧದಲ್ಲಿ ನಿಮ್ಮಿಂಗ ಉತ್ತರವನ್ನು ನಿರೀಕ್ಷಿಸುತ್ತಿರಲಿ ಅಂತಹ ಸನ್ನಿವೇಶವನ್ನು ಎದುರಿಸಲು ಪದವಿಗಳು ನಿಮ್ಮನ್ನು ತರಬೇತುಗೊಳಿಸಿರುವುದಿಲ್ಲ ಎಂಬುದು.

 

ಈ ಬದಲಾವಣೆಯು ಸ್ಯಾಮ್‌ಸಂಗ್‌ನ ದೋಸ್ತ್ ಸೇಲ್ಸ್ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯುವ ವೃತ್ತಿಪರರು ಉದ್ಯಮವನ್ನು ತಳಮಟ್ಟದಿಂದ ಕಲಿಯಲು ದೋಸ್ತ್ ಒಂದು ವ್ಯವಸ್ಥಿತ ಮಾರ್ಗವಾಗಿದೆ. ದೋಸ್ತ್ ನ 2026ರ ಬ್ಯಾಚ್ ಈ ಬದಲಾವಣೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದು, ಅಂತರಾಷ್ಟ್ರೀಯ ಶಿಕ್ಷಣ ಪಡೆದ ಪದವೀಧರರು ಸೇರಿದಂತೆ ವಿವಿಧ ಶೈಕ್ಷಣಿಕ ಹಿನ್ನೆಲೆಯ ಅಭ್ಯರ್ಥಿಗಳು, ಸುದೀರ್ಘ ವೃತ್ತಿಜೀವನದ ಅಡಿಪಾಯವಾಗಿ ಪ್ರಾಯೋಗಿಕ ರಿಟೇಲ್ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ.

 

ಹಾಗಾದರೆ, ಈ ದೋಸ್ತ್ ಎಂದರೆ ನಿಜವಾಗಿ ಏನು? ಸರಳವಾಗಿ ಹೇಳುವುದಾದರೆ, ಇದೊಂದು ವ್ಯವಸ್ಥಿತ ರಿಟೇಲ್ ಕೌಶಲ್ಯ ಅಭಿವೃದ್ಧಿ ಯೋಜನೆ. ಈ ಯೋಜನೆಯಲ್ಲಿ ತರಗತಿಯ ಕಲಿಕೆ ಮತ್ತು ಮಳಿಗೆಗಳಲ್ಲಿನ ನೇರ ಅನುಭವದ ಮಿಶ್ರಣದ ಮೂಲಕ ಸಂಘಟಿತ ಮಾರಾಟ ವಿಭಾಗದ ಉದ್ಯೋಗಗಳಿಗೆ ಯುವಪೀಳಿಗೆಯನ್ನು ಸಜ್ಜುಗೊಳಿಸುತ್ತದೆ. ಇಲ್ಲಿ ಅಭ್ಯರ್ಥಿಗಳು ಗ್ರಾಹಕರನ್ನು ನಿರ್ವಹಿಸುವುದು, ಉತ್ಪನ್ನಗಳ ತಿಳುವಳಿಕೆ, ಸಂವಹನ ಕಲೆ ಮತ್ತು ರಿಟೇಲ್ ಕಾರ್ಯಾಚರಣೆಯ ಮೂಲಭೂತ ಅಂಶಗಳನ್ನು ಕಲಿಯುತ್ತಾರೆ. ಈ ಕೌಶಲ್ಯಗಳೇ ಒಬ್ಬ ಹೊಸಬ ಆರಂಭಿಕ ಹಂತದಲ್ಲೇ ಉಳಿಯುತ್ತಾನೆಯೇ ಅಥವಾ ಉನ್ನತ ಮಟ್ಟಕ್ಕೆ ಬೆಳೆಯುತ್ತಾನೆಯೇ ಎಂಬುದನ್ನು ನಿರ್ಧರಿಸುತ್ತವೆ.

 

ಇಂದಿನ ಭಾರತದ ರಿಟೇಲ್ ಮಾರುಕಟ್ಟೆಯು ಕೇವಲ “ಮಾರಾಟ” ಮಾಡುವುದಕ್ಕೆ ಸೀಮಿತವಾಗಿಲ್ಲ. ಇದು “ಸಮಸ್ಯೆ ಪರಿಹರಿಸುವುದರ” ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಗ್ರಾಹಕರು ಇಂದು ಆನ್‌ ಲೈನ್ ರಿವ್ಯೂಗಳು, ಬೆಲೆಗಳ ಹೋಲಿಕೆ ಮತ್ತು ದೃಢವಾದ ಅಭಿಪ್ರಾಯಗಳೊಂದಿಗೆ ಮಳಿಗೆಗೆ ಬರುತ್ತಾರೆ. ಇಂತಹ ವೇಗವಾಗಿ ಬದಲಾಗುವ ವಾತಾವರಣದಲ್ಲಿ, ಮಳಿಗೆಯ ಎಕ್ಸಿಕ್ಯೂಟಿವ್ ಕೇವಲ ಮಾರಾಟಗಾರನಲ್ಲ, ಆತ ಒಬ್ಬ ಮಾರ್ಗದರ್ಶಕ, ಸಮಸ್ಯೆ ಪರಿಹರಿಸುವವ ಮತ್ತು ನಂಬಿಕೆಯನ್ನು ಕಟ್ಟಿಕೊಡುವ ವ್ಯಕ್ತಿಯಾಗಿದ್ದಾನೆ.

 

ಪ್ರಸ್ತುತ ಅಮರಾವತಿಯಲ್ಲಿ ತರಬೇತಿ ಪಡೆಯುತ್ತಿರುವ ಅಮರಾವತಿ ವಿಶ್ವವಿದ್ಯಾಲಯದ ಎಂಬಿಎ ಪದವೀಧರರಾದ 27 ವರ್ಷದ ಕ್ವಾಜಿ ಫೈಜಾನ್ ಅಫ್ರೋಜ್ ಅಖ್ಲಾಕ್ ಉಜ್ ಜಮಾ ಅವರಿಗೆ, ಈ ಯೋಜನೆಯು ಆಯಾ ಸಮಯದಲ್ಲಿ ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಲಿಯುವ ಉತ್ತಮ ವೇದಿಕೆಯಾಗಿದೆ.

 

“ತರಬೇತಿ ಮತ್ತು ಪ್ರಾಯೋಗಿಕ ಅನುಭವದ ಮೂಲಕ ಗ್ರಾಹಕರೊಂದಿಗೆ ಹೇಗೆ ಸಂವಹನ ನಡೆಸಬೇಕು, ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಆಯಾ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನಾನು ಕಲಿತೆ. ಗ್ರಾಹಕರ ನಡವಳಿಕೆ ಮತ್ತು ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡಿರುವುದು, ನಾನು ಹೆಚ್ಚು ಸ್ಪಷ್ಟತೆಯಿಂದ ಮತ್ತು ಆತ್ಮವಿಶ್ವಾಸದಿಂದ ಜನರೊಂದಿಗೆ ಮಾತನಾಡಲು ಸಹಾಯ ಮಾಡಿದೆ” ಎಂದು ಅವರು ಹೇಳುತ್ತಾರೆ.

 

ಆದರೆ ಈ ವರ್ಷದ ಬ್ಯಾಚ್ ನಲ್ಲಿ ಜಾಗತಿಕ ಮಟ್ಟದ ಅನುಭವ ಹೊಂದಿರುವವರು ಜಾಸ್ತಿ ಇರುವುದು ವಿಶೇಷ. ಉದಾಹರಣೆಗೆ ಪುಣೆಯಲ್ಲಿ ತರಬೇತಿ ಪಡೆಯುತ್ತಿರುವ 26 ವರ್ಷದ ರಶ್ನೀತ್ ಕೌರ್ ಛಾಬ್ರಾ ಅವರು ಲಂಡನ್‌ ನ ಪ್ರತಿಷ್ಠಿತ ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನಲ್ಲಿ ‘ಬಯೋ- ಇಂಟಿಗ್ರೇಟೆಡ್ ಡಿಸೈನ್’ ವಿಷಯದಲ್ಲಿ ಆರ್ಕಿಟೆಕ್ಚರ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

 

ಅವರನ್ನು ಈ ರಿಟೇಲ್ ತರಬೇತಿ ಕುರಿತು ಕೇಳಿದಾಗ, ಇದು ಸಾಂಪ್ರದಾಯಿಕ ವೃತ್ತಿಜೀವನದ ಹಾದಿಯಲ್ಲದಿರಬಹುದು. ಆದರೆ ಇದು ಅತ್ಯಗತ್ಯವಾದ ಹೆಜ್ಜೆ ಎನ್ನುತ್ತಾರೆ.

 

 “ವಯಸ್ಸು, ಹಿನ್ನೆಲೆ ಮತ್ತು ಅನುಭವ – ಹೀಗೆ ವೈವಿಧ್ಯತೆಯಿಂದ ಕೂಡಿದ ಈ ಯೋಜನೆಯು ವ್ಯಾಪಾರವನ್ನು ಮಾನವೀಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು. ಭಾರತದಲ್ಲಿ, ರಿಟೇಲ್ ಕ್ಷೇತ್ರದಲ್ಲಿ ಸಂಬಂಧಗಳು ಮತ್ತು ಸಾಂಸ್ಕೃತಿಕ ತಿಳುವಳಿಕೆ ಬಹಳ ಮುಖ್ಯ. ಗ್ರಾಹಕರೊಂದಿಗೆ ನಂಬಿಕೆ ಮತ್ತು ವೈಯಕ್ತಿಕ ಬಾಂಧವ್ಯವನ್ನು ಬೆಳೆಸುವುದು ಇಲ್ಲಿ ಪ್ರಮುಖವಾದುದು, ಈ ಪಾಠವನ್ನು ನಾನು ಜಾಗತಿಕ ಮಾರುಕಟ್ಟೆಗಳಿಗೂ ಕೊಂಡೊಯ್ಯುತ್ತೇನೆ” ಎಂದು ಅವರು ಹೇಳಿದರು.

 

ಅವರ ಈ ಮಾತು ಇಂದು ಅನೇಕ ಯುವ ವೃತ್ತಿಪರರು ಕಂಡುಕೊಳ್ಳುತ್ತಿರುವ ಸತ್ಯ ಏನೆಂಬುದನ್ನು ಸಾರುತ್ತದೆ: ನಿಜವಾದ ಆತ್ಮವಿಶ್ವಾಸವು ಮಳಿಗೆಗಳಲ್ಲಿ ದೊರೆಯುತ್ತದೆಯೇ ಹೊರತು ತರಗತಿಯಲ್ಲಲ್ಲ. ಮೊದಲೇ ಸಿದ್ಧಪಡಿಸಿದ ಸಂಭಾಷಣೆಗಳಿಲ್ಲದ ಮಾತುಕತೆಗಳು, ನಾವು ಊಹಿಸಲಾಗದ ಆಕ್ಷೇಪಣೆಗಳು ಮತ್ತು ನಾವು ವಿರಾಮ ನೀಡಲಾಗದ ಒತ್ತಡದ ಸಂದರ್ಭಗಳನ್ನು ಎದುರಿಸಿದಾಗ ಮಾತ್ರ ಈ ಆತ್ಮವಿಶ್ವಾಸ ಬೆಳೆಯುತ್ತದೆ.

 

ಈ ಬ್ಯಾಚ್ ನಲ್ಲಿ ಸಿಡ್ನಿಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ತುಷಾರ್ ಅವರೂ ಇದ್ದಾರೆ. ಅವರ ಪಾಲ್ಗೊಳ್ಳುವಿಕೆಯು, ಕ್ಷೇತ್ರ ಅನುಭವವು ಕೇವಲ ಒಂದು ತಾತ್ಕಾಲಿಕ ವ್ಯವಸ್ಥೆಯಲ್ಲ, ಬದಲಿಗೆ ವೃತ್ತಿಜೀವನವನ್ನು ವೇಗವಾಗಿ ಮುನ್ನಡೆಸುವ ಒಂದು ತೀವ್ರಥರ ಶಕ್ತಿ ಎಂಬುದನ್ನು ಸಾರುತ್ತದೆ.

 

ವೈಯಕ್ತಿಕ ಕತೆಗಳನ್ನು ಹೊರತುಪಡಿಸಿ, ‘ದೋಸ್ತ್ ಸೇಲ್ಸ್’ ನಂತಹ ಕಾರ್ಯಕ್ರಮಗಳು ಇಂದು ಭಾರತದಲ್ಲಿ ‘ಉದ್ಯೋಗಾರ್ಹತೆ’ ಎಂಬುದರ ಅರ್ಥ ಹೇಗೆ ಬದಲಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತಿವೆ. ವಿವಿಧ ವಲಯಗಳ ಕಂಪನಿಗಳು “ಭವಿಷ್ಯಕ್ಕೆ ಸಜ್ಜಾದ ಪ್ರತಿಭೆಗಳ” ಬಗ್ಗೆ ಮಾತನಾಡುತ್ತವೆಯಾದರೂ, ಸವಾಲು ಮಾತ್ರ ಹಾಗೆಯೇ ಇದೆ. ಅನೇಕ ಪದವೀಧರರು ವಿದ್ಯಾರ್ಹತೆ ಹೊಂದಿದ್ದರೂ ಸಹ, ಅತಿಯಾದ ಒತ್ತಡವಿರುವ ಗ್ರಾಹಕ ವಾತಾವರಣಗಳು, ಸಾಧನೆ ಆಧಾರಿತ ಹುದ್ದೆಗಳು ಮತ್ತು ಸ್ಥಳದಲ್ಲೇ ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸುವ ಕಲೆಗೆ ಪೂರ್ಣವಾಗಿ ಸಿದ್ಧರಾಗಿರುವುದಿಲ್ಲ.

 

ಇಂಥಾ ಸಂದರ್ಭದಲ್ಲಿ ವ್ಯವಸ್ಥಿತ ರಿಟೇಲ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ದೊಡ್ಡ ಮಟ್ಟದ ಸಾಮಾಜಿಕ ಪರಿಣಾಮ ಬೀರಬಲ್ಲವು. ಇವು ಶಿಕ್ಷಣವನ್ನು ಅನುಭವವನ್ನಾಗಿ ಮತ್ತು ಆ ಅನುಭವವನ್ನು ಉತ್ತಮ ಅವಕಾಶವನ್ನಾಗಿ ಪರಿವರ್ತಿಸುತ್ತವೆ. ಅನೇಕ ಭಾರತೀಯ ಯುವಕರಿಗೆ, ಅದರಲ್ಲೂ ವಿಶೇಷವಾಗಿ ಅವರ ಕುಟುಂಬದ ಮೊದಲ ತಲೆಮಾರಿನ ವೃತ್ತಿಪರರಿಗೆ, ರಿಟೇಲ್ ಮಳಿಗೆಗಳು ಕೇವಲ ಕೆಲಸದ ಸ್ಥಳವಲ್ಲ, ಅದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ, ವೃತ್ತಿಜೀವನವು ಒಂದು ರೂಪ ಪಡೆಯುವ ಮತ್ತು ಅವರ ಮಹತ್ವಾಕಾಂಕ್ಷೆಗಳು ಪ್ರಾಯೋಗಿಕವಾಗಿ ಸಾಕಾರಗೊಳ್ಳುವ ಸ್ಥಳವಾಗಿದೆ.

 

*ಈ ಕುರಿತು ಮಾತನಾಡಿರುವ ಸ್ಯಾಮ್‌ ಸಂಗ್ ಸೌತ್‌ವೆಸ್ಟ್ ಏಷ್ಯಾದ ಸಿಎಸ್‌ಆರ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಶುಭಂ ಮುಖರ್ಜಿ ಅವರು,* “ಉದ್ಯಮದಲ್ಲೇ ಮೊದಲ ಬಾರಿಗೆ ಎನ್ನಬಹುದಾದ ಐದು ತಿಂಗಳ ತರಬೇತಿ ಅವಧಿಯ ಸ್ಯಾಮ್‌ಸಂಗ್ ದೋಸ್ತ್ ಕಾರ್ಯಕ್ರಮವು ರಿಟೇಲ್ ವಲಯದಲ್ಲಿ ತಕ್ಷಣ ಕೆಲಸಕ್ಕೆ ಸಜ್ಜಾಗಿರುವ ಪ್ರತಿಭೆಗಳ ಕೊರತೆಯನ್ನು ನೀಗಿಸುತ್ತಿದೆ. ಈ ವರ್ಷ ದಾಖಲಾತಿಯಲ್ಲಿ ಕಂಡುಬಂದ ಭಾರಿ ಏರಿಕೆ ಮತ್ತು ಜಾಗತಿಕ ಶಿಕ್ಷಣದ ಹಿನ್ನೆಲೆ ಇರುವ ಅಭ್ಯರ್ಥಿಗಳ ಪಾಲ್ಗೊಳ್ಳುವಿಕೆಯು ಈ ಕಾರ್ಯಕ್ರಮದ ಹೆಚ್ಚುತ್ತಿರುವ ಪ್ರಸ್ತುತತೆಯನ್ನು ಸಾರುತ್ತದೆ. ಡಿಜಿಟಲ್ ರೂಪಾಂತರವು ರಿಟೇಲ್ ರಂಗವನ್ನು ಮರುರೂಪಿಸುತ್ತಿರುವ ಈ ಸಮಯದಲ್ಲಿ, ಭವಿಷ್ಯಕ್ಕೆ ಸಜ್ಜಾದ ನೈಪುಣ್ಯ ಹೊಂದಿದ ಕಾರ್ಯಪಡೆಯನ್ನು ನಿರ್ಮಿಸಲು ದೋಸ್ತ್ ಸಹಾಯ ಮಾಡುತ್ತಿದೆ” ಎಂದು ತಿಳಿಸಿದರು.

 

ಭಾರತದ ಸಂಘಟಿತ ರಿಟೇಲ್ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವಂತೆ, ಉತ್ಪನ್ನದ ಜ್ಞಾನ ಮತ್ತು ಗ್ರಾಹಕರಲ್ಲಿ ನಂಬಿಕೆ ಮೂಡಿಸುವ ಕಲೆ ಎರಡನ್ನೂ ಹೊಂದಿರುವ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಇಂದು ಜಾಗತಿಕ ಶಿಕ್ಷಣ ಪಡೆದ ಹೆಚ್ಚಿನ ಸಂಖ್ಯೆಯ ಭಾರತೀಯ ಯುವಪೀಳಿಗೆಗೆ, ತಳಮಟ್ಟದಿಂದ ವೃತ್ತಿಜೀವನ ಆರಂಭಿಸುವುದು ಇನ್ನು ಮುಂದೆ “ಸಣ್ಣ ಕೆಲಸ” ಎಂದು ಅನಿಸುತ್ತಿಲ್ಲ.

 

ಬದಲಾಗಿ, ಇದು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗಿ ಕಾಣುತ್ತಿದೆ. ಏಕೆಂದರೆ ಇಂದಿನ ಆರ್ಥಿಕತೆಯಲ್ಲಿ, ಕೇವಲ ಹುದ್ದೆಯ ಹೆಸರಿನಿಂದ ಕಲಿಯುವುದಕ್ಕಿಂತ ವೇಗವಾಗಿ ಕಲಿಯುವ ದಾರಿ ಇನ್ನೊಂದಿಲ್ಲ. ಕೆಲವೊಮ್ಮೆ, ಆ ಕಲಿಕೆಯು ಒಬ್ಬೊಬ್ಬರೇ ಗ್ರಾಹಕರನ್ನು ನಿರ್ವಹಿಸಿ ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳುವ ಮೂಲಕ ಆರಂಭವಾಗುತ್ತದೆ.

Previous Post

ಕರಾವಳಿ ರೈತರಿಂದ ಪೇರಳೆ ಕೃಷಿಯಲ್ಲಿ ಹೊಸ ಪ್ರಯತ್ನ – ಹವಾಮಾನದ ಸವಾಲುಗಳನ್ನು ಮೀರಿಸಿ ಯಶಸ್ಸು..!

Next Post

ಬೆಂಗಳೂರು ಹಾಗೂ ರಾಜ್ಯಾದ್ಯಂತ ಚಿನ್ನ-ಬೆಳ್ಳಿ ಬೆಲೆ ಏರಿಕೆ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬೆಂಗಳೂರು ಹಾಗೂ ರಾಜ್ಯಾದ್ಯಂತ ಚಿನ್ನ-ಬೆಳ್ಳಿ ಬೆಲೆ ಏರಿಕೆ…!!

ಬೆಂಗಳೂರು ಹಾಗೂ ರಾಜ್ಯಾದ್ಯಂತ ಚಿನ್ನ-ಬೆಳ್ಳಿ ಬೆಲೆ ಏರಿಕೆ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026

Recent News

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved