ಉಡುಪಿ ಅಂಚೆ ಕಚೇರಿ ಸಮೀಪದ ಶ್ರೀರಾಮ್ ರೆಸಿಡೆನ್ಸಿ ಎದುರಿನ ರಸ್ತೆಯಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಕಾರೊಂದು ಅಂಗಡಿಗೆ ಢಿಕ್ಕಿ ಹೊಡೆದು ಒಳಗಿದ್ದ ಸೊತ್ತುಗಳಿಗೆ ಹಾನಿ ಉಂಟಾದ ಘಟನೆ ನಡೆದಿದೆ. ಆರೋಪಿ ಸಂದೀಪ್ ಎಂಬಾತ ಚಾಲನೆ ಮಾಡುತ್ತಿದ್ದ ಕಾರು, ರಂಜನ್ ಕಲ್ಕೂರ ಅವರಿಗೆ ಸೇರಿದ ‘ಕಲ್ಕೂರ ರೆಫ್ರಿಜರೇಷನ್ ಮತ್ತು ಕಿಚನ್ ಇಕ್ವಿಪ್‌ಮೆಂಟ್ಸ್’ ಅಂಗಡಿಗೆ ನುಗ್ಗಿದೆ. ಪರಿಣಾಮ ಅಂಗಡಿಯಲ್ಲಿದ್ದ ವಿವಿಧ ಉಪಕರಣಗಳು ಹಾನಿಗೀಡಾಗಿವೆ.
ಪರಿಣಾಮ ಅಂಗಡಿಯ ಶೆಟರ್ ಹಾಗೂ ಇತರ ವಸ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬ್ರಹ್ಮಾವರದ ಸವಿಕರ ಶೆಟ್ಟಿ ನೀಡಿದ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






