*ಲಿವ್‌ಪ್ಯೂರ್‌ನ ಭೌತಿಕ ರೀಟೇಲ್ ಮಾರುಕಟ್ಟೆ ವಿಸ್ತರಣೆ; ಸ್ಮಾರ್ಟ್ ಹೋಮ್ ಉತ್ಪನ್ನಗಳ ಲಭ್ಯತೆ ಹೆಚ್ಚಳ*
• ಈ ಹೊಸ ಮಳಿಗೆಯು ಗ್ರಾಹಕರಿಗೆ ಲಿವ್‌ಪ್ಯೂರ್‌ನ ನೀರು, ಗಾಳಿ ಮತ್ತು ಅಡುಗೆಮನೆ ವಿಭಾಗಗಳ ನವೀನ ಉತ್ಪನ್ನಗಳನ್ನು ನೇರವಾಗಿ ನೋಡಿ, ತಿಳಿದು ಖರೀದಿಸಲು ಅವಕಾಶ ನೀಡುತ್ತದೆ.
• ಈ ಹೊಸ ಮಳಿಗೆ ಉದ್ಘಾಟನೆ ಮೂಲಕ ಲಿವ್‌ಪ್ಯೂರ್ ಸಂಸ್ಥೆಯು ಗ್ರಾಹಕರ ನಂಬಿಕೆ ಗಳಿಕೆ ಮತ್ತು ನೇರ ಅನುಭವ ಆಧಾರಿತ ವ್ಯಾಪಾರವು ಪ್ರಮುಖ ಪಾತ್ರ ವಹಿಸುವ ಅಗಾಧ ಸಾಮರ್ಥ್ಯವಿರುವ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿದೆ.
ಬೆಂಗಳೂರು, ಕರ್ನಾಟಕ, 27 ಜನವರಿ 2026: ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಗಳಲ್ಲಿ ಒಂದಾದ ಲಿವ್‌ಪ್ಯೂರ್, ಇಂದು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಹೊಸ ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್ ಅನ್ನು ಉದ್ಘಾಟಿಸಿದೆ. ಈ ಹೊಸ ಮಳಿಗೆಯು ಲಿವ್‌ಪ್ಯೂರ್‌ನ ಸ್ಮಾರ್ಟ್, ಅನುಕೂಲಕರ ಮತ್ತು ಆರೋಗ್ಯ ಕೇಂದ್ರಿತ ಗೃಹೋತ್ಪನ್ನಗಳನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗಿಸಲಿದೆ. ಅಲ್ಲದೆ, ಕುಟುಂಬಗಳು ಮಳಿಗೆಗೆ ಭೇಟಿ ನೀಡಿ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಆತ್ಮವಿಶ್ವಾಸದಿಂದ ಸೂಕ್ತ ಆಯ್ಕೆ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರವು ತಂತ್ರಜ್ಞಾನ ಆಧಾರಿತ ಜೀವನಶೈಲಿ ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಈ ಹಿನ್ನೆಲೆಯಲ್ಲಿ, ಪ್ರಮುಖ ಮಹಾನಗರಗಳಲ್ಲಿ ತನ್ನ ಮಾರುಕಟ್ಟೆಯನ್ನು ಬಲಪಡಿಸುವ ಲಿವ್‌ಪ್ಯೂರ್‌ನ ಉದ್ದೇಶಕ್ಕೆ ಈ ಹೊಸ ಮಳಿಗೆ ಹೆಚ್ಚಿನ ಶಕ್ತಿ ನೀಡಿದೆ. ಈಗಾಗಲೇ 6 ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್ ಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿರುವ ಸಂಸ್ಥೆಯು, ಈ ಹೊಸ ಮಳಿಗೆಯ ಮೂಲಕ ತನ್ನ ರೀಟೇಲ್ ವಿಸ್ತರಣಾ ಕಾರ್ಯತಂತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಗ್ರಾಹಕರು ಉತ್ಪನ್ನಗಳನ್ನು ನೇರವಾಗಿ ನೋಡಿ ಮಾಹಿತಿ ಪಡೆಯುವುದು, ಪಾರದರ್ಶಕ ಸಂವಹನ ಮತ್ತು ಮೌಲ್ಯಯುತ ಖರೀದಿಗೆ ಈ ಮಳಿಗೆ ಸಹಕಾರಿಯಾಗಲಿದೆ.
*ಈ ಸಂದರ್ಭದಲ್ಲಿ ಮಾತನಾಡಿದ ಲಿವ್‌ಪ್ಯೂರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಕೇಶ್ ಕೌಲ್ ಅವರು* , “ಬೆಂಗಳೂರಿನಲ್ಲಿ ನಮ್ಮ ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್ ಪ್ರಾರಂಭಿಸಿರುವುದು ಭಾರತದ ಅತ್ಯಂತ ಕ್ರಿಯಾಶೀಲ ಮತ್ತು ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವ ನಗರ ಮಾರುಕಟ್ಟೆಗಳಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುವ ಬದ್ಧತೆಯನ್ನು ತೋರಿಸುತ್ತದೆ. ಬೆಂಗಳೂರಿನ ಗ್ರಾಹಕರು ತಂತ್ರಜ್ಞಾನ, ಕ್ಷೇಮ ಮತ್ತು ವಿವೇಕಯುಕ್ತ ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಮ್ಮ ಈ ಮಳಿಗೆಯು ಗ್ರಾಹಕರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿ ಅವರು ನಮ್ಮ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ವೀಕ್ಷಿಸಬಹುದು, ಸ್ಮಾರ್ಟ್ ಉತ್ಪನ್ನಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ದೈನಂದಿನ ಜೀವನವನ್ನು ಉತ್ತಮಗೊಳಿಸುವ ಉತ್ತಮ ಆಯ್ಕೆಗಳನ್ನು ಮಾಡಬಹುದು” ಎಂದು ಹೇಳಿದರು.
‘ತಂತ್ರಜ್ಞಾನದ ಮೂಲಕ ಯೋಗಕ್ಷೇಮ’ ಎಂಬ ತನ್ನ ತತ್ವಕ್ಕೆ ಬದ್ಧವಾಗಿರುವ ಲಿವ್‌ಪ್ಯೂರ್, ಬೆಂಗಳೂರಿನ ಈ ಹೊಸ ಮಳಿಗೆಯಲ್ಲಿ ಎಐ ಮತ್ತು ಐಓಟಿ ತಂತ್ರಜ್ಞಾನ ಆಧಾರಿತ ಅತ್ಯುತ್ತಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಬ್ರ್ಯಾಂಡ್‌ನ ‘ಮೇಂಟೆನೆನ್ಸ್ ಫ್ರೀ’ ವಾಟರ್ ಪ್ಯೂರಿಫೈಯರ್ ಶ್ರೇಣಿ, ಧ್ವನಿ ಆಧಾರಿತ ಚಿಮಣಿಗಳು ಮತ್ತು ಸುಸ್ಥಿರ ಜೀವನಶೈಲಿಗೆ ಪೂರಕವಾದ ಇಂಧನ ದಕ್ಷತೆಯ ಸ್ಮಾರ್ಟ್ ಉಪಕರಣಗಳು ಸೇರಿವೆ. ಭೇಟಿ ನೀಡುವ ಗ್ರಾಹಕರು ಉತ್ಪನ್ನಗಳ ನೇರ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬಹುದು ಮತ್ತು ತರಬೇತಿ ಪಡೆದ ತಜ್ಞರಿಂದ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ನಂಬಿಕೆಯನ್ನು ಬೆಳೆಸುವಲ್ಲಿ ಭೌತಿಕ ರೀಟೇಲ್ ಮಳಿಗೆಗಳು ಇಂದಿಗೂ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಲಿವ್‌ಪ್ಯೂರ್ ತನ್ನ ಮಾರುಕಟ್ಟೆ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸಲು ಯೋಜಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಪ್ರಮುಖ ನಗರಗಳಲ್ಲಿ 30 ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಔಟ್ ಲೆಟ್ ಗಳನ್ನು ತೆರೆಯುವ ಗುರಿಯನ್ನು ಕಂಪನಿ ಹೊಂದಿದ್ದು, ಆ ಮೂಲಕ ತನ್ನ ಆರೋಗ್ಯ ಕೇಂದ್ರಿತ ಉತ್ಪನ್ನಗಳನ್ನು ಹೆಚ್ಚಿನ ಭಾರತೀಯ ಕುಟುಂಬಗಳಿಗೆ ತಲುಪಿಸಲು ನಿರ್ಧರಿಸಿದೆ.







