ಜನವರಿ 25:ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಮತ್ತೆ ಆತಂಕ ಮೂಡಿಸುತ್ತಿವೆ. ಜನವರಿ 23ರ ಶುಕ್ರವಾರ ತಡರಾತ್ರಿ, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಅವರನ್ನು ಗ್ಯಾರೇಜ್‌ನೊಳಗೆ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ವರದಿಯಾಗಿದೆ.
ಸ್ಥಳೀಯರ ಮಾಹಿತಿಯಂತೆ, ನರಸಿಂಗ್ಡಿ ಪೊಲೀಸ್ ಲೈನ್ಸ್ ಸಮೀಪದ ಮಸೀದಿ ಪ್ರದೇಶದಲ್ಲಿರುವ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್ ಭೌಮಿಕ್, ಎಂದಿನಂತೆ ಕೆಲಸ ಮುಗಿಸಿ ಗ್ಯಾರೇಜ್ ಒಳಗೇ ಮಲಗಿದ್ದ. ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾರೇಜ್‌ನ ಶಟರ್ ಅನ್ನು ಹೊರಗಿನಿಂದ ಮುಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಕೃತ್ಯ ಪೂರ್ವನಿಯೋಜಿತವಾಗಿ ನಡೆದಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ
ಗ್ಯಾರೇಜ್ ಒಳಗೆ ಸಿಲುಕಿದ್ದ ಭೌಮಿಕ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ಘಟನೆ ನಡೆಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ಗಂಟೆಯ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಭೌಮಿಕ್ ಅವರ ಸುಟ್ಟ ದೇಹವನ್ನು ಗ್ಯಾರೇಜ್ ಒಳಗಿನಿಂದ ಹೊರತೆಗೆದುಕೊಳ್ಳಲಾಗಿದೆ.