ಮಂಗಳೂರು ಜನವರಿ,23 : ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ವೇಳೆ(2016ರಲ್ಲಿ) ತೆರವುಗೊಳಿಸಲಾಗಿದ್ದು, ಈಗ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮರು ಸ್ಥಾಪಿಸಲಾದ ಕಲಶವನ್ನು ಜನವರಿ 24 ರ ಶನಿವಾರ ಸಂಜೆ 5.30 ಕ್ಕೆ ಉದ್ಘಾಟನೆಗೊಳ್ಳಲಿದೆ…
ಹಿಂದೆ ನಗರದ ಪ್ರಮುಖ ಗುರುತಾಗಿದ್ದ ಪಂಪ್‌ವೆಲ್ ಕಲಶದ ಮರು ಸ್ಥಾಪನೆ ಕಾರ್ಯವು ಕಳೆದ ಕೆಲವು ತಿಂಗಳುಗಳಿಂದ ಪ್ರಗತಿಯಲ್ಲಿದ್ದು. 2016 ರಲ್ಲಿ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ತೆಗೆದುಹಾಕಲ್ಪಟ್ಟ ಈ ಕಲಶವನ್ನು ಮತ್ತೆ ಮರು ಸ್ಥಾಪನೆ ಮಾಡಲಾಗಿದೆ.
ಕಳೆದ ವರ್ಷ ಅಕ್ಟೋಬರ್ 25 ರಂದು ಜೀರ್ಣೋದ್ಧಾರ ಪ್ರಕ್ರಿಯೆ ಪ್ರಾರಂಭವಾಯಿತು. ಜೈನ ಸಮಾಜದ ಮೇಲ್ವಿಚಾರಣೆಯಲ್ಲಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.






