Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ರಾಜ್ಯಪಾಲರ ವಿರುದ್ಧ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರ ಗೂoಡಾಗಿರಿ ಖಂಡನೀಯ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ

Dhrishya News by Dhrishya News
23/01/2026
in ಸುದ್ದಿಗಳು
0
ರಾಜ್ಯಪಾಲರ ವಿರುದ್ಧ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರ ಗೂoಡಾಗಿರಿ ಖಂಡನೀಯ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ
0
SHARES
11
VIEWS
Share on FacebookShare on Twitter

ಉಡುಪಿ: ಜನವರಿ 23:ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣಕ್ಕಾಗಿಯೇ ಕಾಂಗ್ರೆಸ್ ಸರಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರು ನಡೆಸಿರುವ ಗೂoಡಾಗಿರಿ ಖಂಡನೀಯ. ಈ ಹೀನಾಯ ಘಟನೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಸಂವಿಧಾನ ವಿರೋಧಿ ನಡೆಯಿಂದ ರಾಜ್ಯಪಾಲರನ್ನು ಅವಮಾನಿಸಿರುವ ಕಾಂಗ್ರೆಸ್ ಸಚಿವರು ಮತ್ತು ಶಾಸಕರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಸದನದಲ್ಲಿ ರಾಜ್ಯಪಾಲರ ವಿರುದ್ಧವೇ ಗೂಂಡಾ ವರ್ತನೆ ಪ್ರದರ್ಶಿಸುವ ಮೂಲಕ ಕಾಂಗ್ರೆಸಿಗರು ಸಂವಿಧಾನದ ಆಶಯಗಳಿಗೆ ಘನ ಘೋರ ಅಪಚಾರವೆಸಗಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಡವರ ಪರವಾದ ಸುಧಾರಿತ ಕೇಂದ್ರ ಸರಕಾರದ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಗೂಂಡಾಗಿರಿಯ ಮೂಲಕ ಅಧಿವೇಶನದ ಘನತೆಯನ್ನು ಹಾಳು ಮಾಡಿರುವುದು ಅಕ್ಷಮ್ಯ.

125 ದಿನಗಳ ಉದ್ಯೋಗ ಖಾತರಿ ಎಂಬುದು ಸಂಸತ್ತಿನ ಕಾನೂನು. 60:40 ಅನುಪಾತವು ರಾಜ್ಯದ ಮೇಲೆ ಹೊರೆಯಲ್ಲ, ಬದಲಾಗಿ ಹಳ್ಳಿಯ ಅಭಿವೃದ್ಧಿಗೆ ಮಾಡುವ ಹೂಡಿಕೆಯಾಗಿದೆ.

ಕಾಂಗ್ರೆಸ್ಸಿಗರು ‘ರೋಜ್‌ಗಾರ್‌’ ಯೋಜನೆಯನ್ನು ‘ನರೇಗಾ’ ಎಂದು ಬದಲಾಯಿಸಿ, ನಂತರ ಅದನ್ನು ‘ಮನ್ರೇಗಾ’ ಎಂದು ಪುನರ್ ನಾಮಕರಣ ಮಾಡಿದ್ದರು. ‘ವಿಬಿ-ಜಿ ರಾಮ್‌ ಜಿ’ ಯೋಜನೆಯಡಿ ‘ವಿಕಸಿತ ಗ್ರಾಮ ಪಂಚಾಯತ್ ಪ್ಲಾನ್’ ಮೂಲಕ ಪಂಚಾಯತ್‌ಗಳೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತವೆ. ತಂತ್ರಜ್ಞಾನ ಬಳಸಿ ಭ್ರಷ್ಟಾಚಾರಕ್ಕೆ ತಡೆ ಹಾಕಲಾಗುತ್ತದೆ.   

ಕಾಂಗ್ರೆಸ್ ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ಉದಾತ್ತ ಯೋಜನೆಯನ್ನು ವಿರೋಧಿಸುವ ಜೊತೆಗೆ ಬಡತನ ಮುಕ್ತ ಮತ್ತು ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ದಿಕ್ಕಿನಲ್ಲಿ ಸದಾ ಅಡ್ಡಗಾಲು ಹಾಕುತ್ತಿರುವುದು ಜನಜನಿತವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಅಭಿವೃದ್ಧಿ ವಿರೋಧಿ, ಜನ ವಿರೋಧಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಪುನರಾರಂಭಕ್ಕೆ ಹೈಕೋರ್ಟ್ ಅಸ್ತು..!!

Next Post

ನಾಳೆ ಮಂಗಳೂರಿಗೆ ಮುಕುಟವಾದ ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿರುವ ‘ಕಳಸ’ ಉದ್ಘಾಟನೆ ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನಾಳೆ ಮಂಗಳೂರಿಗೆ ಮುಕುಟವಾದ ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿರುವ ‘ಕಳಸ’ ಉದ್ಘಾಟನೆ ..!

ನಾಳೆ ಮಂಗಳೂರಿಗೆ ಮುಕುಟವಾದ ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿರುವ 'ಕಳಸ’ ಉದ್ಘಾಟನೆ ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026

Recent News

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved