Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಈ ಚಳಿಗಾಲದಲ್ಲಿ ಫ್ಲೂ ಮತ್ತು ನ್ಯುಮೋನಿಯಾದಿಂದ ದೂರವಿರಲು 5 ಸಲಹೆಗಳು..!!

Dhrishya News by Dhrishya News
21/01/2026
in ಆರೋಗ್ಯ
0
ಈ ಚಳಿಗಾಲದಲ್ಲಿ ಫ್ಲೂ ಮತ್ತು ನ್ಯುಮೋನಿಯಾದಿಂದ ದೂರವಿರಲು 5 ಸಲಹೆಗಳು..!!
0
SHARES
35
VIEWS
Share on FacebookShare on Twitter

ಜನವರಿ 21:ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಫ್ಲೂ ಹಾಗೂ ನ್ಯುಮೋನಿಯಾದಂತಹ ಸೋಂಕುಗಳು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ಇರುವವರಲ್ಲಿ ಯಾರಾದರೊಬ್ಬರು ಕೆಮ್ಮು, ಶೀತದಿಂದ ಬಳಲುತ್ತಿರುವುದನ್ನು ನೀವು ಗಮನಿಸಿರಬಹುದು ಅಥವಾ ನೀವೇ ಆ ಬಾಧೆಗೆ ಒಳಗಾಗಿರಬಹುದು. ಅದು ಯಾಕೆಂದರೆ ಶೀತ ವಾತಾವರಣದಲ್ಲಿ ವೈರಸ್‌ಗಳ ಹರಡುವಿಕೆ ಸುಲಭ. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಜನರು ಕಾಯಿಲೆಗೆ ತುತ್ತಾಗಬಹುದು. ಹಾಗಂತ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಆಗಾಗ್ಗೆ ಕೈ ತೊಳೆಯುವುದು, ಉತ್ತಮ ಆಹಾರ ಸೇವನೆ ಮತ್ತು ದೇಹವನ್ನು ಬೆಚ್ಚಗಿರಿಸಿಕೊಳ್ಳುವಂತಹ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನು ಈ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.

ಅನೇಕ ಲಕ್ಷಣಗಳು ಒಂದೇ ರೀತಿ ಇರುವುದರಿಂದ, ಅದು ಸಾಮಾನ್ಯ ಫ್ಲೂ ಅಥವಾ ಅದಕ್ಕಿಂತ ಗಂಭೀರವಾದ ಕಾಯಿಲೆಯೇ ಎಂದು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಜ್ವರ, ಕೆಮ್ಮು, ಆಯಾಸ, ಗಂಟಲು ನೋವು, ಮೈಕೈ ನೋವು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ಫ್ಲೂ ಅಥವಾ ನ್ಯುಮೋನಿಯಾದಂತಹ ಉಸಿರಾಟದ ಸೋಂಕಿನ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಮುಂದುವರಿದರೆ ಅಥವಾ ಉಲ್ಬಣಗೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ದೆಹಲಿಯ ಡಾ. ಅರುಣ್ ವಾಧ್ವಾ ಕ್ಲಿನಿಕ್‌ನ ಮಕ್ಕಳ ತಜ್ಞರಾದ ಎಂಬಿಬಿಎಸ್, ಎಂಡಿ ಡಾ. ಅರುಣ್ ವಾಧ್ವಾ ಅವರು ಈ ಅವಧಿಯಲ್ಲಿ ನಿಖರವಾಗಿ ರೋಗನಿರ್ಣಯ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ. ಈ ಕುರಿತು ವಿವರವಾಗಿ ಮಾತನಾಡುವ ಅವರು, “ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರುವಾಗ, ಚೇತರಿಸಿಕೊಳ್ಳಲು ಮತ್ತು ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಲು ಸರಿಯಾಗಿ ರೋಗನಿರ್ಣಯ ಮಾಡುವುದು ಬಹಳ ಮುಖ್ಯ. ನಿಮಗೆ ಅನಾರೋಗ್ಯ ಅನ್ನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ” ಎಂದು ಹೇಳಿದರು.

*ಸಕಾಲಿಕ ತಪಾಸಣೆಯ ಅಗತ್ಯತೆ*

ನಮ್ಮ ಆಧುನಿಕ ಕಾಲದ ವೇಗದ ಜೀವನದಲ್ಲಿ, ಯಾರೂ ಅನಾರೋಗ್ಯದಿಂದ ಮನೆಯಲ್ಲಿ ಕೂರಲು ಬಯಸುವುದಿಲ್ಲ. ಇಲ್ಲಿ ‘ ರ‍್ಯಾಪಿಡ್ ಟೆಸ್ಟಿಂಗ್’ (ತ್ವರಿತ ತಪಾಸಣೆ) ಪ್ರಮುಖ ಪಾತ್ರ ವಹಿಸುತ್ತದೆ, ಈ ತಪಾಸಣೆ ಫ್ಲೂ ಮತ್ತು ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆಗಳನ್ನು ಪತ್ತೆಹಚ್ಚಲು ತ್ವರಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.

*ಅಬಾಟ್ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಸೋನು ಭಟ್ನಾಗರ್ ಅವರು ಸಕಾಲಿಕ ತಪಾಸಣೆಯ ಮಹತ್ವದ ಕುರಿತು ಮಾತನಾಡಿ,* “ಉಸಿರಾಟದ ಸೋಂಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತ್ವರಿತ ತಪಾಸಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ವಿವಿಧ ಉಸಿರಾಟದ ಕಾಯಿಲೆಗಳಿಗೆ ತ್ವರಿತ ತಪಾಸಣಾ ಆಯ್ಕೆಗಳು ಲಭ್ಯವಿದ್ದು, ಇವು ವೇಗವಾದ ಮತ್ತು ನಿಖರವಾದ ರೋಗನಿರ್ಣಯಕ್ಕೆ ಸಹಾಯ ಮಾಡುತ್ತವೆ” ಎಂದು ಹೇಳಿದರು. 

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ತೆಗೆದುಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಇಲ್ಲಿವೆ:

*1. ತಪಾಸಣೆ ಮಾಡಿಸಿಕೊಳ್ಳಿ:* ನಿಮಗೆ ಯಾವ ಕಾರಣಕ್ಕೆ ಅನಾರೋಗ್ಯ ಉಂಟಾಗುತ್ತಿದೆ ಎಂದು ತಿಳಿಯುವುದು ಗುಣಮುಖರಾಗಲು ಮೊದಲ ಹೆಜ್ಜೆಯಾಗಿದೆ. ನಿಮಗೆ ಉಸಿರಾಟದ ಸೋಂಕಿನ ಲಕ್ಷಣಗಳಿದ್ದರೆ, ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ತ್ವರಿತ ತಪಾಸಣೆ ಮಾಡಿ. ರ‍್ಯಾಪಿಡ್ ಟೆಸ್ಟ್‌ ಗಳು ತ್ವರಿತ ಉತ್ತರಗಳನ್ನು ನೀಡುತ್ತವೆ. ಇದರಿಂದ ವೈದ್ಯರು ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡಲು ಮತ್ತು ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

*2. ನಿಮ್ಮ ಸ್ಥಿತಿಯನ್ನು ಗಮನಿಸುತ್ತಿರಿ:* ನಿಮ್ಮ ರೋಗ ಲಕ್ಷಣಗಳು ಮತ್ತು ಅವುಗಳ ತೀವ್ರತೆಯ ಮೇಲೆ ನಿಗಾ ಇಡಿ. ನಿಮ್ಮ ಜ್ವರ ಹೆಚ್ಚಾಗುತ್ತಿದ್ದರೆ ಅಥವಾ ಪರಿಸ್ಥಿತಿ ಹದಗೆಡುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

*3. ಚಿಕಿತ್ಸೆ ಪಡೆಯಿರಿ:* ಆರಂಭಿಕ ಹಂತದಲ್ಲಿ ಸೂಕ್ತ ರೋಗನಿರ್ಣಯ ಮಾಡಿದರೆ ನೀವು ತಕ್ಷಣ ಚಿಕಿತ್ಸೆಯನ್ನು ಪಡೆಯಬಹುದು. ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳ ಸಂಪೂರ್ಣ ಕೋರ್ಸ್ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವುದು ಅವಶ್ಯ.

*4. ನಿಮ್ಮ ಬಗ್ಗೆ ಕಾಳಜಿ ವಹಿಸಿ:* ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಚೆನ್ನಾಗಿ ನಿದ್ರೆ ಮಾಡಿ. ಒತ್ತಡವಿಲ್ಲದೆ ಇರುವುದನ್ನು ರೂಢಿಸಿಕೊಳ್ಳಿ, ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಿ. ಉದಾಹರಣೆಗೆ ನೀರು, ಎಳನೀರು ಅಥವಾ ತಾಜಾ ಜ್ಯೂಸ್ ಕುಡಿಯುತ್ತಿರಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

*5. ಮನೆಯಲ್ಲೇ ಇರಿ:* ನಿಮಗೆ ಅನಾರೋಗ್ಯದ ಲಕ್ಷಣಗಳಿದ್ದರೆ, ನೀವು ವಿಶ್ರಾಂತಿ ಪಡೆಯಲು ಮತ್ತು ಗುಣಮುಖರಾಗಲು ಮನೆಯಲ್ಲಿಯೇ ಇರಿ, ಇತರರಿಂದ ದೂರವಿರಿ. ಇದರಿಂದ ಸೋಂಕು ಇತರ ಜನರಿಗೆ ಹರಡದಂತೆ ತಡೆಯಲು ಸಹಾಯವಾಗುತ್ತದೆ.

ಚಳಿ ಹೆಚ್ಚಿರುವುದರಿಂದ ಹೆಚ್ಚು ಜಾಗರೂಕರಾಗಿರುವುದು ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಆರೋಗ್ಯವಾಗಿದ್ದಾಗ ಕೈ ತೊಳೆಯುವುದು, ಕಿಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಅಂತರವನ್ನು ಕಾಯ್ದುಕೊಳ್ಳುವಂತಹ ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಫ್ಲೂ ಮತ್ತು ನ್ಯುಮೋನಿಯಾ ಲಸಿಕೆಗಳು ರಕ್ಷಣೆ ಪಡೆಯಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿವೆ. ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಚಳಿಗಾಲದಲ್ಲಿ ಸುರಕ್ಷಿತವಾಗಿ ಇರಬಹುದು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಕೂಡ ಆರೋಗ್ಯವಾಗಿಡಬಹುದು. ನಿಮಗೆ ಚಳಿಗಾಲದ ಬೆಚ್ಚಗಿನ ಶುಭ ಹಾರೈಕೆಗಳು!

Previous Post

ಸುದೀರ್ಘ ಬಾಹ್ಯಾಕಾಶ ಸೇವೆಯಿಂದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ..!!

Next Post

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಹೊತ್ತಿ ಉರಿದ ಮತ್ತೊಂದು ಖಾಸಗಿ ಬಸ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಹೊತ್ತಿ ಉರಿದ ಮತ್ತೊಂದು ಖಾಸಗಿ ಬಸ್..!!

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಹೊತ್ತಿ ಉರಿದ ಮತ್ತೊಂದು ಖಾಸಗಿ ಬಸ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026

Recent News

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved